
ವನಿತಾ ಬಾಕ್ಸಿಂಗ್: ನೀತು, ಸವೀತಿ ವಿಶ್ವ ಚಾಂಪಿಯನ್ಸ್
Team Udayavani, Mar 26, 2023, 6:30 AM IST

ಹೊಸದಿಲ್ಲಿ: ಕಾಮನ್ವೆಲ್ತ್ ಗೇಮ್ಸ್ ಬಂಗಾರ ಪದಕ ವಿಜೇತ ಬಾಕ್ಸರ್ ನೀತು ಘಂಘಾಸ್ ಮತ್ತು ಸವೀತಿ ಬೂರಾ ಅವರು ಭಾರತದ ನೂತನ ವಿಶ್ವ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಶನಿವಾರದ 48 ಕೆಜಿ ವಿಭಾಗದ ಫೈನಲ್‌ನಲ್ಲಿ ನೀತು ಘಂಘಾಸ್ ಮಂಗೋಲಿಯಾದ ಲುಸೈಖಾನ್ ಅಲ್ತಾನ್ಸೆತ್ಸೆಗ್ ವಿರುದ್ಧ 5-0 ಅಂತರದ ಅಧಿಕಾರಯುತ ಜಯ ಸಾಧಿಸಿದರು.
22 ವರ್ಷದ, ಭಿವಾನಿಯವರಾದ ನೀತು ಘಂಘಾಸ್ ಆಕ್ರಮಣಕಾರಿಯಾಗಿಯೇ ಸ್ಪರ್ಧೆ ಆರಂಭಿಸಿದರು. ಕಿಕ್ಕಿರಿದು ಜಮಾ ಯಿಸಿದ್ದ ವೀಕ್ಷಕರ ಸಮ್ಮುಖದಲ್ಲಿ ಅಮೋಘ ಪ್ರದರ್ಶನ ನೀಡಿದರು. ಅವರ ಐಡಲ್, ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಕೂಡ ಉಪಸ್ಥಿತರಿದ್ದರು.
ದಿನದ ಮತ್ತೊಂದು ಪಂದ್ಯದಲ್ಲಿ ಸವೀತಿ ಬೂರಾ (81 ಕೆಜಿ) ಚೀನದ ವಾಂಗ್ ಲಿನಾ ಅವರನ್ನು 3-2ರಿಂದ ಪರಾಭವಗೊಳಿಸಿದರು.
ಇವರಿಬ್ಬರ ಸಾಧನೆಯೊಂದಿಗೆ ಭಾರತದ ವನಿತಾ ವಿಶ್ವ ಚಾಂಪಿಯನ್‌ಗಳ ಸಂಖ್ಯೆ ಏಳಕ್ಕೇರಿತು. ಮೇರಿ ಕೋಮ್ (6 ಸಲ), ಸರಿತಾ ದೇವಿ, ಜೆನ್ನಿ ಆರ್.ಎಲ್., ಲೇಖಾ ಕೆ.ಸಿ., ನಿಖತ್ ಜರೀನ್ ಉಳಿದ ಸಾಧಕಿಯರು.
ನಿಖತ್, ಲವ್ಲಿನಾಗೆ ಏಷ್ಯಾಡ್ ಅರ್ಹತೆ
ಸ್ಟಾರ್ ಬಾಕ್ಸರ್‌ಗಳಾದ ನಿಖತ್ ಜರೀನ್ ಮತ್ತು ಲವ್ಲಿನಾ ಬೊರ್ಗೊಹೇನ್ ಏಷ್ಯಾಡ್ ಅರ್ಹತೆ ಗಳಿಸಿದ್ದಾರೆ. ಭಾರತದ ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್ (ಎಚ್‌ಪಿಡಿ) ಬರ್ನಾರ್ಡ್ ಡ್ನೂನೆ ಇದನ್ನು ಪ್ರಕಟಿಸಿದರು.
ಈ ವರ್ಷಾಂತ್ಯ ಚೀನದ ಹಾಂಗ್‌ಝೂನಲ್ಲಿ ನಡೆಯುವ ಏಷ್ಯನ್ ಗೇಮ್ಸ್, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಪಂದ್ಯಾವಳಿಯೂ ಆಗಿದೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಗೆದ್ದವರು ನೇರವಾಗಿ ಏಷ್ಯಾಡ್ ಅರ್ಹತೆ ಪಡೆಯಲಿದ್ದಾರೆ ಎಂಬುದಾಗಿ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ. ನಿಖತ್ ಜರೀನ್ (50 ಕೆಜಿ) ಮತ್ತು ಲವಿÉನಾ ಬೊರ್ಗೊಹೇನ್ (75 ಕೆಜಿ) ಪ್ರಸಕ್ತ ಸಾಗುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದು, ಚಿನ್ನ ಅಥವಾ ಬೆಳ್ಳಿ ಪದಕವನ್ನು ಖಾತ್ರಿಗೊಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
