ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌ಗೆ ಸ್ಫೂರ್ತಿ ತುಂಬಿದ ವಿಶ್ವಕಪ್ ವಿಜಯ
Team Udayavani, Jun 25, 2022, 11:38 PM IST
ಮುಂಬಯಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಕ್ರಿಕೆಟ್ ಪ್ರೀತಿ ಮತ್ತು ಸ್ಫೂರ್ತಿಗೆ ಭಾರತದ 1983ರ ಏಕದಿನ ವಿಶ್ವಕಪ್ ಗೆಲುವೇ ಕಾರಣ ಎಂಬುದು ಖಚಿತಗೊಂಡಿದೆ.
1983ರ ಜೂನ್ 25ರಂದು ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಕಪಿಲ್‌ದೇವ್ ಸಾರಥ್ಯದ ಭಾರತ ಬಲಿಷ್ಠ ವೆಸ್ಟ್ ಇಂಡೀಸನ್ನು ಮಣಿಸಿ ಇತಿಹಾಸ ನಿರ್ಮಿಸಿದಾಗ ಸಚಿನ್‌ಗೆ ಆಗಿನ್ನೂ 10 ವರ್ಷ.
ಶನಿವಾರ ವಿಶ್ವಕಪ್ ಗೆಲುವಿನ 39ನೇ ವಾರ್ಷಿಕೋತ್ಸವ ಸಂಭ್ರಮ. ಈ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್ ಭಾರತೀಯರ ವಿಶ್ವಕಪ್ ಯಶಸ್ಸನ್ನು ನೆನಪಿಸಿಕೊಂಡು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 2 ಚಿತ್ರಗಳನ್ನು ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಒಂದು ಚಿತ್ರ ಕಪಿಲ್‌ದೇವ್ ವಿಶ್ವಕಪ್ ಎತ್ತಿ ಹಿಡಿದದ್ದು. ಇನ್ನೊಂದರಲ್ಲಿ ಪುಣಾಣಿ ಸಚಿನ್ ಅಣ್ಣ ಅಜಿತ್ ಅವರ ಹೆಗಲ ಮೇಲೆ ಕುಳಿತುಕೊಂಡು ವಿಜಯೋತ್ಸವ ಆಚರಿಸುತ್ತಿರುವುದು.
ಇದನ್ನೂ ಓದಿ:2ನೇ ಟಿ20: ಭಾರತ ವನಿತೆಯರ ಸರಣಿ ವಿಕ್ರಮ: ಶ್ರೀಲಂಕಾ ವಿರುದ್ಧ 5 ವಿಕೆಟ್ ಗೆಲುವು
“ಬದುಕಿನ ಕೆಲವು ಕ್ಷಣಗಳು ನಿಮಗೆ ಸ್ಫೂರ್ತಿ ನೀಡುತ್ತವೆ ಮತ್ತು ಕನಸು ಕಾಣಲು ಧೈರ್ಯ ತುಂಬುತ್ತದೆ. 1983ರ ಈ ದಿನ ನಾವು ಮೊದಲ ಸಲ ವಿಶ್ವಕಪ್ ಜಯಿಸಿದ್ದೇವೆ. ಭವಿಷ್ಯದಲ್ಲಿ ನಾನು ಏನು ಮಾಡಬೇಕು, ಏನಾಗಬೇಕು ಎಂಬುದ ನನಗೆ ಆಗಲೇ ತಿಳಿದಿತ್ತು’ ಎಂದು ಸಚಿನ್ ತೆಂಡುಲ್ಕರ್ ಉಲ್ಲೇಖಿಸಿದ್ದಾರೆ.
ಸಚಿನ್ ತೆಂಡುಲ್ಕರ್ ಸೇರಿದಂತೆ, 1990-2000ದ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲ ಕ್ರಿಕೆಟಿಗರಿಗೆ ಕಪಿಲ್‌ದೇವ್ ಅವರ 1983ರ ವಿಶ್ವಕಪ್ ಗೆಲುವೇ ಸ್ಫೂರ್ತಿ ಎಂಬುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಿ ಗೆದ್ದ ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿವ ಡಾ.ನಾರಾಯಣಗೌಡ ಅಭಿನಂದನೆ
ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಡಬಲ್ ಸಂಭ್ರಮ: ಸ್ವರ್ಣ ಗೆದ್ದ ಲಕ್ಷ್ಯ ಸೇನ್
ಕಾಮನ್ವೆಲ್ತ್ ಬಾಡ್ಮಿಂಟನ್: ಬಂಗಾರದ ಬರ ನೀಗಿಸಿದ ಪಿ.ವಿ.ಸಿಂಧು
ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ಸಾಗರ್ ಅಹ್ಲಾವತ್
ಫಿಡೆ ಉಪಾಧ್ಯಕ್ಷರಾಗಿ ವಿಶ್ವನಾಥನ್ ಆನಂದ್ ನೇಮಕ