ವೇಗಿ ಉಮ್ರಾನ್ ಮಲಿಕ್ ಶೀಘ್ರ ಭಾರತೀಯ ತಂಡಕ್ಕೆ ?
Team Udayavani, Apr 19, 2022, 8:10 AM IST
ಹೊಸದಿಲ್ಲಿ: ವೇಗದ ಬೌಲರ್ ಉಮ್ರಾನ್ ಮಲಿಕ್ ಅವರು ಶ್ರೀಘ್ರ ಭಾರತೀಯ ತಂಡಕ್ಕೆ ಸೇರ್ಪಡೆ ಯಾಗುವ ಸಾಧ್ಯತೆಯಿದೆ.
ಭಾರತವು ಮುಂದಿನ ಜೂನ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಯರ್‌ಲ್ಯಾಂಡ್ ವಿರುದ್ಧ ಒಟ್ಟಾರೆ 7 ಟಿ 20 ಪಂದ್ಯಗಳನ್ನಾಡಲಿದ್ದು ಉಮ್ರಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಆಯ್ಕೆ ಸಮಿತಿ ಯೋಚಿಸುತ್ತಿದೆ.
ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ (ಜೂ. 9, 12, 14, 17 ಮತ್ತು 20) ಮತ್ತು ಅಯರ್‌ಲ್ಯಾಂಡ್ ವಿರುದ್ಧ ಜೂನ್ 26 ಮತ್ತು 28ರಂದು ನಡೆಯುವ ಎರಡು ಟಿ20 ಪಂದ್ಯಗಳಲ್ಲಿ ಆಡಲಿದೆ.
ಉಮ್ರಾನ್ ಮಲಿಕ್ ಅವರು ಈ ಹಿಂದೆ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಭಾರತೀಯ ತಂಡದ ನೆಟ್ ಬೌಲರ್ ಆಗಿದ್ದರು.
ಆಸ್ಟ್ರೇಲಿಯದಲ್ಲಿ ಮುಂದಿನ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಬಿಸಿಸಿಐ ವೇಗದ ಬೌಲರ್‌ಗಳ ಪಡೆಯಿಂದ ಉತ್ತಮ ಸಾಧಕರನ್ನು ಆಯ್ಕೆ ಮಾಡಲು ಯೋಚಿಸುತ್ತಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಉಮ್ರಾನ್ ಮಲಿಕ್ ಮುಂದಿನ ಎರಡು ತಿಂಗಳು ಫಿಟ್ ಆಗಿದ್ದರೆ ಭಾರತೀಯ ತಂಡಕ್ಕೆ ಸೇರ್ಪಡೆಯಾಗುವುದು ಖಚಿತವೆಂದು ಹೇಳಬಹುದು.
ಇದನ್ನೂ ಓದಿ:ಜಹಾಂಗೀರ್ ಪುರಿ ಹಿಂಸಾಚಾರ : ದೆಹಲಿ ಪೊಲೀಸರಿಗೆ ಓವೈಸಿ ಗಂಭೀರ ಪ್ರಶ್ನೆ
ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅವರೆಲ್ಲ ಸ್ಪರ್ಧೆಯಲ್ಲಿದ್ದಾರೆ.
ಈ ಎಲ್ಲ ಬೌಲರ್‌ಗಳು ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ವಿವಿಧ ಫ್ರಾಂಚೈಸಿ ಪರ ಆಡುತ್ತಿದ್ದಾರೆ.
ಆಯ್ಕೆ ಸಮಿತಿ ಸದಸ್ಯರು ಈ ಬೌಲರ್‌ಗಳ ನಿರ್ವಹಣೆಯನ್ನು ಗಮನಿಸುತ್ತಿದೆ.ಆಯ್ಕೆ ಸಮಿತಿಯ ಚೇರ್ಮನ್ ಚೇತನ್ ಶರ್ಮ ಮತ್ತು ಅವರ ಸಮಿತಿಯ ಸದಸ್ಯರು ಉಮ್ರಾನ್ ಅವರ ನಿರ್ವಹಣೆಯನ್ನು ಗಮನಿಸುತ್ತಿದ್ದಾರೆ. ಅವರೀಗ ಭಾರತದ ಅತೀವೇಗದ ಬೌಲರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್ ಪರ ಆಡುತ್ತಿರುವ ಅವರು ಆಡಿದ 6 ಪಂದ್ಯಗಳಿಂದ 9 ವಿಕೆಟ್ ಉರುಳಿಸಿದ್ದಾರೆ.