ಉಪ ಚುನಾವಣೆ: ಬಿಸಿಲಲ್ಲೂ ಬಿರುಸಿನ ಮತದಾನ ;ಘರ್ಷಣೆ,ಲಾಠಿ ಪ್ರಹಾರ

Team Udayavani, Apr 9, 2017, 11:37 AM IST

4.jpg

ನಂಜನಗೂಡು/ಗುಂಡ್ಲುಪೇಟೆ: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಉಪ ಚುನಾವಣೆ ನಡೆಯುತ್ತಿದ್ದು, ಬಿರುಸಿನ 
ಮತದಾನ ನಡೆಯುತ್ತಿದ್ದು, 2 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ 60 ಶೇಕಡಾ ಮತದಾನವಾಗಿರುವ ಬಗ್ಗೆ ವರದಿಯಾಗಿದೆ. 

ಗುಂಡ್ಲುಪೇಟೆಯಲ್ಲಿ ಪತಿ ಮಹದೇವ್‌ ಪ್ರಸಾದ್‌ ಅವರ ಸಮಾಧಿಗೆ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದ ಬಳಿಕಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರು ಮತ ಚಲಾಯಿಸಿದರು. 

ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ಪ್ರಸಾದ್‌ ಮತ ಚಲಾಯಿಸಿದ್ದು, ಕಳಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತ ಚಲಾಯಿಸಿದ್ದಾರೆ. 

ಬಿಜೆಪಿ -ಕಾಂಗ್ರೆಸ್‌ ಘರ್ಷಣೆ 
ಗುಂಡ್ಲುಪೇಟೆಯ ಬೇಳೂರಿನ ಮತಗಟ್ಟೆಯ ಬಳಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದು ಕೈ-ಕೈ ಮಿಸಲಾಯಿಸಿದ ಬಗ್ಗೆ ವರದಿಯಾಗಿದೆ. 

ಗುಂಡ್ಲುಪೇಟೆಯ ಸರ್ಕಾರಿ ಶಾಲೆಯ ಬಳಿ ಮತಗಟ್ಟೆಯಲ್ಲಿ ಕಾಂಗ್ರೆಸ್‌ -ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಾಗ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ನಂಜನಗೂಡಿನ ಮಹದೇವನಗರದಲ್ಲಿ ಮತದಾರರರು ಮತದಾನ ಬಹಿಷ್ಕರಿಸಿದ್ದಾರೆ.

ಗುಂಡ್ಲುಪೇಟೆಯ ಕೆಲವೆಡೆ ಮತ ಯಂತ್ರಗಳು ಕೈಕೊಟ್ಟು  ಮತದಾನ ವಿಳಂಳಬವಾಗಿದೆ. 

ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಗುಂಡ್ಲುಪೇಟೆಯಲ್ಲಿ ಮತದಾನ ನಡೆಯುತ್ತಿದ್ದರೆ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರಿಂದ ನಂಜನಗೂಡಿನಲ್ಲಿ ಚುನಾವಣೆ ನಡೆಯುತ್ತಿದೆ. ಉಭಯ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.

ಬೆಳಗ್ಗೆ 7 ರಿಂದ ಆರಂಭವಾದ ಮತದಾನ ಸಂಜೆ 5 ಗಂಟೆವರೆಗೆ  ನಡೆಯಲಿದೆ. ಈ ಮಧ್ಯೆ, ಪಂಚರಾಜ್ಯಗಳ ಚುನಾವಣೆ ವೇಳೆ ಮತಯಂತ್ರಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಮತದಾನ ಆರಂಭಕ್ಕೂ ಮುನ್ನ, ಬೆಳಗ್ಗೆ 6 ಗಂಟೆಗೆ ಕಣದಲ್ಲಿರುವ ಅಭ್ಯರ್ಥಿಗಳು ಅಥವಾ ಅವರ ಪರವಾರ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಲಾಯಿತು. ಏ.13ರಂದು ಮತಗಳ ಎಣಿಕೆ ನಡೆಯಲಿದ್ದು ಗೀತಾ ಮಹದೇವಪ್ರಸಾದ್‌, ಶ್ರೀನಿವಾಸ ಪ್ರಸಾದ್‌ ಹಾಗೂ ಕಳಲೆ ಕೇಶವಮೂರ್ತಿ ಮತತು ನಿರಂಜನ್‌ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. 

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿವಿ ಪ್ಯಾಟ್‌ ಇದ್ದು, ಮತದಾರ ತಾನು ಯಾರಿಗೆ ಮತ ಚಲಾಯಿಸಿದ್ದೇನೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಈ ಮಧ್ಯೆ, ಶಾಂತಿಯುತವಾಗಿ ಮತದಾನ ನಡೆಸಲು ಜಿಲ್ಲಾಡಳಿತಗಳು ಸಕಲ ಸಿದ್ದತೆ ನಡೆಸಿದ್ದು, ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. 

ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ನಡೆಯುವ ಎಲ್ಲಾ ಸಂತೆ, ಜಾತ್ರೆ, ಉತ್ಸವ ಇತ್ಯಾದಿಗಳನ್ನು ಮುಂದೂಡಲಾಗಿದೆ. ಉಭಯ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಕಾರ್ಖಾನೆಗಳು ಹಾಗೂ ಇತರ ಖಾಸಗಿ ಸಂಸ್ಥೆಗಳಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ.

ಟಾಪ್ ನ್ಯೂಸ್

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

CM ಸಿದ್ದರಾಮಯ್ಯರನ್ನ ಭೇಟಿಯಾದ ರೇಣುಕಾಸ್ವಾಮಿ ಪೋಷಕರು, ಕಣ್ಣೀರಿಟ್ಟ ದಂಪತಿ

CM ಸಿದ್ದರಾಮಯ್ಯರನ್ನ ಭೇಟಿಯಾದ ರೇಣುಕಾಸ್ವಾಮಿ ಪೋಷಕರು, ಕಣ್ಣೀರಿಟ್ಟ ದಂಪತಿ

siddaCM Siddaramaiah ಕುರಿಗಾಹಿಗಳಿಗೆ ಬಂದೂಕು ಪರವಾನಗಿ ನೀಡಲು ವ್ಯವಸ್ಥೆ

Forest area ಕುರಿಗಾಹಿಗಳಿಗೆ ಬಂದೂಕು ಪರವಾನಗಿ: ಸಿಎಂ ಸಿದ್ದರಾಮಯ್ಯ ಭರವಸೆ

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.