
September 29 ರಂದು ಕರ್ನಾಟಕ ಬಂದ್ ; ನೂರಾರು ಸಂಘಟನೆಗಳ ಬೆಂಬಲ
Team Udayavani, Sep 27, 2023, 5:33 PM IST

ಬೆಂಗಳೂರು: ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಹೋರಾಟ ತೀವ್ರವಾಗಿದ್ದು, ಬೆಂಗಳೂರು ಬಂದ್ ಬೆನ್ನಲ್ಲೇ ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆನೀಡಿದ್ದು, ರೈತ ಪರ ಸೇರಿ ಸಾವಿರಾರು ಸಂಘಟನೆಗಳು ಬೆಂಬಲ ಸೂಚಿಸಿವೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಪ್ರತಿಭಟಿಸಿ ಮಂಗಳವಾರ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿತ್ತು, ಸಂಪೂರ್ಣ ಯಶಸ್ವಿಯಾಗಿದೆ. ಶುಕ್ರವಾರ ನಡೆಯಲಿರುವ ಬಂದ್ ಮಹತ್ವದ ಹಾಗೂ ಗಂಭೀರ ಪ್ರತಿಭಟನೆಯಾಗಲಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸೆ 29ರ ಕರ್ನಾಟಕ ಬಂದ್‌ಗೆ ಎಲ್ಲ ರೈತ ಸಂಘಗಳು ಬೆಂಬಲ ನೀಡುತ್ತವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
