ಏನಿದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್: ಹೇಗಿರಲಿದೆ ಇದರ ಸ್ವರೂಪ


Team Udayavani, Jul 29, 2019, 4:48 PM IST

wtc

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‘,ಹೀಗೊಂದು ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ದೇಶೀಯ ಕ್ರಿಕೆಟ್ ನ ರಣಜಿ ಕ್ರಿಕೆಟ್ ನಂತೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗುತ್ತಿದೆ. ಏನಿದು ಹೊಸ ಪರಿಕಲ್ಪನೆ? ಹೇಗಿರಲಿದೆ ಇದರ ಸ್ವರೂಪ? ಇಲ್ಲಿದೆ ಫುಲ್ ಡಿಟೈಲ್ಸ್.

ಏನಿದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್
ಇದು ಅಗ್ರ ಒಂಬತ್ತು ಟೆಸ್ಟ್ ಆಡುವ ದೇಶಗಳ ನಡುವೆ ನಡೆಯುವ ಪಂದ್ಯಟ. ಹಾಗಂತ ಏಕದಿನ ವಿಶ್ವಕಪ್ ನಂತೆ ಒಂದೇ ಕಡೆ ನಡೆಯುವ ಪಂದ್ಯಾಟವಲ್ಲ. 2019 ಆಗಸ್ಟ್ 1ರಿಂದ 2021ರ ಮಾರ್ಚ್ 31ರ ವರೆಗೆ ನಡೆಯುವ ದ್ವಿಪಕ್ಷೀಯ ಸರಣಿಗಳಲ್ಲಿ ಆಯ್ದ ಸರಣಿಗಳನ್ನು ಈ ಚಾಂಪಿಯನ್ ಶಿಪ್ ಗೆ ಪರಿಗಣಿಸಲಾಗುತ್ತದೆ. 2021ರ ಜೂನ್ ನಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಪರಿಕಲ್ಪನೆಯ ಹುಟ್ಟು ಹೇಗೆ?
22 ವರ್ಷಗಳ ಹಿಂದೆ ಪಾಕ್ ನ ಆರಿಫ್ ಅಲಿ ಅಬ್ಬಾಸ್, ವಿಂಡೀಸ್ ನ ಕ್ಲೈವ್ ಲಾಯ್ಡ್, ದ. ಆಫ್ರಿಕಾದ ಅಲಿ ಬಾಕರ್ ಮೊದಲ ಬಾರಿಗೆ ʼಟೆಸ್ಟ್ ವಿಶ್ವ ಕಪ್ʼ ನ ಪರಿಕಲ್ಪನೆಯನ್ನು ಐಸಿಸಿ ಮುಂದಿಟ್ಟಿದ್ದರು. 2013ರ ನಂತರ ಏಕದಿನ ಚಾಂಪಿಯನ್ಸ್ ಟ್ರೋಫಿ ಬದಲು ಟೆಸ್ಟ್ ಚಾಂಪಿಯನ್ ಶಿಪ್ ನಡೆಸುವ ಯೋಜನೆ ಮಾಡಲಾಗಿತ್ತು. ಹಲವು ಅಡೆತಡೆಗಳ ನಂತರ ಈಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗುತ್ತಿದೆ.

ಯಾವುದೆಲ್ಲಾ ತಂಡಗಳು
ಟೆಸ್ಟ್ ರಾಂಕಿಂಗ್ ಪಟ್ಟಿಯಲ್ಲಿ ಮಾರ್ಚ್ 31 2018ರವರೆಗೆ ಅಗ್ರ ಒಂಬತ್ತು ಸ್ಥಾನ ಪಡೆದಿದ್ದ ತಂಡಗಳು ಈ ಟೆಸ್ಟ್ ಚಾಂಪಿಯನ್ ಶಿಪ್ ಆಡಲಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಕಾದಾಡಲಿವೆ. ಟೆಸ್ಟ್ ಮಾನ್ಯತೆ ಪಡೆದಿರುವ ಅಫ್ಘಾನಿಸ್ಥಾನ, ಐರ್ಲೆಂಡ್, ಜಿಂಬಾಬ್ವೆ ತಂಡಗಳಿಗೆ ಈ ಅವಕಾಶವಿಲ್ಲ.

ಯಾರಿಗೆ ಎಷ್ಟು ಪಂದ್ಯಗಳು
ಈ ಎರಡು ಅವಧಿಯಲ್ಲಿ ಪ್ರತೀ ತಂಡಗಳು ಮೂರು ಆತಿಥೇಯ ಮತ್ತು ಮೂರು ವಿದೇಶಿ ಸರಣಿ ಸೇರಿದಂತೆ ಒಟ್ಟು ಆರು ಸರಣಿ ಆಡಲಿದೆ. ಸರಣಿಯಲ್ಲಿ ಕನಿಷ್ಠ ಎರಡು ಟೆಸ್ಟ್ ಮತ್ತು ಗರಿಷ್ಠ ಐದು ಪಂದ್ಯಗಳಿರುತ್ತದೆ. ಇದರಲ್ಲಿ ಅತೀ ಹೆಚ್ಚು ಪಂದ್ಯವಾಡಲು ಅವಕಾಶವಿರುವುದು ಇಂಗ್ಲೆಂಡ್ ಗೆ. ಇಂಗ್ಲೆಂಡ್ 22 ಪಂದ್ಯವಾಡಿದರೆ, ಆಸ್ಟ್ರೇಲಿಯಾ 19, ಭಾರತ 18, ದ. ಆಫ್ರಿಕಾ 16, ವೆಸ್ಟ್ ಇಂಡೀಸ್ 15, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ತಲಾ 14, ಪಾಕಿಸ್ಥಾನ ಮತ್ತು ಶ್ರೀಲಂಕಾ ತಲಾ 13 ಪಂದ್ಯವಾಡಲಿದೆ.

ಅಂಕ ಹೇಗೆ?
ಪ್ರತೀ ಟೆಸ್ಟ್ ಸರಣಿಗೆ 120 ಅಂಕವಿರುತ್ತದೆ. ಅದು ಎರಡು ಪಂದ್ಯವಾಗಲಿ ಅಥವಾ ಐದು ಪಂದ್ಯದ ಸರಣಿಯಾಗಲಿ. 120 ಅಂಕದಿಂದಲೇ ಹಂಚಲಾಗುತ್ತದೆ.

ಭಾರತ ಯಾರ ವಿರುದ್ಧ ಆಡಲಿದೆ?
ಈ ಎರಡು ವರ್ಷ ಅವಧಿಯಲ್ಲಿ ಭಾರತ ಆಡುವ ಟೆಸ್ಟ್ ಸರಣಿಯಲ್ಲಿ ಕೆಲವನ್ನು ಮಾತ್ರ ಈ ಚಾಂಪಿಯನ್ ಶಿಪ್ ಗೆ ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್, ಬಾಂಗ್ಲಾ, ನ್ಯೂಜಿಲ್ಯಾಂಡ್ ವಿರುದ್ದ ಭಾರತ ಎರಡು ಪಂದ್ಯಗಳ ಸರಣಿ ಆಡಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿ ಆಡಲಿದೆ. 2020ರಲ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ನಾಲ್ಕು ಪಂದ್ಯಗಳ ಸರಣಿ ಆಡಿದರೆ, 2021ರಲ್ಲಿ ಇಂಗ್ಲೆಂಡ್ ವಿರುದ್ದ ಐದು ಪಂದ್ಯಗಳ ಸರಣಿಯನ್ನು ಆಡಲಿದೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.