ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

Team Udayavani, Jul 28, 2021, 6:40 AM IST

ಬಿಎಸ್‌ವೈ ಕಣ್ಣೀರು ಒರೆಸಿದ ವರಿಷ್ಠರು

ಬೆಂಗಳೂರು: “ವಯಸ್ಸಿನ’ ಅಧಿಕೃತ ಕಾರಣಕ್ಕೆ ಸಿಎಂ ಪದವಿಯನ್ನು ತ್ಯಾಗ ಮಾಡಿದ ಯಡಿಯೂರಪ್ಪ, ತಮ್ಮ ಸರಕಾರದ ದ್ವಿತೀಯ ವರ್ಷದ ಸಮಾರಂಭದಲ್ಲೇ ವಿದಾಯವನ್ನೂ ಹೇಳಬೇಕಾಗಿ ಬಂತು. ವಿದಾಯ ಭಾಷಣದಲ್ಲಿ  ತಾವು ಏಕಾಂಗಿಯಾಗಿ ಪಕ್ಷ ಕಟ್ಟಿದ ಸಂದರ್ಭ, ಎದುರಿಸಿದ ಹಲವಾರು ಅಗ್ನಿಪರೀಕ್ಷೆಗಳನ್ನು ವಿವರಿಸುತ್ತಲೇ ಅವರ ದುಃಖ ಉಮ್ಮಳಿಸಿತು. ಕಣ್ಣೀರನ್ನು ಸುರಿಸುತ್ತಲೇ “ಎಲ್ಲರ  ಒಪ್ಪಿಗೆ ಪಡೆದು’ ರಾಜೀನಾಮೆ ಘೋಷಣೆ ಮಾಡಿದರು.

ಈಗ ರಾಜ್ಯ ಬಿಜೆಪಿಯಲ್ಲಿ ಪಿತೃ ಸ್ಥಾನ ದಲ್ಲಿರುವ ಯಡಿಯೂರಪ್ಪ  ಹರಿಸಿದ ಕಣ್ಣೀರು ರಾಜ್ಯ ರಾಜಕಾರಣ ದಲ್ಲಿ  ಅಪಾರ್ಥ ಸಂದೇಶ ರವಾ ನಿಸುವ ಸಾಧ್ಯತೆ ದಟ್ಟವಾಗಿತ್ತು.  ಪಕ್ಷದ ಕಾರ್ಯಕರ್ತರಲ್ಲಿ, ಅವರ ಹಿಂದೆ ಇರುವ ಪ್ರಬಲ ಲಿಂಗಾ ಯತ ಸಮುದಾಯದಲ್ಲಿ  ಹರಡ ಬಹುದಾಗಿದ್ದ ಋಣಾತ್ಮಕತೆ. ಅವು ಗಳೆಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಸ್ಥಿತ್ಯಂತರವನ್ನು ಕಾಂಗ್ರೆಸ್‌ ಬಳಸಿ ಕೊಳ್ಳುವ ಸಾಧ್ಯತೆ ಬಹುತೇಕ ಹೆಚ್ಚಿತ್ತು. ಜತೆಗೆ, ಮುಂದಿನ ವಿಧಾನಸಭೆ ಚುನಾವಣೆ ಮಾತ್ರವಲ್ಲದೆ ಲೋಕಸಭೆ ಚುನಾವಣೆಯನ್ನೂ ಎದುರಿಸ ಬೇಕಾದಾಗ ಯಡಿಯೂರಪ್ಪ ಅವರ ಅಗತ್ಯತೆ ಇವೆಲ್ಲವನ್ನೂ ಮನಗಂಡ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಮನ್ನಣೆ ನೀಡಿರುವುದು ವೇದ್ಯವಾಗುತ್ತದೆ.  ಜತೆಗೆ, ಯಡಿ ಯೂರಪ್ಪ ಅವರ  ಅಧಿಕಾರ ತ್ಯಾಗದ ಸಂದರ್ಭದ ಭಾವುಕ ಕಣ್ಣೀರನ್ನು ಒರೆಸುವ ಉದ್ದೇಶವೂ ವರಿಷ್ಠರಿಗೆ  ಇರುವಂತಿದೆ.

ಹಾಗಾಗಿ ಯಡಿಯೂರಪ್ಪ ಅವರ ಕಣ್ಣೀರಿನ ಗಂಭೀರ ಸಂದೇಶಕ್ಕೆ ಅವರ ಕಣ್ಣೀರು ಒರೆಸುವ ಸಂದೇಶದ ಮೂಲಕ ಪ್ರಮುಖವಾಗಿ ಲಿಂಗಾಯಿತ ಸಮುದಾಯವನ್ನು ಸಮಾಧಾನಿಸುವ ಮತ್ತು ಯಡಿ ಯೂರಪ್ಪ ಅವರ ಮಾತಿಗೆ ಮಣೆ ಹಾಕಿದೆ. ಆ  ಮೂಲಕ ಅವರ ಅಧಿಕಾರ ರಾಜಕಾರಣಕ್ಕೆ ಗೌರವಯುತವಾಗಿ ವಿದಾಯ ಹೇಳುವ ನಿರ್ಧಾರಕ್ಕೆ ಬಿಜೆಪಿ ಬಂದಿರುವ ಸಾಧ್ಯತೆಯಿದೆ. ಶಾಸಕಾಂಗ ಪಕ್ಷ ಸಭೆಯಲ್ಲಿ ಯಡಿಯೂರಪ್ಪ ಅವರ ಮೂಲಕವೇ ಮುಂದಿನ ಮುಖ್ಯಮಂತ್ರಿ ಹೆಸರನ್ನು ಸೂಚಿಸುವಂತೆ ಮಾಡಿ ಅವರ ಆಪ್ತನನ್ನೇ ಮುಖ್ಯಮಂತ್ರಿ ಮಾಡುವ ಮೂಲಕ ಜಾಣ್ಮೆಯ ಸಂದೇಶ ರವಾನಿಸಿದೆ.

ಖಡಕ್‌ ಸಂದೇಶ?:

ಏನಿದ್ದರೂ, ಯಡಿಯೂರಪ್ಪ ತಮ್ಮ ವಿದಾಯದಲ್ಲೂ ರಾಜಕೀಯವಾಗಿ ಮತ್ತಷ್ಟು ಶಕ್ತಿಯುತವಾಗಿ ಹೊರ ಹೊಮ್ಮುವ ಲಕ್ಷಣ ತೋರಿಸಿದ್ದಾರೆ. ತಮ್ಮ ಆಪ್ತನನ್ನೇ ಮುಖ್ಯಮಂತ್ರಿಯಾಗಿಸುವ ಮೂಲಕ ತಮ್ಮ ವಿರೋಧಿ ಬಣದ ನಾಯಕರಿಗೂ ಖಡಕ್‌ ಸಂದೇಶ ನೀಡಿದ್ದಾರೆ. ಅವರ ಪದಚ್ಯುತಿಗೆ ಕಾರಣರಾದ ರಾಜಕೀಯ ನಾಯಕರು ಒಳದಾರಿಯಿಂದ ಸಿಎಂ ಪದವಿಯತ್ತ ಬರುವುದನ್ನು ತಡೆದಿದ್ದಾರೆ.

ಅವರ ರಾಜಕೀಯ ಅನುಭವದ ಅಗಾಧತೆ ಮುಂದೆ ಚಿಕ್ಕವರಾಗಿದ್ದರೂ, ವಿರುದ್ಧ ಮಾತನಾಡಿದ ಕೆಲ ನಾಯಕರಿಗೆ  ಮಾತಿನೇಟು ನೀಡದೆ, ರಾಜಕೀಯ ಪೆಟ್ಟಿನ ಮೂಲಕ ಆಘಾತ ನೀಡಿರುವುದನ್ನು ಗಮನಿಸಬೇಕಿದೆ.

ಆದರೆ ಪಕ್ಷದ ಕೇಂದ್ರ ನಾಯ ಕರೂ ಮುಂದಿನ ರಾಜಕೀಯ ನಡಾವಳಿಗಳನ್ನು ಖಂಡಿತ ಹತ್ತಿರ ದಿಂದ ನೋಡಲಿದ್ದಾರೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಮ್ಮ ಪಕ್ಷದ ನಿಲುವಿಗೆ ತಕ್ಕಂತೆ ರೂಪಿಸುವ ಸಾಧ್ಯತೆ ಹೆಚ್ಚಿದೆ. ಜನತಾ ಪರಿವಾರ ದಿಂದ ಬಂದ ಬೊಮ್ಮಾಯಿ, ಸಮಾಜವಾದಿ ನಾಯಕರ ಗರಡಿ ಯಲ್ಲಿ ಪಳಗಿದವರು. ಈಗ ಬಿಜೆಪಿ ಮುಖ್ಯಮಂತ್ರಿಯಾಗಿರುವ ಅವರನ್ನು ತನ್ನ ಪಕ್ಷದ ಚೌಕಟ್ಟಿನಲ್ಲಿ ಹೇಗೆ ತನ್ನ ಮುಂದಿನ ನಾಯಕನಾಗಿ ರೂಪಿಸುತ್ತದೆ ಮತ್ತು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಬರುವಂತೆ ಹೇಗೆ ನೋಡಿಕೊಳ್ಳುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

-ನವೀನ್‌ ಅಮ್ಮೆಂಬಳ

ಟಾಪ್ ನ್ಯೂಸ್

Mangaluru:”ತಲಾಖ್‌’ ಹೇಳಿ ಮನೆಯಿಂದ ಹೊರ ಹಾಕಿದ ಪತಿ: ಪತ್ನಿ ದೂರು

Mangaluru:”ತಲಾಖ್‌’ ಹೇಳಿ ಮನೆಯಿಂದ ಹೊರ ಹಾಕಿದ ಪತಿ: ಪತ್ನಿ ದೂರು

ಅಕ್ರಮ ಸಕ್ರಮ ಶುಲ್ಕ ಕಡಿಮೆ ಮಾಡಲು ಕ್ರಮ: ಶಾಸಕ ಕೊಡ್ಗಿ

ಅಕ್ರಮ ಸಕ್ರಮ ಶುಲ್ಕ ಕಡಿಮೆ ಮಾಡಲು ಕ್ರಮ: ಶಾಸಕ ಕೊಡ್ಗಿ

ಪ. ವರ್ಗದ ವಿದ್ಯಾರ್ಥಿಗಳ ದಾಖಲಾತಿ ಅವಧಿ ವಿಸ್ತರಣೆ

ಪ. ವರ್ಗದ ವಿದ್ಯಾರ್ಥಿಗಳ ದಾಖಲಾತಿ ಅವಧಿ ವಿಸ್ತರಣೆ

ಆದೂರಿನ ಮನೆಯ ಮೇಲೆ ಪೊಲೀಸರ ದಾಳಿ: ಬೃಹತ್‌ ಪ್ರಮಾಣದ ಸ್ಫೋಟಕ ವಸ್ತು ವಶಕ್ಕೆ

ಆದೂರಿನ ಮನೆಯ ಮೇಲೆ ಪೊಲೀಸರ ದಾಳಿ: ಬೃಹತ್‌ ಪ್ರಮಾಣದ ಸ್ಫೋಟಕ ವಸ್ತು ವಶಕ್ಕೆ

ಕಾಂಗ್ರೆಸ್‌ ಜಯಭೇರಿ ಲೋಕಸಭಾ ಚುನಾವಣೆಗೆ ಮುನ್ನುಡಿ: ಕೆ. ಹರೀಶ್‌ ಕುಮಾರ್‌

ಕಾಂಗ್ರೆಸ್‌ ಜಯಭೇರಿ ಲೋಕಸಭಾ ಚುನಾವಣೆಗೆ ಮುನ್ನುಡಿ: ಕೆ. ಹರೀಶ್‌ ಕುಮಾರ್‌

ಮಂಗಳೂರು: 10 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ

ಮಂಗಳೂರು: 10 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ

ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ಹುಣಸೂರು: ಬಿರುಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು… ಸಿಡಿಲಿಗೆ 3 ಜಾನುವಾರು ಬಲಿ

ರಾಮನಗರದಲ್ಲಿ ಸಿಡಿಲು ಸಹಿತ ವರುಣನ ಅಬ್ಬರ… 4ಮೇಕೆ ಸಾವು, ಮೂವರಿಗೆ ಗಾಯ

ರಾಮನಗರದಲ್ಲಿ ವರುಣನ ಅಬ್ಬರ… ಸಿಡಿಲು ಬಡಿದು 4ಮೇಕೆ ಸಾವು, ಮೂರು ಕುರಿಗಾಹಿಗಳಿಗೆ ಗಾಯ

ಕೆಜಿಎಫ್ ನಲ್ಲಿ ಕೈಗಾರಿಕಾ ಕಾರಿಡಾರ್: ಉನ್ನತ ಪ್ರಾಧಿಕಾರಕ್ಕೆ ಸಚಿವ ಎಂ.ಬಿ ಪಾಟೀಲ್ ಕೋರಿಕೆ

ಕೆಜಿಎಫ್ ನಲ್ಲಿ ಕೈಗಾರಿಕಾ ಕಾರಿಡಾರ್: ಉನ್ನತ ಪ್ರಾಧಿಕಾರಕ್ಕೆ ಸಚಿವ ಎಂ.ಬಿ ಪಾಟೀಲ್ ಕೋರಿಕೆ

ವಿಜಯಪುರ: ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ: 26 ಸಾವಿರ ರೂ. ದಂಡ

ವಿಜಯಪುರ: ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೀವಾವಧಿ ಶಿಕ್ಷೆ: 26 ಸಾವಿರ ರೂ. ದಂಡ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ