

Team Udayavani, Mar 21, 2023, 10:37 AM IST
ಹುಬ್ಬಳ್ಳಿ: ವಿಧಾನ ಪರಿಷತ್ತು ಸದಸ್ಯ ಬಾಬುರಾವ ಚಿಂಚನಸೂರು ಅವರು ಕಾಂಗ್ರೆಸ್ ನಿಂದ ಬಂದವರು. ಅವರಿಗೆ ಎಲ್ಲಾ ಗೌರವ, ಸ್ಥಾನಮಾನ ನೀಡಿದರೂ ಪುನಃ ಕಾಂಗ್ರೆಸ್ ಗೆ ಹೊರಟಿದ್ದಾರೆ. ಗುರುಮಠಕಲ್ಲ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಚೆನ್ನಾಗಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಹಲವು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಭಾರತ ಜೋಡೋ ಯಾತ್ರೆ ಮಾಡಿದ್ದಾರೆ. ಇದರಿಂದ ಏನೂ ಆಗುವುದಿಲ್ಲ. ಬ್ರಿಟನ್ ವಿವಿಯಲ್ಲಿ ದೇಶ ವಿರೋಧಿ ಮಾತುಗಳನ್ನಾಡಿದ್ದಾರೆ. ದೇಶ ವ್ಯಾಪ್ತಿ ಇದಕ್ಕೆ ಖಂಡನೆ ವ್ಯಕ್ತವಾಗಿದೆ. ರಾಜ್ಯದ ಜನತೆಯೂ ಕೂಡ ರಾಹುಲ್ ಮಾತಿಗೆ ಬೆಲೆ ಕೊಡುವುದಿಲ್ಲ ಎಂದರು.
ಕಾಂಗ್ರೆಸ್ ನಾಯಕರು ಬೇರೆ ರಾಜ್ಯದಲ್ಲಿ ಈ ರೀತಿ ಸುಳ್ಳು ಭರವಸೆಗಳನ್ನು ನೀಡಿ ಈಡೇರಿಸದೇ ಇರುವುದನ್ನು ದೇಶದ ಜನ ನೋಡಿದ್ದಾರೆ. ರಾಜಾಸ್ತಾನ, ಛತ್ತೀಸಘಡ ಮತ್ತಿತರ ಕಡೆ ಕೊಟ್ಟ ಆಶ್ವಾಸನೆ ಈಡೇರಿಸಿಲ್ಲ. ಜನರನ್ನು ಯಾಮಾರಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದೊಂದು ವಿಸಿಟಿಂಗ್ ಕಾರ್ಡ್ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ವಿರುದ್ಧ ಸಾಕಷ್ಟು ಆರೋಪಗಳಿವೆ. ಲೋಕಾಯುಕ್ತದಲ್ಲಿಯೂ ದೂರುಗಳಿವೆ. ಅಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆಂದರೆ ಇದ್ಲಿಗೆ ಮಸಿಗೆ ಬುದ್ಧಿ ಹೇಳಿದಂತೆ. ಭಾರತದಲ್ಲಿ ಕಾಂಗ್ರೆಸ್ ಪತನ ಶುರುವಾಗಿದೆ. ರೀಡೋ ವಾಚ್ ಬಗ್ಗೆ ನ್ಯಾಯಾಂಗ ತನಿಖೆ ಮಾಡುತ್ತಿದೆ. ವಿಪಕ್ಷಗಳ 59 ಪ್ರಕರಣಗಳ ಪೈಕಿ ಕೆಲವನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇವೆ. ಕೆಲವನ್ನು ಮುಂದಿನ ದಿನಗಳಲ್ಲಿ ಕೊಡುತ್ತೇವೆ ಎಂದರು.
ಬಿಜೆಪಿ ಜನರ ಭಾವನಾತ್ಮಕ ವಿಚಾರಗಳ ಜೊತೆ ಆಟವಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಇತಿಹಾಸವನ್ನು ಮರೆಮಾಚುವ ಕೆಲಸ ನಡೆದಿದೆ. ಹಲವಾರು ಪ್ರಕರಣಗಳಲ್ಲಿ ಸತ್ಯ ಮರೆಮಾಚುವ ಕೆಲಸ ನಡೆದಿದೆ. ಅವುಗಳ ಸತ್ಯ ಹೇಳಿದರೆ ಇವರಿಗೆ ತಡೆದುಕೊಳ್ಳಲಾಗಲ್ಲ. ಸತ್ಯ ಶೋಧನೆ ಆದಾಗ ಎಲ್ಲವೂ ಹೊರಗೆ ಬರುತ್ತದೆ, ಜಯ ಸಿಗುತ್ತದೆ ಎಂದು ತಿಳಿಸಿದರು.
ಸಾರಿಗೆ ನೌಕರರ ಬೇಡಿಕೆ ಈಡೇರಿಸಿದ್ದೇವೆ. ಪ್ರಮುಖ ಸಂಘಟನೆ ಮುಖಂಡರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿದ್ದೇನೆ. ಮುಖಂಡರು ಆಗಮಿಸಿ ಅಭಿನಂದನೆ ಸಲ್ಲಿಸಿ ಮುಷ್ಕರ ವಾಪಸ್ ಪಡೆದಿದ್ದಾರೆ. ಪ್ರಮುಖ ಸಂಘಟನೆ ಜೊತೆ ಮಾತನಾಡಿದ್ದು, ಮುಷ್ಕರಕ್ಕೆ ಹೋಗೋ ಪ್ರಶ್ನೆಯೇ ಇಲ್ಲ ಎಂದರು.
Ad
ನನಗೆ ಸಚಿವ ಸ್ಥಾನ ಬೇಕಿಲ್ಲ, ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ಸಾಕು: ಸಿ.ಪಿ.ಯೋಗೇಶ್ವರ್
Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್
BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ
Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್ ಸಿಂಹ
IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್ ಅಧಿಕಾರಿಗಳ ವರ್ಗಾವಣೆ
SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಜಯಭೇರಿ
Israel Iran War: ಇಸ್ರೇಲ್ ಯುದ್ಧದಲ್ಲಿ 1060 ಪ್ರಜೆಗಳ ಸಾವು: ಇರಾನ್ ಸರ್ಕಾರ
ನನಗೆ ಸಚಿವ ಸ್ಥಾನ ಬೇಕಿಲ್ಲ, ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ಸಾಕು: ಸಿ.ಪಿ.ಯೋಗೇಶ್ವರ್
Tamil Nadu: ಶಾಲಾ ವಾಹನಕ್ಕೆ ರೈಲು ಡಿಕ್ಕಿ: 3 ವಿದ್ಯಾರ್ಥಿಗಳು ಸಾವು
Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್
You seem to have an Ad Blocker on.
To continue reading, please turn it off or whitelist Udayavani.