ಕೂಡಿಟ್ಟ ಹಣದಿಂದ ವಿಶ್ವ ಚಾಂಪಿಯನ್‌ ಪಟ್ಟ


Team Udayavani, Jul 5, 2018, 6:00 AM IST

32.jpg

ಮಂಗಳೂರು: ಓದಿ ಏನಾಗುವ ಆಸೆಯಿದೆ ಎಂದು ಶಾಲೆಯಲ್ಲಿ ಅಧ್ಯಾಪಕಿ ಕೇಳಿದಾಗ ಎಲ್ಲರೂ ಡಾಕ್ಟರ್‌, ಎಂಜಿನಿಯರ್‌ ಆಗುತ್ತೇವೆ ಎಂದಾಗ, ಮೂಲೆಯಲ್ಲಿ ಕುಳಿತಿದ್ದ ಹುಡುಗನೊಬ್ಬ “ನಾನು ಬಾಡಿಬಿಲ್ಡರ್‌ ಆಗುತ್ತೇನೆ ಮೇಡಂ’ ಎಂದಿದ್ದ. ಅದನ್ನು ಕೇಳಿದ್ದ ಸಹಪಾಠಿ ಗಳೆಲ್ಲ ನಕ್ಕು ತಮಾಷೆ ಮಾಡಿದ್ದರು. ಆದರೆ ಅದೇ, ಹುಡುಗ ಈಗ ಸಿಂಗಾಪುರದಲ್ಲಿ ನಡೆದ “ಮಿಸ್ಟರ್‌ ಯುನಿವರ್ಸ್‌ ಬಾಡಿ ಬಿಲ್ಡಿಂಗ್‌’ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್‌ ಆಗುವ ಮೂಲಕ ಕರಾವಳಿಗೆ ಕೀರ್ತಿ ತಂದಿದ್ದಾನೆ!

ಮಂಗಳೂರಿನ ಬೊಕ್ಕಪಟ್ಣದ ಈ ಕ್ರೀಡಾ ಸಾಧಕನ ಹೆಸರು ನಿಶಾನ್‌ ಕುಮಾರ್‌. ನಿಶಾನ್‌ 65 ಕೆಜಿ ವಿಭಾಗದ ಅಂತಾರಾಷ್ಟ್ರೀಯ ದೇಹದಾಡ್ಯì ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಕಡು ಬಡತನದಲ್ಲಿ ಹುಟ್ಟಿದ ಇವರ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. 

ನರೇಂದ್ರ-ಸುಚಿತಾ ದಂಪತಿ ಪುತ್ರರಾದ ನಿಶಾನ್‌ಗೆ ಚಿಕ್ಕಂದಿನಲ್ಲೇ ದೊಡ್ಡ ಬಾಡಿಬಿಲ್ಡರ್‌ ಆಗಬೇಕೆಂಬ ಆಸೆ-ಕನಸು ಇತ್ತು. ಆದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಅರ್ಧ ದಲ್ಲಿಯೇ ಎಲ್‌ಎಲ್‌ಬಿ ಕಲಿಕೆಯನ್ನು ಮೊಟಕುಗೊಳಿಸಿ, ಬಾಡಿ ಬಿಲ್ಡಿಂಗ್‌ನಲ್ಲೇ ತರಬೇತಿ ಪಡೆಯಲು ಬೆಂಗಳೂರಿನತ್ತ ಪಯಣ ಬೆಳೆಸಿದ್ದ‌ರು. 

ಬಳಿಕ ಕೊಯಮತ್ತೂರಿನಲ್ಲಿ ನಡೆದ 65 ಕೆ.ಜಿ. ವಿಭಾಗದ “ಮಿಸ್ಟರ್‌ ಇಂಡಿಯಾ ಜೂನಿಯರ್‌ ಟೈಟಲ್‌’ ಜತೆ ಚಿನ್ನದ ಪದಕ, ಮಿಸ್ಟರ್‌ ಇಂಡಿಯಾ ಬೆಸ್ಟ್‌ ಪೋಸರ್‌ ಜತೆ ಓವರ್‌ಆಲ್‌ ರನ್ನರ್‌ ಆಪ್‌ ಪ್ರಶಸ್ತಿ ಕೂಡ ಗೆದ್ದರು.  2017ರಲ್ಲಿ “ಮಿಸ್ಟರ್‌ ಕರ್ನಾಟಕ’ ಪಟ್ಟವೂ ಒಲಿಯಿತು. ಬ್ಯಾಂಕಾಕ್‌ನಲ್ಲಿ “ಮಿಸ್ಟರ್‌ ಏಶ್ಯ ಜೂನಿಯರ್‌’ ಪ್ರಶಸ್ತಿ ಜತೆಗೆ ಸಮಗ್ರ ಚಾಂಪಿಯನ್‌ ಪ್ರಶಸ್ತಿಯನ್ನೂ ಗಳಿಸಿದರು. ಸಿಂಗಾಪುರದಲ್ಲಿ 3 ದಿನಗಳ ಹಿಂದೆ “ಮಿಸ್ಟರ್‌ ಯೂನಿವರ್ಸ್‌’  ವಿಶ್ವ ಮಟ್ಟದ ಬಾಡಿ ಬಿಲ್ಡಿಂಗ್‌ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ದೇಶದ ಗಮನ ಸೆಳೆದಿರುವುದು ಗಮನಾರ್ಹ. 

ಡೆಂಗ್ಯೂನಿಂದ ತಪ್ಪಿದ ಅವಕಾಶ 
ನಿಶಾನ್‌ ಕುಮಾರ್‌ಗೆ ಜೂನ್‌ ತಿಂಗಳಿನಲ್ಲಿ ನಡೆದ ಮಿಸ್ಟರ್‌ ವರ್ಲ್ಡ್ಬಾಡಿ ಬಿಲ್ಡಿಂಗ್‌ ಸ್ಪರ್ಧೆಯಲ್ಲಿ ಭಾಗ ವಹಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಆದರೆ ಅದೇ ಸಮಯದಲ್ಲಿ ಡೆಂಗ್ಯೂ ಜ್ವರ ಬಂದಿದ್ದ ಕಾರಣ ಮತ್ತು ವೀಸಾ ಸಮಸ್ಯೆಯಿಂದಾಗಿ ಅವಕಾಶ ಕೈತಪ್ಪಿತ್ತು. ಮುಂದಿನ ಮಿಸ್ಟರ್‌ ಇಂಡಿಯಾ, ಮಿಸ್ಟರ್‌ ವರ್ಲ್ಡ್ ಸೀನಿಯರ್‌ಗೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.

ದುಡಿದ ಹಣ ಕಲಿಕೆಗೆ
ನಿಶಾನ್‌ ಬೆಂಗಳೂರಿನ ಸಂಸ್ಥೆ ಯೊಂದನ್ನು  ಸೇರಿಕೊಂಡರು. ಪಾರ್ಟ್‌ ಟೈಂ ಕೆಲಸಕ್ಕೆ ಸೇರಿ ಅದರಿಂದ ಬಂದ ಹಣವನ್ನು ಉಳಿಸಿ ಬಾಡಿ ಬಿಲ್ಡಿಂಗ್‌ ಕಲಿಕೆಗೆ ವಿನಿಯೋಗಿಸುತ್ತಿದ್ದರು. ಅಲ್ಲಿಯೇ ಜಿಮ್‌ ಒಂದರಲ್ಲಿ ಪರ್ಸನಲ್‌ ಟ್ರೈನರ್‌ ಆಗಿ ಕೆಲಸ ನಿರ್ವಹಿಸಿದರು. ಅದೇ ಸಮಯಕ್ಕೆ ಮಂಗಳೂರಿನಲ್ಲಿ “ಮಿಸ್ಟರ್‌ ದಕ್ಷಿಣ ಕನ್ನಡ’ ದೇಹದಾಡ್ಯì ಸ್ಪರ್ಧೆ ನಡೆಯಿತು. ಕೋಚ್‌ ಕುಮಾರ್‌ ಪುತ್ರನ್‌ ಬಳಿ ಹೆಚ್ಚಿನ ತರಬೇತಿ ಪಡೆದುಕೊಂಡರು. ಆ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡರು.

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

13-uv-fusion

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?

12-uv-fusion

Fusion: Cinema; ಪೋಸ್ಟ್‌ ಮ್ಯಾನ್‌ಇನ್‌ ದಿ ಮೌಂಟೇನ್ಸ್‌, ಡ್ಯುಯಲ್‌

zimb

Zimbabwe Series; ರೋಹಿತ್, ಸೂರ್ಯ, ಹಾರ್ದಿಕ್ ಅನುಪಸ್ಥಿತಿಯಲ್ಲಿ ಹೊಸಬನಿಗೆ ನಾಯಕತ್ವ?

11-question

Question: ಎಲ್ಲರಲ್ಲೂ ಬೆಳೆಯಲಿ ಪ್ರಶ್ನಿಸುವ ಮನೋಭಾವ…

10-mother-tongue

Mother Tongue: ಮಾತೃಭಾಷೆಯ ಮೇಲೆ ಇರಲಿ ಗೌರವ

ಹೆಣ್ಣು ಮಗುವಿಗೆ ಜನ್ಮ ನೀಡಿ ಮಹಿಳೆ ಮೃತ್ಯು… ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮಹಿಳೆ ಮೃತ್ಯು.. ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ

Mundagodu-police

Fraud: ಯುವತಿಯಿಂದ 18 ಲಕ್ಷ ರೂ. ಪಡೆದು ವಂಚಿಸಿದ ಕಾನ್ಸ್‌ಟೇಬಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

zimb

Zimbabwe Series; ರೋಹಿತ್, ಸೂರ್ಯ, ಹಾರ್ದಿಕ್ ಅನುಪಸ್ಥಿತಿಯಲ್ಲಿ ಹೊಸಬನಿಗೆ ನಾಯಕತ್ವ?

T20 World Cup: ರೋಚಕ ಪಂದ್ಯದಲ್ಲಿ ಸೋತ ವೆಸ್ಟ್ ಇಂಡೀಸ್ ಮನೆಗೆ; ದ.ಆಫ್ರಿಕಾ ಸೆಮಿಗೆ

T20 World Cup: ರೋಚಕ ಪಂದ್ಯದಲ್ಲಿ ಸೋತ ವೆಸ್ಟ್ ಇಂಡೀಸ್ ಮನೆಗೆ; ದ.ಆಫ್ರಿಕಾ ಸೆಮಿಗೆ

1-aasasa

Team India ಸೇಡು ತೀರಿಸಲಿ; ಆಸ್ಟ್ರೇಲಿಯ ಒತ್ತಡದಲ್ಲಿ: ಸೋತರೆ ಸೆಮಿ ಬಸ್‌ ಮಿಸ್‌!

Bajarang

Wrestler ಬಜರಂಗ್‌ ಪೂನಿಯ ಮತ್ತೆ ಅಮಾನತು

1-jordan

Super-8; ಜೋರ್ಡನ್‌ ಹ್ಯಾಟ್ರಿಕ್‌: ಸೆಮಿಫೈನಲ್‌ಗೆ ಇಂಗ್ಲೆಂಡ್‌

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

13-uv-fusion

Education: ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯೇ ?

12-uv-fusion

Fusion: Cinema; ಪೋಸ್ಟ್‌ ಮ್ಯಾನ್‌ಇನ್‌ ದಿ ಮೌಂಟೇನ್ಸ್‌, ಡ್ಯುಯಲ್‌

zimb

Zimbabwe Series; ರೋಹಿತ್, ಸೂರ್ಯ, ಹಾರ್ದಿಕ್ ಅನುಪಸ್ಥಿತಿಯಲ್ಲಿ ಹೊಸಬನಿಗೆ ನಾಯಕತ್ವ?

11-question

Question: ಎಲ್ಲರಲ್ಲೂ ಬೆಳೆಯಲಿ ಪ್ರಶ್ನಿಸುವ ಮನೋಭಾವ…

10-mother-tongue

Mother Tongue: ಮಾತೃಭಾಷೆಯ ಮೇಲೆ ಇರಲಿ ಗೌರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.