ಭಯೋತ್ಪಾದನೆಯ ದಮನಕ್ಕೆ ಎಚ್ಚರ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Team Udayavani, Oct 21, 2022, 12:27 PM IST

cm-bommai

ಬೆಂಗಳೂರು: ದುಷ್ಟ ಶಕ್ತಿಗಳು ಸಮಾಜದ ಎಲ್ಲ ರಂಗದಲ್ಲೂ ಒಳ ಹೊಕ್ಕಿರುವುದರಿಂದ ಎಚ್ಚರ ಅಗತ್ಯ. ಭಯೋತ್ಪಾದನೆಯ ದಮನಕ್ಕೆ ಸಾಮಾನ್ಯ ಪೇದೆಯೂ ಕೂಡ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಿಸಿ ಮಾತನಾಡಿದರು.

ಕರ್ನಾಟಕ ಪೊಲೀಸ್ ಇಲಾಖೆಗೆ ದೊಡ್ಡ ಇತಿಹಾಸ ಇದೆ. ಅನೇಕ ಸಂದರ್ಭಗಳಲ್ಲಿ ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸಮಾಜದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ದೇಶ ಹಾಗೂ ವಿದೇಶಿ ದುಷ್ಟ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿವೆ.  ಅಪರಾಧ ಘಟಿಸಿದ ನಂತರ ಅದರ ನಿಯಂತ್ರಣಕ್ಕಾಗಿ ಕಾನೂನು ರೂಪುಗೊಳ್ಳುತ್ತದೆ. ಆದರೆ ಇಂಥ ಅಪರಾಧಗಳ ಸಾಧ್ಯತೆಗಳನ್ನು  ಗ್ರಹಿಸಿ ಕಾನೂನುನ್ನು ಮುಂಚಿತವಾಗಿಯೇ ರೂಪಿಸುವ ಅಗತ್ಯವಿದೆ ಎಂದರು.

ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರದ ಅಗತ್ಯ ಇದೆ. ಹಿರಿಯ ಅಧಿಕಾರಿಗಳು ಹೆಚ್ಚು ದಕ್ಷರಾಗಿ ಕಾರ್ಯ ನಿರ್ವಹಿಸಿದರೆ ಕೆಳ ಹಂತದ ಅಧಿಕಾರಿಗಳ ಮೆಲೆ ಪರಿಣಾಮ ಬೀರುತ್ತದೆ. ಪೊಲೀಸರು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೀರಿ. ಅದನ್ನು ಸರ್ಕಾರ ಮತ್ತು ಸಮಾಜ ಗೌರವಿಸುತ್ತದೆ. ತಮ್ಮ ಹಿಂದೆ ಕುಟುಂಬ ಮಕ್ಕಳು ಇದ್ದಾರೆ‌ ಅದನ್ನು ಆಳುವವರು ಗಮನಿಸಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನಿರ್ವಹಣೆಗೆ ಪೊಲೀಸರ ಪಾತ್ರ ಅತ್ಯಂತ ಮುಖ್ಯ ಎಂದರು.

ಪೊಲೀಸರಿಗೆ ಸೌಲಭ್ಯ: ಪೊಲೀಸರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ನಮ್ಮ ಸರ್ಕಾರ ಬೇರೆ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ನೇಮಕಾತಿ ಪ್ರಮಾಣವು ಹೆಚ್ಚಳವಾಗಿದೆ. ಪ್ರತಿ ವರ್ಷ ನಾಲ್ಕು ಐದು ಸಾವಿರ ಪೊಲಿಸರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪೊಲೀಸರ ವಿಶ್ವಾಸಾರ್ಹತೆ ಹೆಚ್ಚಬೇಕಿದೆ. ಯಾವುದೇ ಭ್ರಷ್ಟಾಚಾರ ಆಗದಂತೆ ನೇಮಕಾತಿ ಆಗಬೇಕು. ಅದನ್ನು ನಾವು ಮಾಡುತ್ತೇವೆ. ತರಬೇತಿಯಲ್ಲಿ ಹೊಸ ತಂತ್ರಜ್ಞಾನದ ಪರಿಚಯ, ಸೈಬರ್ ಅಪರಾಧಗಳ ಕುರಿತು  ತರಬೇತಿ ನೀಡುವ ಕೆಲಸ ಆಗಬೇಕು ಎಂದರು.

ಇದನ್ನೂ ಓದಿ:ದಾವಣಗೆರೆಯಲ್ಲಿ ಸಲಿಂಗಕಾಮಿ ಗೆಳತಿಯರ ಜಗಳ; ಬೇರೆ ಯುವತಿಯ ಜತೆ ಮಾತನಾಡಿದಳೆಂದು ಚಾಕು ಇರಿತ

ಪೊಲೀಸರ ತರಬೇತಿಗೆ ಪ್ರತ್ಯೇಕ ಕಮಾಂಡ್: ಕಳೆದ ಒಂದು ವರ್ಷದಲ್ಲಿ ಪೊಲಿಸ್ ಠಾಣೆಗಳ ನಿರ್ಮಾಣ ಹೆಚ್ಚಾಗಿದೆ. ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ. ಇನ್ಸ್ ಪೆಕ್ಟರ್ ಮತ್ತು ಡಿವೈ ಎಸ್ಪಿ ವರ್ಗಗಳ ಅಧಿಕಾರಿಗಳಿಗೆ ತರಬೇತಿ ಅಗತ್ಯವಿದೆ‌. ಅದಕ್ಕೆ ಪ್ರತ್ಯೇಕ ತರಬೇತಿ ಕಮಾಂಡ್ ನಿರ್ಮಿಸಲು ತೀರ್ಮಾನ ಮಾಡಲಾಗಿದೆ ಎಂದರು.

ಸುಧಾರಣೆಗೆ ಕ್ರಮ: ಪೊಲೀಸರ ತ್ಯಾಗ, ಬಲಿದಾನ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸಲು ಪೊಲೀಸ್ ವಸ್ತುಸಂಗ್ರಹಾಲಯ, ಎಟಿಎಸ್ ಬಲವರ್ಧನೆ, ಜೈಲುಗಳ ಸಂಖ್ಯೆ ಹಾಗೂ ಸಾಮರ್ಥ್ಯ ಹೆಚ್ಚಿಸಲಾಗುವುದಲ್ಲದೆ  ಇನ್ನಷ್ಟು ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರ ಪೊಲೀಸರ ಜೊತೆಗಿದೆ: ಪೊಲೀಸರ ತ್ಯಾಗ ವ್ಯರ್ಥವಾಗದಂತೆ ಅದು ಸದಾ ಸ್ಮರಣೆಯಲ್ಲಿ ಇಡುವಂತೆ ಮಾಡುವುದು ನಮ್ಮ ಕೆಲಸ. ನಮ್ಮ ಸರ್ಕಾರ ಪೊಲೀಸರ ಜೊತೆ ಇರುತ್ತದೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಟಾಪ್ ನ್ಯೂಸ್

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

5-desiswara

ಮಮತಾಮಯಿಯಾಗಿದ್ದವಳು ಒನಕೆ ಓಬವ್ವನಂತಾಗಿದ್ದಳು !

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಹುದ್ದೆಗೆ ಫೈಟ್‌ ಇಲ್ಲ

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಹುದ್ದೆಗೆ ಫೈಟ್‌ ಇಲ್ಲ

imf

ಶ್ರೀಲಂಕಾಗೆ ಐಎಂಎಫ್ 3 ಬಿಲಿಯನ್‌ ಡಾಲರ್‌ ನೆರವು

1-weqewq

ಕುಣಿಗಲ್:ಬೈಕ್ ಅವಘಡದಲ್ಲಿ ಇಂಜಿನಿಯರ್ ಸೇರಿ ಇಬ್ಬರ ಮೃತ್ಯು

ಮರಣದಂಡನೆಗೆ ನೇಣು ಬಿಟ್ಟು ಅನ್ಯಮಾರ್ಗ ಹುಡುಕಿ: ಸುಪ್ರೀಂ ಕೋರ್ಟ್‌

ಮರಣದಂಡನೆಗೆ ನೇಣು ಬಿಟ್ಟು ಅನ್ಯಮಾರ್ಗ ಹುಡುಕಿ: ಸುಪ್ರೀಂ ಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಪ್ರಕರಣ ಹೆಚ್ಚಳ: 4 ಜಿಲ್ಲೆಗಳಲ್ಲಿ ನಿಗಾ

ರಾಜ್ಯದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಳ: 4 ಜಿಲ್ಲೆಗಳಲ್ಲಿ ನಿಗಾ

ರಾತ್ರಿ ವೇಳೆ ದಟ್ಟ ಅರಣ್ಯಗಳಲ್ಲಿ ರೈಲಿನ ವೇಗಕ್ಕೆ ವನ್ಯಪ್ರಾಣಿಗಳ ಸಾವು

ರಾತ್ರಿ ವೇಳೆ ದಟ್ಟ ಅರಣ್ಯಗಳಲ್ಲಿ ರೈಲಿನ ವೇಗಕ್ಕೆ ವನ್ಯಪ್ರಾಣಿಗಳ ಸಾವು

ಮಾ.24ಕ್ಕೆ ಸಾರಿಗೆ ಮುಷ್ಕರ ಖಚಿತ

ಮಾ.24ಕ್ಕೆ ಸಾರಿಗೆ ಮುಷ್ಕರ ಖಚಿತ

ನಾನ್ಯಾಕೆ ವರುಣಾಗೆ ಹೋಗಲಿ?: ಸಚಿವ ವಿ.ಸೋಮಣ್ಣ

ನಾನ್ಯಾಕೆ ವರುಣಾಗೆ ಹೋಗಲಿ?: ಸಚಿವ ವಿ.ಸೋಮಣ್ಣ

ಟಿಕೆಟ್‌ ಇಕ್ಕಟ್ಟು; ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿಂದ ಬಿಗಿಪಟ್ಟು

ಟಿಕೆಟ್‌ ಇಕ್ಕಟ್ಟು; ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿಂದ ಬಿಗಿಪಟ್ಟು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ನಿಕ್ಕೆಲ್‌ ಎಂದು ಭಾವಿಸಿದ್ದ ಬ್ಯಾಗ್‌ನಲ್ಲಿತ್ತು ಬರೀ ಕಲ್ಲು !

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

ಆಂಧ್ರದಲ್ಲಿನ್ನು ಬಿಸಿಯೂಟದೊಂದಿಗೆ ಸಿಗಲಿದೆ ರಾಗಿ ಮಾಲ್ಟ್

5-desiswara

ಮಮತಾಮಯಿಯಾಗಿದ್ದವಳು ಒನಕೆ ಓಬವ್ವನಂತಾಗಿದ್ದಳು !

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಹುದ್ದೆಗೆ ಫೈಟ್‌ ಇಲ್ಲ

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ನಡುವೆ ಸಿಎಂ ಹುದ್ದೆಗೆ ಫೈಟ್‌ ಇಲ್ಲ

imf

ಶ್ರೀಲಂಕಾಗೆ ಐಎಂಎಫ್ 3 ಬಿಲಿಯನ್‌ ಡಾಲರ್‌ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.