ಅಧಿಕಾರಿ ಪತ್ನಿ ಬಳಿ 7,000 ಸೀರೆ !


Team Udayavani, Mar 1, 2017, 3:50 AM IST

28-PTI-10.jpg

ಹುಬ್ಬಳ್ಳಿ: ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರ ಮನೆಯಲ್ಲಿ ಬರೋಬ್ಬರಿ 7 ಸಾವಿರ ಸೀರೆ, ಈ ಸೀರೆಗಳ ಒಳಗೆ 2,000 ರೂ. ಮುಖಬೆಲೆಯ 4 ಲಕ್ಷ ರೂ. ಸಿಕ್ಕಿದೆ ! ಹೌದು, ಮಂಗಳವಾರ ಎಸಿಬಿ ಅಧಿಕಾರಿಗಳು ವಿಶ್ವೇಶ್ವರ ನಗರದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಕರಿಯಪ್ಪ ನಿಂಗಪ್ಪ ಕರ್ನಾಳ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಈ ಪ್ರಮಾಣದ ಸೀರೆ ಕಂಡು ದಂಗು ಬಡಿದು ಹೋಗಿದ್ದಾರೆ. ಸುಮಾರು 300 ರೂ.ನಿಂದ 20 ಸಾವಿರ ರೂ.ವರೆಗಿನ ಬೆಲೆಯ ಸೀರೆ ಗಳಿದ್ದು, ಇವುಗಳ ಮೊತ್ತ 2 ಕೋಟಿ ರೂ. ವರೆಗೆ ಆಗಬಹುದಾಗಿದೆ ಎಂದು ಅಂದಾಜಿಸಲಾಗುತ್ತಿದೆ. 

ಅಲ್ಮೇರಾಗಳಲ್ಲಿ ಜವುಳಿ ಅಂಗಡಿಗಳಿ ಗಿಂತಲೂ ಹೆಚ್ಚು ಪ್ರಮಾಣದ ಸೀರೆಗಳನ್ನು ಜೋಡಿಸಿಡಲಾಗಿತ್ತು. ಮೂಲತಃ ಬೆಳಗಾವಿ ಜಿಲ್ಲೆಯವರಾದ ಕರಿಯಪ್ಪ ಅವರ ಪತ್ನಿ ಬಟ್ಟೆಗಳ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಸಿಲುಕಿದ್ದ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಬಳಿ 10 ಸಾವಿರಕ್ಕೂ ಹೆಚ್ಚು ಸೀರೆಗಳು ಪತ್ತೆ ಯಾಗಿದ್ದವು. ಅವರಿಗೆ ಸವಾಲೊಡ್ಡುವ ರೀತಿ ವಾಣಿಜ್ಯ ಇಲಾಖೆ ಸಹಾಯಕ ಆಯುಕ್ತರ ಪತ್ನಿ ಬಳಿ ಸೀರೆ ಸಂಗ್ರಹ ಲಭ್ಯವಾಗಿವೆ.

ಸೀರೆ ಮಧ್ಯೆ ನೋಟು: ಕರಿಯಪ್ಪ ನಿವಾಸದ ಮೇಲೆ ದಾಳಿ ಮಾಡಿದ ಅಧಿ ಕಾರಿಗಳು ಅಲ್ಮೇರಾಗಳಲ್ಲಿ ತಡಕಾಡಲು ಆರಂಭಿಸಿದಾಗ ಶಾಂತಾ ಕರ್ನಾಳಗೆ ಸೇರಿದ ಸಾವಿರಾರು ಸೀರೆಗಳು ಪತ್ತೆಯಾಗಿದ್ದಲ್ಲದೆ, ಈ ಸೀರೆಗಳ ಮಧ್ಯೆ 2,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಇರಿಸಿದ್ದು ಕಂಡು ಬಂದಿತ್ತು. ಸೀರೆಗಳಲ್ಲಿ ಇರಿಸಿದ್ದ ಸುಮಾರು 4 ಲಕ್ಷ ರೂ. ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಮನೆಯಲ್ಲಿ ಒಟ್ಟು 7 ಲಕ್ಷ ರೂ. ವಶಪಡಿಸಿಕೊಂಡಿದ್ದು, ಸೀರೆಗಳ ನಡುವೆಯೇ ನಾಲ್ಕು ಲಕ್ಷವಿತ್ತು ಎನ್ನಲಾಗಿದೆ.

ಟಾಪ್ ನ್ಯೂಸ್

1rain

ಮೂಡಲಗಿಯ ಐದು ಸೇತುವೆಗಳು ಸಂಪೂರ್ಣ ಮುಳಗಡೆ: ಸಂಚಾರ ಸ್ಥಗಿತ

ಸಂಪುಟ ವಿಸ್ತರಣೆ ಕುರಿತು ಚರ್ಚೆಯಿಲ್ಲ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ

ಸಂಪುಟ ವಿಸ್ತರಣೆ ಕುರಿತು ಚರ್ಚೆಯಿಲ್ಲ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ

ಭಾರತದಲ್ಲಿ 24ಗಂಟೆಯಲ್ಲಿ 2,323 ಕೋವಿಡ್ 19 ಸೋಂಕು ಪ್ರಕರಣ ದೃಢ, 25 ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,323 ಕೋವಿಡ್ 19 ಸೋಂಕು ಪ್ರಕರಣ ದೃಢ, 25 ಮಂದಿ ಸಾವು

Praggnanandhaa stuns Magnus Carlsen for the 2nd time in 2022

ಮೂರು ತಿಂಗಳಲ್ಲಿ ಎರಡನೇ ಬಾರಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್ ವಿರುದ್ಧ ಗೆದ್ದ ಪ್ರಗ್ನಾನಂದ

‘ಬಘೀರ’ನಿಗೆ ಮುಹೂರ್ತ; ಶ್ರೀಮುರಳಿ ನಟನೆ- ಹೊಂಬಾಳೆ ನಿರ್ಮಾಣ

‘ಬಘೀರ’ನಿಗೆ ಮುಹೂರ್ತ; ಶ್ರೀಮುರಳಿ ನಟನೆ- ಹೊಂಬಾಳೆ ನಿರ್ಮಾಣ

Delhi Professor Arrested Over Facebook Post On Gyanvapi shivaling

ಜ್ಞಾನವಾಪಿ ಶಿವಲಿಂಗದ ಕುರಿತು ಫೇಸ್‌ಬುಕ್ ಪೋಸ್ಟ್ ಮಾಡಿದ ದೆಹಲಿ ಪ್ರಾಧ್ಯಾಪಕರ ಬಂಧನ

ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ ಉದಯ ಚೌಟ ಇನ್ನಿಲ್ಲ

ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ ಉದಯ ಚೌಟ ಇನ್ನಿಲ್ಲ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಪುಟ ವಿಸ್ತರಣೆ ಕುರಿತು ಚರ್ಚೆಯಿಲ್ಲ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ

ಸಂಪುಟ ವಿಸ್ತರಣೆ ಕುರಿತು ಚರ್ಚೆಯಿಲ್ಲ: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ

thumb-1

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

thumb-2

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

3divorce

ವಿಚ್ಛೇದನಕ್ಕೆ ಒತ್ತಾಯಿಸಿ ಪತ್ನಿ ಮೇಲೆ ಹಲ್ಲೆ: ದೂರು ದಾಖಲು

ಮುಧೋಳ: ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ

ಮುಧೋಳ: ಹೊಳೆಬಸವೇಶ್ವರ ದೇವಸ್ಥಾನ ಜಲಾವೃತ

central-government

ಹಲಸಿಗೆ ಕೇಂದ್ರ ಸರಕಾರದ ನೆರವು ಲಭ್ಯ

2land

ಜಿಲ್ಲೆಯಲ್ಲಿ 7.84 ಲಕ್ಷ ಹೆಕ್ಟೇರ್‌ ಭೂಮಿ ಬಿತ್ತನೆ

mescom

ಮೆಸ್ಕಾಂ: ಕಾರ್ಯಾಚರಣೆಗಿಳಿದ ‘ಮಾನ್ಸೂನ್‌ ಗ್ಯಾಂಗ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.