
World Cup 2023; ಗೆದ್ದ ಆಸೀಸ್, ಫೈನಲ್ ಸೋತ ಟೀಂ ಇಂಡಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು?
Team Udayavani, Nov 20, 2023, 6:16 PM IST

ಅಹಮದಾಬಾದ್: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವು ಗೆಲುವು ಸಾಧಿಸಿ ದಾಖಲೆಯ ಆರನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿದ ಪ್ಯಾಟ್ ಕಮಿನ್ಸ್ ಪಡೆ ಮತ್ತೊಮ್ಮೆ ವಿಶ್ವ ಚಾಂಪಿಯನ್ ಎನಿಸಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯಾವಳಿಯ ಕೊನೆಯಲ್ಲಿ ಒಟ್ಟು ಮೊತ್ತದ 10 ಮಿಲಿಯನ್ ಯುಎಸ್ ಡಾಲರ್ ಬಹುಮಾನದ ಮೊತ್ತವನ್ನು ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು. ಅದರಂತೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡವು ನಾಲ್ಕು ಮಿಲಿಯನ್ ಯುಎಸ್ ಡಾಲರ್ (33 ಕೋಟಿ ರೂ) ಪ್ರಶಸ್ತಿ ಮೊತ್ತ ಪಡೆದಿದೆ.
ಎರಡನೇ ಪ್ರಶಸ್ತಿ ಪಡೆದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಎರಡು ಮಿಲಿಯನ್ ಯುಎಸ್ ಡಾಲರ್ ಅಂದರೆ 16 ಕೋಟಿ ರೂ ಬಹುಮಾನದ ರೂಪದಲ್ಲಿ ಪಡೆದಿದೆ.
ಸೆಮಿ ಫೈನಲಿಸ್ಟ್ ಗಳಾದ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ 800,000 ಡಾಲರ್ ಅಂದರೆ ತಲಾ 6.6 ಕೋಟಿ ರೂಪಾಯಿಗಳೊಂದಿಗೆ ಸ್ವದೇಶಕ್ಕೆ ಮರಳಿದವು.
Iconic 📸
Champion skipper @patcummins30‘s memorable day out with his prized possession at the Atal Pedestrian Bridge, Sabarmati Riverfront 🏆🤩#CWC23 pic.twitter.com/gI3Oam9e5U
— ICC (@ICC) November 20, 2023
ಉಳಿದ ಆರು ತಂಡಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ಇಂಗ್ಲೆಂಡ್ ಗಳು ಗುಂಪು ಹಂತದಲ್ಲಿ ಹೊರಬಿದ್ದವು. ಈ ತಂಡಗಳು ತಲಾ 100,000 ಡಾಲರ್ (ರೂ 83 ಲಕ್ಷಕ್ಕಿಂತ ಹೆಚ್ಚು) ಪಡೆದವು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WPL Auction: ಕಳೆದ ವರ್ಷ ಅನ್ ಸೋಲ್ಡ್, ಈ ಬಾರಿ 2 ಕೋಟಿ ರೂ ಪಡೆದ ದಾಖಲೆ ಬರೆದ ಕಶ್ವಿ

WPL Auction; ಬರೋಬ್ಬರಿ 1.3 ಕೋಟಿ ರೂ ಬಾಚಿದ ಕರ್ನಾಟಕದ 21 ವರ್ಷದ ವೃಂದಾ ದಿನೇಶ್

WPL Auction : 2 ಕೋಟಿ ಪಡೆದ ಸತರ್ಲ್ಯಾಂಡ್; ಸೇಲಾಗದ ವೇದಾ, ಪ್ರಿಯಾ ಪೂನಿಯಾ

ಕ್ರಿಕೆಟ್ ಆಸ್ಟ್ರೇಲಿಯಕ್ಕಿಂತ 28 ಪಟ್ಟು ಶ್ರೀಮಂತವಾಗಿದೆ ಬಿಸಿಸಿಐ! ಆದಾಯ ಎಷ್ಟು ಗೊತ್ತಾ?

INDvsSA; ಭಾರತ ವಿರುದ್ಧ ಸರಣಿಗೆ ಮೊದಲು ಹರಿಣಗಳಿಗೆ ಚಿಂತೆ; ಪ್ರಮುಖ ಬೌಲರ್ ಔಟ್
MUST WATCH
ಹೊಸ ಸೇರ್ಪಡೆ

Holalkere ಬಳಿ ಬಸ್ ಪಲ್ಟಿ: ಓರ್ವ ಮೃತ್ಯು, ಮೂವರು ಗಂಭೀರ

TMC ಮಹುವಾ ಮೊಯಿತ್ರಾಗೆ ಬೆಂಬಲ: ಬಿಎಸ್ ಪಿಯಿಂದ ಡ್ಯಾನಿಷ್ ಅಲಿ ಅಮಾನತು

2025ರ ಅಂತ್ಯದ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಅಮಿತ್ ಶಾ

Rabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

Kargil ಯೋಜನೆಯನ್ನು ವಿರೋಧಿಸಿದ್ದಕ್ಕಾಗಿ ನನ್ನ ಪದಚ್ಯುತಿಯಾಯಿತು: ನವಾಜ್ ಷರೀಫ್