ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ : ಮೊದಲೆರಡು ಸ್ಥಾನದಲ್ಲಿ ಆಸೀಸ್-ಭಾರತ
Team Udayavani, Jan 12, 2021, 6:20 AM IST
ದುಬಾೖ: ಸಿಡ್ನಿ ಟೆಸ್ಟ್ ಪಂದ್ಯದ ಡ್ರಾ ಫಲಿತಾಂಶದ ಬಳಿಕ ಭಾರತ ಮತ್ತು ಆಸ್ಟ್ರೇಲಿಯ ತಂಡಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲೆರಡು ಸ್ಥಾನ ಕಾಯ್ದುಕೊಂಡಿವೆ. ಭಾರತ ಡ್ರಾ ಸಾಧಿಸಿದ್ದರಿಂದ ನ್ಯೂಜಿಲ್ಯಾಂಡ್ 3ನೇ ಸ್ಥಾನದಲ್ಲೇ ಉಳಿಯುವಂತಾಗಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಕೇವಲ 0.2 ಪ್ರತಿಶತ ಅಂಕದ ವ್ಯತ್ಯಾಸವಿದೆ.
ಸಿಡ್ನಿ ಟೆಸ್ಟ್ ಡ್ರಾದಲ್ಲಿ ಮುಗಿದ ಕಾರಣ ಭಾರತ ಮತ್ತು ಆಸ್ಟ್ರೇಲಿಯ ತಂಡಗಳೆರಡೂ ತಲಾ 10 ಅಂಕ ಪಡೆದವು. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಂಕ 400ಕ್ಕೆ ಏರಿದೆ. ಆಸ್ಟ್ರೇಲಿಯ 332, ನ್ಯೂಜಿಲ್ಯಾಂಡ್ 420 ಅಂಕ ಹೊಂದಿದೆ.
ಅಂಕದ ಬದಲು ಗೆಲುವಿನ ಪ್ರತಿಶತ ಸಾಧನೆ ಮಾನದಂಡವಾಗಿರುವ ಕಾರಣ ಭಾರತ ದ್ವಿತೀಯ ಹಾಗೂ ನ್ಯೂಜಿಲ್ಯಾಂಡ್ ತೃತೀಯ ಸ್ಥಾನದಲ್ಲಿ ಉಳಿಯಬೇಕಾಗಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ ಅನಂತರದ ಸ್ಥಾನದಲ್ಲಿವೆ. ಜೂನ್ ನಲ್ಲಿ ಫೈನ ಲ್ ಅಗ್ರ ತಂಡಗಳೆರಡು ಜೂನ್ನಲ್ಲಿ ನಡೆಯುವ ಫೈನಲ್ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.