

Team Udayavani, Apr 19, 2021, 1:21 PM IST
ಮಂಗಳೂರು : ಸಿ.ಟಿ.ರವಿ ಒಬ್ಬ ಕುಲ ಗೋತ್ರ ಗೊತ್ತಿಲ್ಲದ ಮನುಷ್ಯ, ಅವನಿಗೆ ತನ್ನ ಕುಲ ಗೋತ್ರ ಯಾವುದು ಎಂಬುದು ಗೊತ್ತಿಲ್ಲ. ರಾಜೀವ್ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ಟವರು ಎಂದು ಸೋಮವಾರ ಮಂಗಳೂರಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿಕೆ ನೀಡಿದ್ದಾರೆ.
ನಾಯಕರು ಅಂದರೆ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಅಲ್ಲಾ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿ.ರಮಾನಾಥ ರೈ, ಕಾಂಗ್ರೆಸ್ ನಾಯಕರು ಹೋರಾಟ ಮಾಡಿ ಜೈಲಿಗೆ ಹೋದ್ರೆ ಯಡಿಯೂರಪ್ಪ ನವರು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರು. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರೇ ಬಿಜೆಪಿಯವರಿಗೆ ಉತ್ತಮ ನಾಯಕರು ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ. ಬಾಯಿ ಮಾತಿನ ಉಪಚಾರದಿಂದ ಕೊರೋನಾ ನಿಯಂತ್ರಣ ಆಗಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್ ನಿಯಂತ್ರಿಸುವಲ್ಲಿ ಆಕ್ಟಿವ್ ಇಲ್ಲ. ಅಧಿಕಾರಿಗಳು ಮತ್ತು ಸಚಿವರು, ಶಾಸಕರ ನಡುವೆ ಸಮನ್ವಯ ಇಲ್ಲದಾಗಿದೆ ಎಂದರು.
ನೈಟ್ ಕರ್ಫ್ಯೂ ಹಾಕಿ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಟ್ರಾಫಿಕ್ ಜಾಮ್ ಸಮಸ್ಯೆಯನ್ನ ಕೂಡಲೇ ಬಗೆಹರಿಸಬೇಕು. ಕೊವಿಡ್ ಲಾಕ್ ಡೌನ್ ಬಗ್ಗೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಚರ್ಚೆ ಆಗುತ್ತಿದೆ. ನೈಟ್ ಕರ್ಫ್ಯೂ ಹಾಕಿ ಡೇ ಟೈಮ್ ಜನರನ್ನ ಫ್ರೀ ಬಿಡುತ್ತಾರೆ ಇದರಿಂದ ಕೊರೋನಾ ಏನು ರಾತ್ರಿ ಸಮಯದಲ್ಲಿ ಮಾತ್ರ ಬರುತ್ತದೆಯೇ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
Ad
ಯಲ್ಲಾಪುರ: ನಟೋರಿಯಸ್ ಆರೋಪಿ ಕಾಲಿಗೆ ಪೊಲೀಸರ ಗುಂಡು
ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿಲ್ಲ: ನಿತಿನ್ ಗಡ್ಕರಿ
ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಪಾಲಿಸಿಲ್ಲ: ಸಿಎಂ ಸಿದ್ದರಾಮಯ್ಯ
“ಸಿಗಂದೂರು ಚೌಡೇಶ್ವರಿ’ ಸೇತುವೆ ಲೋಕಾರ್ಪಣೆ; ದ್ವೀಪ ಜನರ 70 ವರ್ಷಗಳ ಕನಸು ಸಾಕಾರ
Hyderabad; ಕಲಬೆರಕೆ ಸೇಂದಿ ಸೇವಿಸಿದ 7 ಮಂದಿ ಮೃ*ತ್ಯು, ಹಲವರು ಅಸ್ವಸ್ಥ
You seem to have an Ad Blocker on.
To continue reading, please turn it off or whitelist Udayavani.