ಸ್ಥಳೀಯರಿಗೇ ಉದ್ಯೋಗ ನೀಡಲಿ: ಇನ್ಫೋಸಿಸ್‌ ನಾರಾಯಣಮೂರ್ತಿ

Team Udayavani, Feb 4, 2017, 3:45 AM IST

03-PTI-6.jpg

ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ “ಅಮೆರಿಕ ಫ‌ಸ್ಟ್‌’ ನೀತಿಗೆ ಜಾಗತಿಕವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ಭಾರತದ ದೈತ್ಯ ಐಟಿ ಕಂಪನಿ ಇನ್ಫೋಸಿಸ್‌ನ ಸ್ಥಾಪಕ ಇನ್ಫೋಸಿಸ್‌ ನಾರಾಯಣಮೂರ್ತಿ, ಭಾರತೀಯ ಕಂಪನಿಗಳು ಎಚ್‌-1ಬಿ ವೀಸಾ ಮೇಲೆ ಹೆಚ್ಚಿನ ಅವಲಂಬನೆ ಇಟ್ಟುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. 

ಆಂಗ್ಲ ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿರುವ, ಅವರು ಭಾರತೀಯ ಕಂಪನಿಗಳು ಬಹು ಸಂಸ್ಕೃತಿಗೆ ಮನ್ನಣೆ ನೀಡಬೇಕು. ಈ ಮೂಲಕ ಸ್ಥಳೀಯರನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ.

ಸದ್ಯ ಭಾರತೀಯ ಕಂಪನಿಧಿಗಳು, ಎಚ್‌-1ಬಿ ವೀಸಾ ಬಳಸಿಕೊಂಡು ಅಮೆರಿಕದಧಿಲ್ಲಿರುವ ಕಂಪನಿಧಿಗಳಿಗೆ ಉದ್ಯೋಧಿಗಿಧಿಗಳನ್ನು ಕಳುಹಿಸುತ್ತಿವೆ. ಆದರೆ ಇತ್ತೀಚೆಗಷ್ಟೇ ಅಮೆರಿಕದ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ಎಚ್‌-1ಬಿ ವೀಸಾದ ಮೇಲೆ ಬರುವವರಿಗೆ ಕನಿಷ್ಠ ವೇತನ ವಾರ್ಷಿಕ 87 ಲಕ್ಷ ರೂ(1,30,000 ಡಾಲರ್‌) ಇರಬೇಕು ಎಂಬ ಮಸೂದೆ ಮಂಡಿಸಲಾಗಿದೆ. ಒಂದು ವೇಳೆ ಇದಕ್ಕೆ ಡೊನಾಲ್ಡ್‌ ಟ್ರಂಪ್‌ ಬೆಂಬಲವನ್ನೇನಾದರೂ ನೀಡಿದರೆ, ಭಾರತೀಯರ ಅಮೆರಿಕದ ಕನಸು ನುಚ್ಚುನೂರಾಗಲಿದೆ ಎಂದೇ ಹೇಳಲಾಗುತ್ತಿದೆ. 

ಆದರೆ ಇನ್ಫೋಸಿಸ್‌ ನಾರಾಯಣಮೂರ್ತಿ ಅವರು, ಈ ಎಲ್ಲ ವಾದಗಳನ್ನು ಬದಿಗೆ ಸರಿಸಿ ಬೇರೆ ವಾದ ಮಂಡಿಸಿದ್ದಾರೆ. ಭಾರತೀಯ ಕಂಪನಿಗಳೇಕೆ ಎಚ್‌-1ಬಿ ವೀಸಾವನ್ನೇ ಅವಲಂಬಿಸಬೇಕು. ಅಮೆರಿಕದಲ್ಲಿ ಕಂಪನಿ ತೆರೆಯುತ್ತೀರಾ ಎಂದಾದ ಮೇಲೆ ಅಲ್ಲಿನವರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು? ಹಾಗೆಯೇ ಆಯಾ ದೇಶಗಳಲ್ಲಿ ಅಲ್ಲಿನವರನ್ನೇ ಉದ್ಯೋಗಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ. ಇದಷ್ಟೇ ಅಲ್ಲ, ಅಮೆರಿಕದಲ್ಲಿರುವ ಭಾರತೀಯ ಕಂಪನಿಗಳು ಅಲ್ಲಿನ ಕಾಲೇಜುಗಳಿಗೆ ಹೋಗಿ ಕ್ಯಾಂಪಸ್‌ ಇಂಟರ್‌ವ್ಯೂ ಮಾಡಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ. 

“”ಒಂದು ವೇಳೆ ಡೊನಾಲ್ಡ್‌ ಟ್ರಂಪ್‌ ಅವರು ಈ ಸಂಬಂಧ ಆದೇಶವನ್ನೇ ಹೊರಡಿಸಲಿ. ಇದನ್ನು ನಮ್ಮ ಅವಕಾಶಕ್ಕಾಗಿಯೇ ಬಳಸಿಕೊಳ್ಳೋಣ. ನಾವು ಅಲ್ಲಿಯವರನ್ನೇ ನೇಮಿಸಿ ಬಹು ಸಂಸ್ಕೃತಿಯ ಕ್ಯಾಂಪಸ್‌ ಮಾಡಿಕೊಳ್ಳೋಣ. ಬಹು ವೈವಿಧ್ಯದ ಪರಿಸರದಲ್ಲಿ ಕೆಲಸ ಮಾಡಲು ಭಾರತದ ಕಂಪನಿಗಳಿಗೆ ಸಿಕ್ಕಿರುವ ಅವಕಾಶ ಎಂದೇ ತಿಳಿಯೋಣ” ಎಂದು ಮೂರ್ತಿ ಹೇಳಿದ್ದಾರೆ. 

ಬಹು ಸಂಸ್ಕೃತಿಯ ಸಮಾಜಕ್ಕೆ ಒಗ್ಗಿಕೊಳ್ಳಲಾರದ ಭಾರತೀಯ ಐಟಿ ಕಂಪನಿಗಳ ಮಾಲೀಕರ ಮನೋಭಾವದಿಂದಾಗಿ, ಭಾರತದಿಂದ ಉದ್ಯೋಗಿಗಳನ್ನು ಕರೆದುಕೊಂಡು ಹೋಗುವುದು “ಸುಲಭದ ಆಯ್ಕೆ’ಯಂತಾಗಿದೆ. ನಾವು ಅಲ್ಲಿಯವರನ್ನೂ ಜೊತೆಗೆ ಸೇರಿಸಿಕೊಂಡು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದಿದ್ದಾರೆ.

ಆದರೆ ನಾರಾಯಣಮೂರ್ತಿ ಅವರ ಈ ಅಭಿಪ್ರಾಯಗಳಿಗೆ ಭಾರತದ ಐಟಿ ತಜ್ಞರು ಬೇರೆಯ ವಾದವನ್ನೇ ಮುಂದಿಡುತ್ತಾರೆ. ಭಾರತದಿಂದ ಉದ್ಯೋಗಿಗಳನ್ನು ಕರೆದುಕೊಂಡು ಹೋಗುವುದು ಸುಲಭದ ಆಯ್ಕೆಯಲ್ಲ ಎಂದಿದ್ದಾರೆ. ವಿಶೇಷವೆಂದರೆ 2005 ರಿಂದ 2014ರ ವರೆಗೆ ಎಚ್‌-1ಬಿ ವೀಸಾ ಬಳಸಿ ಅಮೆರಿಕಕ್ಕೆ ಹೋದವರಲ್ಲಿ ಇನ್ಫೋಸಿಸ್‌, ವಿಪ್ರೋ ಮತ್ತು ಟಿಸಿಎಸ್‌ ಕಂಪನಿಗಳ ಉದ್ಯೋಗಿಗಳೇ ಹೆಚ್ಚು. ಅಂದರೆ ಸುಮಾರು 86 ಸಾವಿರ ಮಂದಿ ಹೋಗಿದ್ದಾರೆ. 

ಈ ಮಧ್ಯೆ ನಾಸ್ಕಾಂ ವರದಿ ಪ್ರಕಾರ, ಅಲ್ಲಿ ಅಮೆರಿಕನ್ನರಿಗೆ ಮತ್ತು ಭಾರತೀಯರಿಗೆ ಒಂದೇ ರೀತಿಯ ವೇತನ ನೀಡಲಾಗುತ್ತಿದೆ. ವಾರ್ಷಿಕ 81,447 ಡಾಲರ್‌ ವೇತನವನ್ನು ಅಮೆರಿಕನ್ನರಿಗೆ ಕೊಟ್ಟರೆ, ಭಾರತೀಯರಿಗೆ 81,022 ಡಾಲರ್‌ ನೀಡಲಾಗುತ್ತಿದೆ. ಹೀಗಾಗಿ ಟ್ರಂಪ್‌ ಅವರ ದೂರದೃಷ್ಟಿ ವಕೌìಟ್‌ ಆಗದೇ ಇರುವ ಸಂಭವವೂ ಹೆಚ್ಚು ಐಟಿ ತಜ್ಞರು ಹೇಳುತ್ತಾರೆ. 

ಟಾಪ್ ನ್ಯೂಸ್

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

The journalist who had reported on Covid was released after 4 years

Wuhan; ಕೋವಿಡ್‌ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ 4 ವರ್ಷ ಬಳಿಕ ರಿಲೀಸ್‌

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

HDK ನಾನೂ ಪೆನ್‌ಡ್ರೈವ್‌ ಬಿಡುತ್ತೇನೆ, ದೊಡ್ಡ ತಿಮಿಂಗಲ ಹಿಡಿಯುತ್ತಾರಾ?

HDK ನಾನೂ ಪೆನ್‌ಡ್ರೈವ್‌ ಬಿಡುತ್ತೇನೆ, ದೊಡ್ಡ ತಿಮಿಂಗಲ ಹಿಡಿಯುತ್ತಾರಾ?

Legislative Council Polls: 29 ಮಂದಿ ನಾಮಪತ್ರ ಸಲ್ಲಿಕೆ

Legislative Council Polls: 29 ಮಂದಿ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಶೈಕ್ಷಣಿಕ ದುರಾಡಳಿತ: ಬಿಜೆಪಿ ಉನ್ನತಮಟ್ಟದ ತನಿಖೆ ನಡೆಸಿ: ಅರುಣ್‌ ಶಹಾಪೂರ್‌

Arun Shahapur ರಾಜ್ಯದಲ್ಲಿ ಶೈಕ್ಷಣಿಕ ದುರಾಡಳಿತ: ಬಿಜೆಪಿ ಉನ್ನತಮಟ್ಟದ ತನಿಖೆ ನಡೆಸಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

The journalist who had reported on Covid was released after 4 years

Wuhan; ಕೋವಿಡ್‌ ಬಗ್ಗೆ ವರದಿ ಮಾಡಿದ್ದ ಪತ್ರಕರ್ತೆ 4 ವರ್ಷ ಬಳಿಕ ರಿಲೀಸ್‌

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan; ಪೆನ್‌ಡ್ರೈವ್‌ ಹಂಚಿದ್ದವರ ಜಾಮೀನು ಅರ್ಜಿ ವಜಾ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಹೋಟೆಲ್‌ಗ‌ಳ ಮೇಲೆ ಎಸ್‌ಐಟಿ ದಾಳಿ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Hassan ಅತ್ಯಾಚಾರ ಪ್ರಕರಣ: ಪೊಲೀಸರ ವಶಕ್ಕೆ ದೇವರಾಜೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.