ಒಡಿಶಾದಲ್ಲಿ ವಿಶ್ವಕಪ್ ಹಾಕಿ;ಎಲ್ಲಾ ಟಿಕೆಟ್‌ಗಳು ಮಾರಾಟ!: ಭಾರತದ ಅಭಿಮಾನಿಗಳಿಗೆ ನಿರಾಸೆ
Team Udayavani, Dec 19, 2022, 6:44 PM IST
ಭುವನೇಶ್ವರ: ಮುಂದಿನ ತಿಂಗಳು ಒಡಿಶಾದಲ್ಲಿ ನಡೆಯಲಿರುವ ಪುರುಷರ ವಿಶ್ವಕಪ್ ಹಾಕಿಯ ಆಫ್‌ಲೈನ್ ಟಿಕೆಟ್ ಮಾರಾಟ ಸೋಮವಾರದಿಂದ ಪ್ರಾರಂಭವಾಯಿತು, ಆದರೂ ಭಾರತದ ಮೊದಲ ಮೂರು ಪಂದ್ಯಗಳ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿರುವುದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಜನವರಿ 13 ಮತ್ತು 29 ರ ನಡುವೆ ಭುವನೇಶ್ವರದ ಕಳಿಂಗ ಕ್ರೀಡಾಂಗಣ ಮತ್ತು ರೂರ್ಕೆಲಾದಲ್ಲಿ ನೂತನವಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
ಮಹಿಳೆಯರು ಸೇರಿದಂತೆ ಹಾಕಿ ಅಭಿಮಾನಿಗಳು ಬೆಳಗ್ಗೆಯಿಂದಲೇ ಟಿಕೆಟ್ ಪಡೆಯಲು ಕೌಂಟರ್ ಗಳಲ್ಲಿ ಪರದಾಡಿದರು. ಆದರೆ, ಅವರು ಭಾರತದ ಪಂದ್ಯಗಳಿಗೆ ಟಿಕೆಟ್ ಪಡೆಯುವಲ್ಲಿ ವಿಫಲರಾದರು.
“ಜನವರಿ 13 ಮತ್ತು 14 ಪಂದ್ಯಗಳಿಗೆ ಮಾತ್ರ ಟಿಕೆಟ್ ಲಭ್ಯವಿದೆ ಎಂದು ಕೌಂಟರ್‌ನಲ್ಲಿರುವ ವ್ಯಕ್ತಿ ಹೇಳಿದರು. ಆದರೆ, ಆ ಎರಡು ದಿನ ಭಾರತ ಪಂದ್ಯ ಇರುವುದಿಲ್ಲ. ಭಾರತದ ಪಂದ್ಯಗಳ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ ಎಂದು ನಮಗೆ ತಿಳಿಸಲಾಗಿದೆ ಎಂದು ಮೈದಾನಕ್ಕೆ ಬಂದ ಸಿ.ಆರ್.ಮೊಹಾಪಾತ್ರ ಹೇಳಿದರು.
ಜನವರಿ 13, 15 ಮತ್ತು 19 ರಂದು ಕ್ರಮವಾಗಿ ಸ್ಪೇನ್, ಇಂಗ್ಲೆಂಡ್ ಮತ್ತು ವೇಲ್ಸ್ ವಿರುದ್ಧದ ಭಾರತ ಪಂದ್ಯಗಳಿಗೆ ಪಾಸ್‌ಗಳು ಮಾರಾಟವಾಗಿವೆ ಎಂದು ಟಿಕೆಟ್‌ಗಳನ್ನು ಮಾರಾಟ ಮಾಡುವ ವೆಬ್‌ಸೈಟ್ ತೋರಿಸಿದೆ. ಆದಾಗ್ಯೂ, ಎಲ್ಲರೂ ಮೊಹಾಪಾತ್ರರಂತೆ ನಿರಾಶೆಗೊಂಡಿಲ್ಲ.
“ನಾನು ವಿಶ್ವಕಪ್ ಹಾಕಿ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುವುದರಿಂದ ನನಗೆ ತುಂಬಾ ಸಂತೋಷವಾಗಿದೆ” ಎಂದು ಆರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕಾಗಿ ಟಿಕೆಟ್ ಖರೀದಿಸಿದ ಅಖಿಲಾ ಡ್ಯಾಶ್ ಹೇಳಿದರು. ಟಿಕೆಟ್‌ಗಳನ್ನು 100 ರಿಂದ 500 ರೂಪಾಯಿಗಳ ನಡುವೆ ಮಾರಾಟ ಮಾಡಲಾಗುತ್ತಿದೆ.
ಇದು ಪುರುಷರ ಹಾಕಿ ವಿಶ್ವಕಪ್‌ನ 15 ನೇ ಆವೃತ್ತಿಯಾಗಿದೆ. ಹಾಕಿ ಇಂಡಿಯಾ ಎರಡನೇ ಬಾರಿಗೆ ಮೆಗಾ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ, ಮೊದಲನೆಯದು 2018 ರಲ್ಲಿ ಬೆಲ್ಜಿಯಂ ಗೆದ್ದಿತ್ತು. ಒಟ್ಟು 44 ಪಂದ್ಯಗಳ ಪೈಕಿ ಫೈನಲ್ ಸೇರಿದಂತೆ 24 ಪಂದ್ಯಗಳು ಕಳಿಂಗ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇತರೆ ಪಂದ್ಯಗಳು ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ದೇಶದ ಅತಿ ದೊಡ್ಡ ಹಾಕಿ ಕ್ರೀಡಾಂಗಣವಾಗಿರುವ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ 20,000 ವೀಕ್ಷಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಭುವನೇಶ್ವರ ಸೌಲಭ್ಯದ ಸಾಮರ್ಥ್ಯ 15,000 ಆಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ