ವಿಶ್ವ ರಿಲೇ: ಹಿಮಾ ಓಟ ಅನುಮಾನ
Team Udayavani, May 11, 2019, 6:00 AM IST
ಹೊಸದಿಲ್ಲಿ: ಸೊಂಟ ನೋವಿನಿಂದ ಬಳಲುತ್ತಿ ರುವ ಭಾರತದ ಖ್ಯಾತ ಓಟಗಾರ್ತಿ ಹಿಮಾ ದಾಸ್ ವಿಶ್ವ ರಿಲೇ ಕೂಟದಲ್ಲೂ ಭಾಗವಹಿಸುವುದು ಅನುಮಾನವಾಗಿದೆ. ಶನಿವಾರ ಜಪಾನಿನ ಯೊಕೊಹಾಮಾದಲ್ಲಿ ವಿಶ್ವ ರಿಲೇ ಆರಂಭವಾಗಲಿದೆ.
ಹಿಮಾ ದಾಸ್ ಸಹಿತ ಭಾರತ ತಂಡದ ಓಟಗಾರರೆಲ್ಲ ಈಗಾಗಲೇ ಸ್ಪರ್ಧೆಗೆ ಅಣಿಯಾಗಿದ್ದಾರೆ. ಶನಿವಾರ ವನಿತೆಯರ 4×400 ಮೀ. ಹೀಟ್ಸ್, ರವಿವಾರ ಫೈನಲ್ ನಡೆಯಲಿದೆ. ಆದರೆ ಹಿಮಾಗೆ ಇನ್ನೂ ಹೆಚ್ಚಿನ ವಿಶ್ರಾಂತಿ ಅಗತ್ಯವಿರುವ ಕಾರಣ ಓಡುವುದು ಅನುಮಾನ ಎಂದು ತರಬೇತುದಾರ ರಾಧಾಕೃಷ್ಣನ್ ನಾಯರ್ ಹೇಳಿದ್ದಾರೆ. ಒಂದು ವೇಳೆ ಹಿಮಾ ಈ ಕೂಟದಲ್ಲೂ ಓಡದಿದ್ದರೆ, ಸತತ 2ನೇ ಕೂಟವನ್ನು ತಪ್ಪಿಸಿಕೊಂಡಂತಾಗುತ್ತದೆ. ಕಳೆದ ತಿಂಗಳು ದೋಹಾದಲ್ಲಿ ನಡೆದ ಏಶ್ಯ ಚಾಂಪಿಯನ್ಶಿಪ್ನಲ್ಲೂ ಅವರು ಇದೇ ಸಮಸ್ಯೆಯಿಂದ ಗೈರಾರಾಗಿದ್ದರು.
ಭಾರತ ತಂಡದಲ್ಲಿ ಪೂವಮ್ಮ
ಭಾರತ ವನಿತಾ ರಿಲೇ ತಂಡದ ಇತರ ಸದಸ್ಯರೆಂದರೆ ಎಂ.ಆರ್. ಪೂವಮ್ಮ, ವಿ.ಕೆ. ವಿಸ್ಮಯಾ, ಸರಿತಾಬೆನ್ ಗಾಯಕ್ವಾಡ್, ಪ್ರಾಚಿ ಮತ್ತು ಸೋನಿಯಾ ಬೈಶ್ಯ. ಭಾರತದ ಪುರುಷರ ತಂಡವೂ 4×400 ಮೀ. ರಿಲೇಯಲ್ಲಿ ಪಾಲ್ಗೊಳ್ಳಲಿದೆ. ಈ ತಂಡದ ಸದಸ್ಯರೆಂದರೆ ಮೊಹಮ್ಮದ್ ಅನಾಸ್, ರಾಜೀವ್ ಅರೋಕಿಯಾ, ಜೀವನ್ ಕೆ.ಎಸ್., ಕೆ. ಮೊಹಮ್ಮದ್, ಜೀತು ಬಾಬಿ, ಅಲೆಕ್ಸ್ ಆ್ಯಂಟನಿ. ಭಾರತವಿಲ್ಲಿ ಮಿಕ್ಸೆಡ್ 4×400 ಮೀ. ರಿಲೇಯಲ್ಲೂ ಸ್ಪರ್ಧಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ