ಎಂಟು ವಾರದಲ್ಲಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸುಪ್ರೀಂ ನಿರ್ದೇಶನ
ನಾವು ಸಿದ್ದರಿದ್ದೇವೆ ಎಂದ ಸಿಎಂ ಬೊಮ್ಮಾಯಿ
Team Udayavani, May 20, 2022, 1:28 PM IST
ಬೆಂಗಳೂರು: ಎಂಟು ವಾರದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸೂಚಿಸಿದ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ತೀರ್ಪುನ್ನು ಪಾಲಿಸಬೇಕು.ನಾವು ಚುನಾವಣೆಗೆ ಸಿದ್ದರಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ.
8 ವಾರಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. 8 ವಾರದೊಳಗಡೆ ವಾರ್ಡ್ ಪುನರ್ ವಿಂಗಡಣೆ ಮಾಡಿ ಮೀಸಲಾತಿ ನಿಗದಿಗೆ ಸರಕಾರಕ್ಕೆ 8 ವಾರಗಳ ಗಡುವು ನೀಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂ ಕೋರ್ಟ್ ಚುನಾವಣೆ ನಡೆಸುವ ಬಗ್ಗೆ ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸಂಬಂಧಿಸಿದ ಡಿ ಲಿಮಿಟೇಷನ್ ಪ್ರಕ್ರಿಯೆ ಅಂತಿಮ ಅಂತದಲ್ಲಿದೆ. ಎಂಟು ವಾರದಲ್ಲಿ ಚುನಾವಣಾ ಪ್ರಕ್ರಿಯೆ ಶುರುವಾಗಲಿದೆ. ಈ ಸಂಬಂಧ ಸಮಿತಿ ಕೂಡ ಮಾಡಿದ್ದೇವೆ.ಆದಷ್ಟು ಬೇಗ ಚುನಾವಣೆಯನ್ನ ಮಾಡುತ್ತೇವೆ ಎಂದರು.
ಹಿಂದಿನ ಆದೇಶದಲ್ಲಿ ಮೀಸಲಾತಿ ಇಲ್ಲ ಅಂತ ತೀರ್ಪು ನೀಡಿತ್ತು. ನಂತರ ಓಬಿಸಿ ಮೀಸಲಾತಿ ಸಹಿತ ಚುನಾವಣೆ ಮಾಡಲು ಸೂಚನೆ ನೀಡಿತ್ತು. ನಾವು ಕೂಡ ಓಬಿಸಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸುವುದಿಲ್ಲ ಎಂದು ಹೇಳಿದ್ದೆವು. ಈಗ ನಮ್ಮ ಮನ್ನಣೆಯಂತೆ ಓಬಿಸಿ ಮೀಸಲಾತಿಯೊಂದಿಗೆ ಚುನಾವಣೆ ನಡೆಸಲು ಅನುಮತಿ ದೊರೆತಿದೆ. ಮತ್ತೆ ಕಾಲಾವಕಾಶ ಕೇಲುವುದಿಲ್ಲ, ಕೋರ್ಟ್ ತೀರ್ಪುನ್ನು ಪಾಲಿಸುತ್ತೇವೆ ಎಂದರು.
ಇದನ್ನೂ ಓದಿ : ಮಾಗಡಿ ಕಾಂಗ್ರೆಸ್ ನಲ್ಲಿ ಶುರುವಾದ ಜಟಾಪಟಿ: ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ
ಸರ್ಕಾರದ ಹಂತದಲ್ಲಿ ಸಾಕಷ್ಟು ನಿರ್ಧಾರ ಕೈಗೊಳ್ಳಬೇಕಿದೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿ, ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಮ್ಮ ಲಾಯರ್ ಬಳಿ ಮಾಹಿತಿ ಪಡೆದುಕೊಂಡಿದ್ದೇವೆ. ನಮಗೆ ವಾರ್ಡ್ ಮರುವಿಂಗಡನೆ ಮಾತ್ರ ಮಾಡುವ ಕೆಲಸ ಇದೆ. ರಿಸರ್ವೇಷನ್ ಸರ್ಕಾರದ ಹಂತದಲ್ಲಾಗುತ್ತದೆ. ಈಗ ಸುಪ್ರೀಂ 8 ವಾರ ಸಮಯ ಕೊಟ್ಟಿದೆ ಆಸಮಯದಲ್ಲಿ ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ. ಸರ್ಕಾರದ ಹಂತದಲ್ಲಿ ಸಾಕಷ್ಟು ನಿರ್ಧಾರ ಕೈಗೊಳ್ಳಬೇಕಿದೆ ಎಂದರು.
ಈಗ ನಮ್ಮ ಬಳಿ ಒಂದು ಕಮಿಟಿ ಇದೆ. ಅದರಿಂದ ಎಲ್ಲಾ ಮಾಹಿತಿ ಪಡೆದು ಶೀಘ್ರವೇ ಸಭೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಡಿಲಿಮಿಟೇಷನ್ ಬಹುತೇಕ ಪೂರ್ಣಗೊಂಡಿದೆ. ನಿಗದಿತ ಸಮಯದಲ್ಲಿ ಮುಗಿಸಲಿದ್ದೇವೆ. ಎಲ್ಲವೂ ಮಾನದಂಡಗಳ ಪ್ರಕಾರವೇ ಆಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಂ.ಸಿ ಸುಧಾಕರ್, ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ: ಕೆ.ಹೆಚ್ ಮುನಿಯಪ್ಪ ತೀವ್ರ ಅಸಮಾಧಾನ
ಉದಯಪುರ ಘಟನೆ; ಬುದ್ಧಿಜೀವಿಗಳ ನಾಲಿಗೆಗೆ ಈಗ ಲಕ್ವ ಹೊಡೆದಿದೆಯೇ; ಸಚಿವ ಆರಗ
ಅಭಿವೃದ್ಧಿಗಾಗಿ ರಾಜ್ಯ ಇಬ್ಬಾಗವಾಗಲಿ; ಮತ್ತೆ ಪ್ರತ್ಯೇಕ ರಾಜ್ಯದ ಪರ ಕತ್ತಿ ಬ್ಯಾಟಿಂಗ್
ಉದಯಪುರ ಕೊಲೆ ಅಪರಾಧಿಗಳನ್ನು ಗಲ್ಲಿಗೇರಿಸಬೇಕು: ಸಿಎಂ ಬೊಮ್ಮಾಯಿ
ರಾಷ್ಟ್ರೀಯ ಅಂಕಿಅಂಶ ದಿನ: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!