ಪರಿಷತ್ ಅಭ್ಯರ್ಥಿ ಹೇಮಲತಾ ನಾಯಕ್ ಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ ಬಿಜೆಪಿ
Team Udayavani, May 24, 2022, 2:01 PM IST
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರದಂದೇ ಟಿಕೆಟ್ ಅಂತಿಮವಾದ ಕಾರಣ ಬಿಜೆಪಿ ಅಭ್ಯರ್ಥಿ ಹೇಮಲತಾ ನಾಯಕ್ ಪರದಾಟ ಪಡಬೇಕಾಯಿತು.
ನಾಮಪತ್ರ ಸಲ್ಲಿಕೆ ಮಾಡಲು ಬೆಂಗಳೂರಿಗೆ ಬರಬೇಕಿತ್ತು. ಚುನಾವಣೆ ಟಿಕೆಟ್ ಖಚಿತವಾದ ಮಾಹಿತಿ ಪಡೆದ ಹೇಮಲತಾ ನಾಯಕ್ ಕೊಪ್ಪಳದಿಂದ ಹೊರಟಿದ್ದರು. ಆದರೆ ರಸ್ತೆ ಮಾರ್ಗದಲ್ಲಿ ಬೆಂಗಳೂರು ತಲುಪುವುದು ತಡವಾಗುತ್ತದೆ ಎಂದು ಬಿಜೆಪಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ:ತಪ್ಪಿದ ಪರಿಷತ್ ಟಿಕೆಟ್: ಕಾರ್ಯಕರ್ತರಿಗೆ ಸುದೀರ್ಘ ಪತ್ರ ಬರೆದ ವಿಜಯೇಂದ್ರ
ಹೇಮಲತಾ ನಾಯಕ್ ಅವರು ಕೊಪ್ಪಳದಿಂದ ತುಮಕೂರಿನವರೆಗೆ ಕಾರಿನಲ್ಲಿ ಬಂದಿದ್ದರು. ತುಮಕೂರಿನಿಂದ ಜಕ್ಕೂರು ಏರೋಡ್ರಂವರೆಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ತುಮಕೂರಿನಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಬಂದು ಹೇಮಲತಾ ನಾಯಕ್ ನಾಮಪತ್ರ ಸಲ್ಲಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪದವಿ ಕಾಲೇಜು ಶುಲ್ಕ ನಿಗದಿ ಮಾಡಿದ ಕಾಲೇಜು ಶಿಕ್ಷಣ ಇಲಾಖೆ
ಅಗ್ನಿಪಥ ಯೋಜನೆ ಜಾರಿ ವಿರೋಧಿಸಿ ರಾಜಭವನ ಮುತ್ತಿಗೆಗೆ ಯುವ ಕಾಂಗ್ರೆಸ್ ಯತ್ನ
ಪೊಲೀಸ್ ಕಾನ್ಸ್ಟೇಬಲ್ : ಕನಿಷ್ಠ ಸೇವೆ 6ರಿಂದ 5 ವರ್ಷಕ್ಕೆ ಇಳಿಕೆ: ಡಿಸಿಪಿ ನಿಶಾ ಜೇಮ್ಸ್
ರಾಜ್ಯದಲ್ಲಿಂದು 816 ಕೋವಿಡ್ ಪಾಸಿಟಿವ್ : ಸಕ್ರಿಯ ಪ್ರಕರಣ 5,180
ಹೊಸಪೇಟೆ: ಏಕಾಏಕಿ ಹೊತ್ತಿ ಉರಿದ ಕಾರು ; ಪ್ರಯಾಣಿಕರು ಪಾರು