
ಇಂಗ್ಲೆಂಡಿಗೆ ಸರಣಿ ಕ್ಲೀನ್ ಸ್ವೀಪ್: ವೆಸ್ಟ್ ಇಂಡೀಸ್ ನಿಕೃಷ್ಟ ಮೊತ್ತಕ್ಕೆ ಕುಸಿತ
Team Udayavani, Dec 23, 2022, 10:32 PM IST

ಬ್ರಿಡ್ಜ್ಟೌನ್: ವೆಸ್ಟ್‌ಇಂಡೀಸ್ ವನಿತೆಯರು ಗುರುವಾರ ನಡೆದ ಐದನೇ ಟಿ20 ಪಂದ್ಯದಲ್ಲಿ ಕೇವಲ 43 ರನ್ನಿಗೆ ಆಲೌಟಾಗಿದ್ದು ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದ್ದಾರೆ. ಇದು ವೆಸ್ಟ್‌ಇಂಡೀಸ್‌ನ ನಿಕೃಷ್ಟ ಮೊತ್ತವೂ ಆಗಿದೆ.
43 ರನ್ನಿಗೆ ಆಲೌಟ್
ಗೆಲ್ಲುವ ಉದ್ದೇಶದಿಂದ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ವೆಸ್ಟ್‌ಇಂಡೀಸ್ ತಂಡವು ಇಂಗ್ಲೆಂಡಿನ ಬಿಗು ದಾಳಿಗೆ ರನ್ ಗಳಿಸಲು ಒದ್ದಾಡಿತು. ಆಗಾಗ್ಗೆ ವಿಕೆಟ್ ಕಳೆದುಕೊಂಡ ವೆಸ್ಟ್‌ಇಂಡೀಸ್ 16.2 ಓವರ್‌ಗಳಲ್ಲಿ ಕೇವಲ 43 ರನ್ನಿಗೆ ಆಲೌಟಾಯಿತು.
ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು 5.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 44 ರನ್ ಗಳಿಸಿ ಜಯ ಸಾಧಿಸಿತು.
ಡ್ಯಾನಿ ವೈಟ್ ಮತ್ತು ಸೋಫಿಯಾ ಡಂಕ್ಲೆ ಇನ್ನಿಂಗ್ಸ್ ಆರಂಭಿಸಿ ಮೊದಲ ವಿಕೆಟಿಗೆ 33 ರನ್ ಪೇರಿಸಿದರು. ಆಬಳಿಕ ನ್ಯಾಟ್ ಸಿವೆರ್ 12 ಎಸೆತಗಳಿಂದ 20 ರನ್ ಗಳಿಸಿ ತಂಡದ ಜಯ ಸಾರಿದರು. ಈ ಮೂಲಕ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯನ್ನು ಕ್ಲೀನ್‌ಸಿÌàಪ್ ಮೂಲಕ ಗೆದ್ದುಕೊಂಡಿತು.
ಫ್ರೆಯಾ ಡೆವೀಸ್ ಪಂದ್ಯಶ್ರೇಷ್ಠ
ಫ್ರೆಯಾ ಡೆವೀಸ್ ಮತ್ತು ಅಲಿಸ್ ಡ್ಯಾವಿಡ್ಸನ್ ರಿಚರ್ಡ್ಸ್ ತಲಾ ಮೂರು ವಿಕೆಟ್ ಪಡೆದರೆ ಚಾರ್ಲಿ ಡೀನ್ ಎರಡು ವಿಕೆಟ್ ಪಡೆದರು. 2.2 ಓವರ್ ಎಸೆದ ಡೆವೀಸ್ ಕೇವಲ ಎರಡು ರನ್ ನೀಡಿ ಮೂರು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು.
ಟಾಪ್ ನ್ಯೂಸ್
