

Team Udayavani, Jan 11, 2020, 11:17 PM IST
ಮೆಲ್ಬರ್ನ್: ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಕೂಟಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಇದಕ್ಕೆ ಕಾಡ್ಗಿಚ್ಚಿನ ಬಿಸಿ ತಟ್ಟಿದೆ. ವಾತಾವರಣ ತಿಳಿಯಾಗದೇ ಹೋದರೆ ಈ ಪ್ರತಿಷ್ಠಿತ ಕೂಟವನ್ನೇ ಸಂಘಟಕರು ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸೀಸ್ ಮಾಧ್ಯಮಗಳಲ್ಲಿ ಇಂಥದೊಂದು ಸುದ್ದಿ ಬಿತ್ತರಗೊಂಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯದ ವಾತಾವರಣವಿಡೀ ಕಲುಷಿತ ಗೊಂಡಿದೆ. ಉಸಿರಾಟಕ್ಕೆ ತೀವ್ರ ತೊಂದರೆ ಯಾಗುತ್ತಿದೆ. ಹೀಗಿರುವಾಗ ಜ. 20ರಿಂದ ಟೆನಿಸ್ ಕೂಟವನ್ನು ಆಯೋಜಿಸುವುದು ಅಸಾಧ್ಯ ಎನ್ನಲಾಗಿದೆ. ಸದ್ಯ ಕಾಡ್ಗಿಚ್ಚಿಗೆ 26 ಮಂದಿ ಬಲಿಯಾಗಿದ್ದಾರೆ. 80 ಸಾವಿರಕ್ಕೂ ಹೆಚ್ಚು ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶ ಸುಟ್ಟು ಹೋಗಿದೆ. ಲಕ್ಷಾಂತರ ವನ್ಯ ಜೀವಿಗಳು ಸುಟ್ಟು ಕರಕಲಾಗಿವೆ.
ಶುದ್ಧ ಗಾಳಿ ಇಲ್ಲ…
ಆಸ್ಟ್ರೇಲಿಯದ ವಾತಾವರಣದಲ್ಲಿ ಈಗ ಉಸಿರಾಡಲು ಬೇಕಾಗಿರುವ ಶುದ್ಧ ಗಾಳಿ ಇಲ್ಲ. ಇದು ಆಟಗಾರರಿಗೆ, ಸಿಬಂದಿಗೆ ಹಾಗೂ ಕೂಟವನ್ನು ವೀಕ್ಷಿಸಲು ಬರುವ ವೀಕ್ಷಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಸಿಡ್ನಿ ಹಾಗೂ ಕ್ಯಾನ್‌ಬೆರಾದಲ್ಲಿ ಉಂಟಾಗಿರುವ ಮಾಲಿನ್ಯದ ತೀವ್ರತೆ, ಕೂಟದ ತಾಣವಾದ ಮೆಲ್ಬರ್ನ್ನಲ್ಲಿ ಇಲ್ಲವಾದರೂ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಸಂಘಟಕರು ಚಿಂತನೆ ನಡೆಸಿದ್ದಾರೆ.
“ವಿಕ್ಟೋರಿಯಾದಲ್ಲಿ ಇನ್ನೂ ಕಾಡ್ಗಿಚ್ಚು ನಂದಿಲ್ಲ. ಇನ್ನೂ ಒಂದು ವಾರದ ಕಾಲಾವಕಾಶ ಇದೆ. ಬೆಂಕಿಯ ತೀವ್ರತೆ ಕ್ರಮೇಣ ಕಡಿಮೆಯಾಗುವ, ವಾತಾವರಣ ತಿಳಿಯಾಗುವ ನಿರೀಕ್ಷೆ ಇದೆ. ಕೂಟವನ್ನು ಆಯೋಜಿಸುವ ವಿಶ್ವಾಸವಿದೆ’ ಎಂಬುದು ಆಸ್ಟ್ರೇಲಿಯನ್ ಓಪನ್ ಸಿಇಒ ಗ್ರೆಗ್ ಟಿಲ್ಲೆ ಅವರ ಹೇಳಿಕೆ.
Ad
Karnataka: 173 ಕಿ.ಮೀ. ಓಡಿ ಜಪಾನ್ ರೇಸ್ ಗೆದ್ದ ಕನ್ನಡತಿ ಅಶ್ವಿನಿ ಗಣಪತಿ!
FIDE ಮಹಿಳಾ ವಿಶ್ವಕಪ್ ಚೆಸ್: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ
Tokyo ಜಪಾನ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ
IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್ ಆರೋನ್ ಬೌಲಿಂಗ್ ಕೋಚ್
ವಿಂಬಲ್ಡನ್ ಗೆಲ್ಲಬೇಕಾದರೆ ಅಲ್ಕರಾಜ್ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್
Odisha: ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾ*ವು
ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ
Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ
ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್ ಬಿ.ಸರೋಜಾ ದೇವಿ
Editorial: ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಕ್ರಮ ಅತ್ಯಗತ್ಯ
You seem to have an Ad Blocker on.
To continue reading, please turn it off or whitelist Udayavani.