ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ?


Team Udayavani, Mar 27, 2023, 10:55 AM IST

ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ?

ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ ಎರಡು ಅಥವಾ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.

ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ತನ್ನದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿ ದೇಶದಲ್ಲಿ ನೆಲೆಸಿರುವ ಮಂಡ್ಯದವರು ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿರುವ ಎಲ್ಲ ಕನ್ನಡಿಗರನ್ನು ಅಕ್ಷರ ಜಾತ್ರೆಗೆ ಆಹ್ವಾನಿಸುವ ನಿಟ್ಟಿನಲ್ಲಿ ಪರಿಷತ್ತು ಅಣಿಯಾಗುತ್ತಿದೆ. ಈಗಾಗಲೇ ಮಂಡ್ಯದ ಎರಡು ಕಡೆಗಳಲ್ಲಿ ಸ್ಥಳ ವೀಕ್ಷಿಸಲಾಗಿದೆ.

ಮಂಡ್ಯ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಹಾಗೂ ಚಿಕ್ಕ ಮಂಡ್ಯದಲ್ಲಿ ಅಕ್ಷರ ಜಾತ್ರೆ ಆಯೋಜಿಸುವ ಸಂಬಂಧ ಸ್ಥಳ ಪರಿಶೀಲನೆ ನಡೆಸಲಾಗಿದೆ. ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯಾದ ನಂತರ ಈ ಬಗ್ಗೆ ಚರ್ಚಿಸಿ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತಲೂ ಅದ್ಧೂರಿಯಾಗಿ ಅಕ್ಷರ ಜಾತ್ರೆ ಹಮ್ಮಿಕೊಳ್ಳುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚರ್ಚೆ ನಡೆದಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ಮಂಡ್ಯ ಮೂಲದರು ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅವರು ತಮ್ಮೂರಿನಲ್ಲಿ ನಡೆಯಲಿರುವ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವ ಬಗ್ಗೆ ಒಲವು ತೋರಿದ್ದಾರೆ. ಡಿಸೆಂಬರ್‌ನಲ್ಲಿ ಕ್ರಿಸ್ಮಸ್‌ ರಜೆ ಅಂಗವಾಗಿ ವಿದೇಶದಲ್ಲಿರುವ ಕನ್ನಡಿಗರು ಕೂಡ ತವರೂರಿಗೆ ಆಗಮಿಸಲಿದ್ದಾರೆ. ಕೊಲ್ಲಿ ರಾಷ್ಟ್ರ ಸೇರಿದಂತೆ ವಿವಿಧ ದೇಶದಲ್ಲಿರುವ ಕನ್ನಡಿಗರು ಕೂಡ ಅಧಿಕ ಸಂಖ್ಯೆಯಲ್ಲಿ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಡಿ. 15, 16, 17ರಂದು ಸಾಹಿತ್ಯ ಜಾತ್ರೆ?: ಸಮ್ಮೇಳನವನ್ನು ಡಿಸೆಂಬರ್‌ನ 15, 16 ಮತ್ತು 17ರಂದು ನಡೆಸುವ ಉದ್ದೇಶವಿದೆ. ಹೊಸ ಸರ್ಕಾರದ ಜತೆ ಸಮಾಲೋಚಿಸಿ ಡಿಸೆಂಬರ್‌ನಲ್ಲೆ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ. “ಉದಯವಾಣಿ’ ಜತೆ ಮಾತನಾಡಿದ ಅವರು, ಸಮ್ಮೇಳನಕ್ಕೆ ಸಂಬಂಧಿಸಿದಂತೆ ಆದಿಚುಂಚನ ಶ್ರೀಗಳ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇರಿಸಲಾಗುವುದು. ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸು ಮತ್ತು ಲೋಪದೋಷಗಳನ್ನು ಗಮನದಲ್ಲಿಟ್ಟುಕೊಂಡು ನಾಡಿನ ವಿವಿಧ ಮಠಾಧೀಶರ ಜತೆಗೂ ಸಮಾಲೋಚನೆ ನಡೆಸಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

ಆಯೋಜನೆ ತಪ್ಪಿಸಿಕೊಂಡ ಬಳ್ಳಾರಿ: ಈ ಹಿಂದೆ ಹಾವೇರಿಯಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇನ ಆಯೋಜಿಸುವ ಬಗ್ಗೆ 9 ಜಿಲ್ಲೆಗಳು ಮನವಿ ಮಾಡಿದ್ದವು. ಆದರೆ ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳ ನಡುವೆ ಸಮ್ಮೇಳನ ಆಯೋಜನೆಗೆ ಭಾರೀ ಪೈಪೋಟಿ ಕಂಡುಬಂದಿತ್ತು. ಮತ ಚಲಾವಣೆಯಲ್ಲಿ ಮಂಡ್ಯಕ್ಕೆ 17 ಮತ್ತು ಬಳ್ಳಾರಿಗೆ 16 ಮತ ಲಭಿಸಿದವು. ಹೀಗಾಗಿ, ಬಳ್ಳಾರಿ ಜಿಲ್ಲೆ ಕೇವಲ ಒಂದು ಮತದ ಅಂತರದಿಂದ ಅಕ್ಷರ ಜಾತ್ರೆ ಆಯೋಜನೆ ಕೈ ತಪ್ಪಿಸಿಕೊಂಡಿತು.

ಮಂಡ್ಯ ಜಿಲ್ಲೆಯ ನಾಗಮಂಗಲದ ಮೂಲದವರು ಅಧಿಕ ಸಂಖ್ಯೆಯಲ್ಲಿ ವಿವಿಧ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. ಅವರು ಸೇರಿದಂತೆ ಹಲವು ದೇಶಗಳಲ್ಲಿ ನೆಲೆನಿಂತಿರುವ ಸುಮಾರು 2 ಸಾವಿರ ಕನ್ನಡಿಗರನ್ನು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಾಗುವುದು. ಕ್ರಿಸ್ಮಸ್‌ ಹಬ್ಬದ ಮೊದಲೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಸಬೇಕೆಂಬ ಉದ್ದೇಶವಿದೆ. ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

WI vs UAE ಏಕದಿನ: ಕಿಂಗ್‌ ಶತಕ: ಯುಎಇ ವಿರುದ್ಧ ಗೆದ್ದ ವಿಂಡೀಸ್‌

WI vs UAE ಏಕದಿನ: ಕಿಂಗ್‌ ಶತಕ: ಯುಎಇ ವಿರುದ್ಧ ಗೆದ್ದ ವಿಂಡೀಸ್‌

ಸರ್ಕಾರಿ ಕಚೇರಿಗಳಿಗೆ ಬರುವ ಜನರ ಜೊತೆ ಸೌಜನ್ಯದಿಂದ ವರ್ತಿಸಿ: ಸಿಎಂ

ಸರ್ಕಾರಿ ಕಚೇರಿಗಳಿಗೆ ಬರುವ ಜನರ ಜೊತೆ ಸೌಜನ್ಯದಿಂದ ವರ್ತಿಸಿ: ಸಿಎಂ

“ಗ್ಯಾರಂಟಿ’ ಜಾರಿಗೆ ಷರತ್ತು ಹಾಕಬಾರದು: ಬಿ.ವೈ.ವಿಜಯೇಂದ್ರ

“ಗ್ಯಾರಂಟಿ’ ಜಾರಿಗೆ ಷರತ್ತು ಹಾಕಬಾರದು: ಬಿ.ವೈ.ವಿಜಯೇಂದ್ರ

inಕುಸ್ತಿ ಪಟುಗಳಿಗೆ ಈಗಲಾದರೂ ನ್ಯಾಯ ಸಿಗಲಿ

ಕುಸ್ತಿ ಪಟುಗಳಿಗೆ ಈಗಲಾದರೂ ನ್ಯಾಯ ಸಿಗಲಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

beBelthangady: ರಸ್ತೆ ವಿಚಾರದಲ್ಲಿ ಕುಟುಂಬದ ನಡುವೆ ಹೊಡೆದಾಟ

Belthangady: ರಸ್ತೆ ವಿಚಾರದಲ್ಲಿ ಕುಟುಂಬದ ನಡುವೆ ಹೊಡೆದಾಟ

ವಕೀಲರ ರಕ್ಷಣೆಗೆ ಕಾನೂನು

ವಕೀಲರ ರಕ್ಷಣೆಗೆ ಕಾನೂನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ

1-sdasdasd

ಗೋಹತ್ಯೆ ನಿಷೇಧ ಕಾಯ್ದೆ ಚರ್ಚೆಗೆ ಬಂದಿಲ್ಲ: ಸಚಿವ ತಂಗಡಗಿ

ಉಚಿತ ವಿದ್ಯುತ್ ಗೆ ಹಲವು ಷರತ್ತು; ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಕಡ್ಡಾಯ

Gruha Jyoti ಉಚಿತ ವಿದ್ಯುತ್ ಗೆ ಹಲವು ಷರತ್ತು; ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಕಡ್ಡಾಯ

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

WI vs UAE ಏಕದಿನ: ಕಿಂಗ್‌ ಶತಕ: ಯುಎಇ ವಿರುದ್ಧ ಗೆದ್ದ ವಿಂಡೀಸ್‌

WI vs UAE ಏಕದಿನ: ಕಿಂಗ್‌ ಶತಕ: ಯುಎಇ ವಿರುದ್ಧ ಗೆದ್ದ ವಿಂಡೀಸ್‌

ಸರ್ಕಾರಿ ಕಚೇರಿಗಳಿಗೆ ಬರುವ ಜನರ ಜೊತೆ ಸೌಜನ್ಯದಿಂದ ವರ್ತಿಸಿ: ಸಿಎಂ

ಸರ್ಕಾರಿ ಕಚೇರಿಗಳಿಗೆ ಬರುವ ಜನರ ಜೊತೆ ಸೌಜನ್ಯದಿಂದ ವರ್ತಿಸಿ: ಸಿಎಂ

“ಗ್ಯಾರಂಟಿ’ ಜಾರಿಗೆ ಷರತ್ತು ಹಾಕಬಾರದು: ಬಿ.ವೈ.ವಿಜಯೇಂದ್ರ

“ಗ್ಯಾರಂಟಿ’ ಜಾರಿಗೆ ಷರತ್ತು ಹಾಕಬಾರದು: ಬಿ.ವೈ.ವಿಜಯೇಂದ್ರ

inಕುಸ್ತಿ ಪಟುಗಳಿಗೆ ಈಗಲಾದರೂ ನ್ಯಾಯ ಸಿಗಲಿ

ಕುಸ್ತಿ ಪಟುಗಳಿಗೆ ಈಗಲಾದರೂ ನ್ಯಾಯ ಸಿಗಲಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ