
ಸುಂದರ ಸ್ವಪ್ನದಂತೆ ಸಾಗಿತು: ಹರ್ಮನ್‌ಪ್ರೀತ್ ಕೌರ್
ವನಿತಾ ಪ್ರೀಮಿಯರ್ ಲೀಗ್
Team Udayavani, Mar 28, 2023, 6:48 AM IST

ಮುಂಬಯಿ: “ಇದೊಂದು ಕನಸು… ಎಲ್ಲವೂ ಸುಂದರ ಸ್ವಪ್ನದಂತೆ ಮುಗಿದು ಹೋಯಿತು’ ಎಂಬುದಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಚೊಚ್ಚಲ ವನಿತಾ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟಕ್ಕೇರಿಸಿದ ಯಶಸ್ವಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರತಿಕ್ರಿಯಿಸಿದ್ದಾರೆ.
“ಇಂಥದೊಂದು ಪಂದ್ಯಾವಳಿಗಾಗಿ, ಈ ಒಂದು ಕ್ಷಣಕ್ಕಾಗಿ ನಾವು ಅದೆಷ್ಟೋ ವರ್ಷಗಳಿಂದ ಕಾಯುತ್ತಿದ್ದೆವು. ಪಂದ್ಯಾ ವಳಿಯನ್ನು ನಾವೆಲ್ಲ ಬಹಳಷ್ಟು ಆನಂದಿ ಸಿದೆವು, ಆಸ್ವಾದಿಸಿದೆವು. ಡ್ರೆಸ್ಸಿಂಗ್ ರೂಮ್ ವಾತಾವರಣವಂತೂ ಅತ್ಯಂತ ಸಂಭ್ರಮದಿಂದ ಕೂಡಿತ್ತು. ನಮ್ಮೆಲ್ಲರಿಗೂ ಇದೊಂದು ಕನಸಿನಂತೆ ಕಂಡಿತು…’ ಎಂಬುದಾಗಿ ಕೌರ್ ಹೇಳಿದರು.
“ವನಿತಾ ಐಪಿಎಲ್ ಪಂದ್ಯಾವಳಿ ಯಾವಾಗ ಎಂದು ಎಲ್ಲರೂ ಕಾತರದಿಂದ ಕೇಳುತ್ತಿದ್ದರು. ಅದೀಗ ಗರಿಗೆದರಿದೆ. ನಮಗಿದು ಬಹಳ ಖುಷಿ ಹಾಗೂ ಹೆಮ್ಮೆಯ ಸಂಗತಿ’ ಎಂದರು.
ಫೈನಲ್ ಪಂದ್ಯದ ಕುರಿತು ಪ್ರತಿಕ್ರಿಯಿಸಿದ ಹರ್ಮನ್‌ಪ್ರೀತ್ ಕೌರ್, “132 ರನ್ ಚೇಸಿಂಗ್ ವೇಳೆ ನಾವು ಆರಂಭಿಕ ಆಘಾತಕ್ಕೇನೋ ಸಿಲುಕಿದೆವು. ಆದರೆ ನಮ್ಮ ಬ್ಯಾಟಿಂಗ್ ಲೈನ್‌ಅಪ್ ಬಲಿಷ್ಠವಾಗಿತ್ತು. ಹೀಗಾಗಿ ಗೆಲುವಿನ ಬಗ್ಗೆ ನಂಬಿಕೆ ಇತ್ತು. ತಂಡವಾಗಿ ನಮ್ಮ ಸಾಧನೆ ಅಮೋಘವಾಗಿತ್ತು. ಧನಾತ್ಮಕ ಆಲೋಚನೆಗಳೇ ನಮ್ಮ ಯಶಸ್ಸಿನ ಮೂಲ’ ಎಂದರು.
“ಕೊನೆಯ 3-4 ಓವರ್‌ಗಳಲ್ಲಿ ನಾವು ಹೆಚ್ಚು ರನ್ ಬಿಟ್ಟುಕೊಟ್ಟೆವು. ಆದರೆ ಇದರಿಂದ ಪಂದ್ಯದ ಆಸಕ್ತಿ ಹೆಚ್ಚಿತು. ಟ್ರೋಫಿಯನ್ನು ಎತ್ತಿ ಹಿಡಿಯುವುದೆಂದರೆ ಅದೊಂದು ಪರಿಪೂರ್ಣ ಸಾಧನೆ’ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
