ಹಂಪಿ ಕನ್ನಡ ವಿವಿಯಲ್ಲಿ ಕರಡಿ ಪ್ರತ್ಯಕ್ಷ:ಆತಂಕ
Team Udayavani, Jun 23, 2022, 7:19 PM IST
ಹೊಸಪೇಟೆ: ತಾಲೂಕಿನ ಕಮಲಾಪುರ ಬಳಿ ಇರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಆವರಣದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ.
ವಿವಿ ಆವರಣದದಲ್ಲಿ ಯಾರ ಭಯವೂ ಇಲ್ಲದೇ ಅಡ್ಡಾಡುತ್ತಿರುವ ದೃಶ್ಯ ವಿದ್ಯಾರ್ಥಿಗಳ ಮೊಬೈಲ್ ಗಳಲ್ಲಿ ಸೆರೆಯಾಗಿದೆ. . ಆದರೆ ಈವರೆಗೆ ಈ ಕರಡಿ ಯಾರಿಗೂ ತೊಂದರೆ ಮಾಡಿಲ್ಲ ಎಂದು ಹೇಳಲಾಗಿದೆ.
ಹಂಪಿ ಕನ್ನಡ ವಿವಿಯ ನಾನಾ ಕಡೆ ಸಂಚಾರ ಮಾಡಿರುವ ಕರಡಿ, ಹಗಲಿನಲ್ಲಿ ವಿವಿಯ ಗಿರಿಸೀಮೆಯ ಬಳಿ ಸೇರಿದಂತೆ ನಾನಾ ಕಡೆ ಓಡಾಟ ನಡೆಸಿ, ಭಯ ಹುಟ್ಟಿಸಿದೆ.
ದರೋಜಿ ಕರಡಿ ಧಾಮಕ್ಕೆ ಹೊಂದಿಕೊಂಡಿರುವ ಕನ್ನಡ ವಿವಿ ಆವರಣಕ್ಕೆ ಆಹಾರ ಹುಡುಕಿಕೊಂಡು ಕರಡಿ ಬಂದಿದೆ ಎನ್ನಲಾಗಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಕಡೆ ಗಮನ ಹರಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.