

Team Udayavani, May 27, 2024, 11:05 PM IST
ಕಿಂಗ್‌ಸ್ಟನ್: ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥೇಯ ನಾಡಾದ ವೆಸ್ಟ್ ಇಂಡೀಸ್ ಅತ್ಯುತ್ತಮ ತಾಲೀಮು ಮಾಡಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ.
ಕಿಂಗ್‌ಸ್ಟನ್‌ನಲ್ಲಿ ಆಡಲಾದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ದಕ್ಷಿಣ ಆಫ್ರಿಕಾ 7 ವಿಕೆಟಿಗೆ 163 ರನ್ ಮಾಡಿದರೆ, ಕೆರಿಬಿಯನ್ ಪಡೆ ಕೇವಲ 13.5 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 165 ರನ್ ಬಾರಿಸಿತು.
ನಾಯಕ ಬ್ರ್ಯಾಂಡನ್ ಕಿಂಗ್ (44) ಮತ್ತು ಜಾನ್ಸನ್ ಚಾರ್ಲ್ಸ್ (69) ಆರಂಭಿಕ ವಿಕೆಟಿಗೆ 6.4 ಓವರ್‌ಗಳಲ್ಲಿ 92 ರನ್ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರು. ಕೈಲ್ ಮೇಯರ್ 36 ರನ್ ಮಾಡಿ ಅಜೇಯರಾಗಿ ಉಳಿದರು. ಚಾರ್ಲ್ಸ್ 5, ಕಿಂಗ್ ಮತ್ತು ಮೇಯರ್ ತಲಾ 4 ಸಿಕ್ಸರ್ ಸಿಡಿಸಿ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದರು. ಆರಂಭಿಕರಿಂದ ಒಟ್ಟು 11 ಬೌಂಡರಿ ಬಿತ್ತು.ದಕ್ಷಿಣ ಆಫ್ರಿಕಾ ಪರ ನಾಯಕ ವಾನ್ ಡರ್ ಡುಸೆನ್ 51, ವಿಯಾನ್ ಮುಲ್ಡರ್ 36 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-7 ವಿಕೆಟಿಗೆ 163 (ಡುಸೆನ್ 51, ಮುಲ್ಡರ್ 36, ಡಿ ಕಾಕ್ 19, ಮೆಕಾಯ್ 39ಕ್ಕೆ 3, ಮೋಟಿ 21ಕ್ಕೆ 2, ಶಮರ್ ಜೋಸೆಫ್ 26ಕ್ಕೆ 2). ವೆಸ್ಟ್ ಇಂಡೀಸ್-13.5 ಓವರ್‌ಗಳಲ್ಲಿ 2 ವಿಕೆಟಿಗೆ 165 (ಚಾರ್ಲ್ಸ್ 69, ಕಿಂಗ್ 44, ಮೇಯರ್ ಔಟಾಗದೆ 36, ಪೀಟರ್ 27ಕ್ಕೆ 1). ಪಂದ್ಯಶ್ರೇಷ್ಠ: ಜಾನ್ಸನ್ ಚಾರ್ಲ್ಸ್. ಸರಣಿಶ್ರೇಷ್ಠ: ಗುಡಕೇಶ್ ಮೋಟಿ.
Ad
Saina Nehwal: 7 ವರ್ಷದ ವೈವಾಹಿಕ ಜೀವನಕ್ಕೆ ಸೈನಾ ನೆಹ್ವಾಲ್ – ಕಶ್ಯಪ್ ದಂಪತಿ ವಿದಾಯ
ಭಾರತ-ಇಂಗ್ಲೆಂಡ್ 3ನೇ ಟೆಸ್ಟ್: ಕುತೂಹಲ ಘಟ್ಟದಲ್ಲಿ ಲಾರ್ಡ್ಸ್ ಟೆಸ್ಟ್
ಪಾಕ್ ಕ್ರಿಕೆಟ್‌ನಲ್ಲಿ ಲಕ್ಷಾಂತರ ರೂ. ಅವ್ಯವಹಾರ: ಲೆಕ್ಕ ಪರಿಶೋಧಕರು
ಬಾಕ್ಸಿಂಗ್ ಸಂಸ್ಥೆಯ ಚುನಾವಣೆ ವಿಳಂಬ: ಕಾರಣ ಪತ್ತೆಗೆ ಸಮಿತಿ
3rd Test: ಆಸ್ಟ್ರೇಲಿಯಾ ವಿರುದ್ಧ 209 ರನ್ ಹಿನ್ನಡೆಯಲ್ಲಿ ವಿಂಡೀಸ್
You seem to have an Ad Blocker on.
To continue reading, please turn it off or whitelist Udayavani.