
ವನಿತಾ ಪ್ರೀಮಿಯರ್ ಲೀಗ್; ಆಟಗಾರ್ತಿಯರ ಹರಾಜು ದಿನಾಂಕ ಮುಂದೂಡಿಕೆ
Team Udayavani, Feb 1, 2023, 3:34 PM IST

ಮುಂಬೈ: ಐಪಿಎಲ್ ನಂತೆಯೇ ವನಿತಾ ಕ್ರಿಕೆಟ್ ಗೆ ಉತ್ತೇಜನ ನೀಡಲು ಬಿಸಿಸಿಐ ಈ ವರ್ಷದಿಂದ ವನಿತಾ ಪ್ರೀಮಿಯರ್ ಲೀಗ್ ನಡೆಸಲು ಮುಂದಾಗಿದೆ. ಈಗಾಗಲೇ ತಂಡಗಳ ಹರಾಜು ನಡೆದಿದ್ದು, ಆಟಗಾರ್ತಿಯರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಫೆಬ್ರವರಿ 6ರಂದು ನಡೆಯಬೇಕಿದ್ದ ಆಟಗಾರ್ತಿಯರ ಹರಾಜು ಮುಂದೂಡಿಕೆಯಾಗಿದೆ.
ಚೊಚ್ಚಲ ಡಬ್ಲ್ಯೂಪಿಎಲ್ ನ ಆಟಗಾರ್ತಿಯರ ಹರಾಜು ಫೆಬ್ರವರಿ 11 ಅಥವಾ 13ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಐದೂ ತಂಡಗಳ ಮಾಲಕರು ಸದ್ಯ ಯುಎಇ ನಲ್ಲಿ ನಡೆಯುತ್ತಿರುವ ಐಎಲ್ ಟಿ20 ಮತ್ತು ಸೌತ್ ಆಫ್ರಿಕಾ ಟಿ20 ಯಲ್ಲಿ ತಂಡಗಳನ್ನು ಹೊಂದಿದ್ದಾರೆ. ಕ್ರಮವಾಗಿ ಇವೆರಡರ ಫೈನಲ್ ಪಂದ್ಯಗಳು ಫೆಬ್ರವರಿ 11 ಮತ್ತು 12ರಂದು ನಡೆಯಲಿದೆ.
ಹೀಗಾಗಿ ಫೆಬ್ರವರಿ 11 ಅಥವಾ 13ರಂದು ಮುಂಬೈ ಅಥವಾ ಹೊಸದಿಲ್ಲಿಯಲ್ಲಿ ಆಟಗಾರ್ತಿಯರ ಹರಾಜು ನಡೆಯಹುದು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಈ ಬಜೆಟ್ ಕರ್ನಾಟಕದ ಪಾಲಿಗೆ ಗೇಮ್ ಚೇಂಜರ್ : ತೇಜಸ್ವಿ ಸೂರ್ಯ
ಸದ್ಯದ ಮಾಹಿತಿಯ ಪ್ರಕಾರ ಮಾರ್ಚ್ 4ರಿಂದ 24ರವರೆಗೆ ಮೊದಲ ಸೀಸನ್ ನ ಡಬ್ಲ್ಯೂಪಿಎಲ್ ಕೂಟ ನಡೆಯಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

ಐಪಿಎಲ್ 2023: ಆರ್ ಸಿಬಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲ ಹೇಜಲ್ವುಡ್, ಮ್ಯಾಕ್ಸವೆಲ್

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?

ಕೆಲವು ಪಂದ್ಯಗಳಿಗೆ ರೋಹಿತ್ ರೆಸ್ಟ್ : ಸೂರ್ಯಕುಮಾರ್ ಯಾದವ್ ಉಸ್ತುವಾರಿ ನಾಯಕ

ಗತವೈಭವದತ್ತ ಮೊದಲ ಹೆಜ್ಜೆ… 2018ರ ಬಳಿಕ ಓಪನಿಂಗ್ ಸಡಗರ