ಇಂದು ಸಿಎಂ ದಿಲ್ಲಿಗೆ; ಎಲ್ಲರ ಚಿತ್ತ ವರಿಷ್ಠರತ್ತ


Team Udayavani, Nov 18, 2020, 6:21 AM IST

ಇಂದು ಸಿಎಂ ದಿಲ್ಲಿಗೆ; ಎಲ್ಲರ ಚಿತ್ತ ವರಿಷ್ಠರತ್ತ

ಬೆಂಗಳೂರು: ನಿರೀಕ್ಷೆಯಂತೆ ಸಿಎಂ ಬಿಎಸ್‌ವೈ ಅವರು ಬುಧವಾರ ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಪೈಕಿ ವರಿಷ್ಠರು ಯಾವುದಕ್ಕೆ ಹಸುರು ನಿಶಾನೆ ತೋರಲಿದ್ದಾರೆ ಎಂಬುದೇ ಕುತೂಹಲ.

ಇತ್ತೀಚೆಗೆ ವರಿಷ್ಠರೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದೆ ಎನ್ನಲಾದ ಮಾತುಕತೆಯಂತೆ ಯಡಿಯೂರಪ್ಪ ದಿಲ್ಲಿ ಪ್ರವಾಸಕ್ಕೆ ಮುಂದಾಗಿದ್ದಾರೆ. ಈ ಬಾರಿ ಕೆಲವರನ್ನು ಕೈಬಿಟ್ಟು ಮತ್ತೆ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ದೊಡ್ಡ ಮಟ್ಟದಲ್ಲಿ ಯೋಚಿಸುತ್ತಿರುವುದಾಗಿ ಯಡಿಯೂರಪ್ಪ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಹಾಗಾಗಿ ಸಚಿವರು ಮತ್ತು ಸಚಿವಾಕಾಂಕ್ಷಿಗಳ ಚಿತ್ತ ವರಿಷ್ಠರತ್ತ ನೆಟ್ಟಿದೆ.

ಬುಧವಾರ ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಬೆಳಗ್ಗೆ 11.30ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಯಡಿಯೂರಪ್ಪ ಅವರು ವಿಶೇಷ ವಿಮಾನದಲ್ಲಿ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಕೆಲವರನ್ನು ಸಂಪುಟದಿಂದ ಕೈಬಿಡಬೇಕಾದ ಅನಿವಾರ್ಯದ ಬಗ್ಗೆ ಸಿಎಂ ಸಭೆಯಲ್ಲಿ ಪ್ರಸ್ತಾವಿಸುವ ಸಾಧ್ಯತೆ ಇದೆ.

ಸದ್ಯ ಏಳು ಸ್ಥಾನ ಖಾಲಿ
ಸಂಪುಟದಲ್ಲಿ ಸದ್ಯ ಏಳು ಸಚಿವ ಸ್ಥಾನಗಳು ಖಾಲಿ ಇವೆ. ನಾಲ್ಕೈದು ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಯಡಿಯೂರಪ್ಪ ಗಂಭೀರವಾಗಿ ಚಿಂತಿಸಿದ್ದಾರೆ. ಇದರಿಂದ ಖಾಲಿ ಉಳಿಯುವ ಸಚಿವ ಸ್ಥಾನಗಳ ಸಂಖ್ಯೆ 11 ಇಲ್ಲವೇ 12ಕ್ಕೆ ಏರಿಕೆಯಾಗಲಿದೆ. ಈ ಪೈಕಿ ಯಡಿಯೂರಪ್ಪ ಸೂಚಿಸುವ ಐವರು ಮತ್ತು ವರಿಷ್ಠರು ಇಲ್ಲವೇ ಪಕ್ಷ ಸೂಚಿಸುವ ಮೂರ್‍ನಾಲ್ಕು ಮಂದಿಗೆ ಅವಕಾಶ ಕಲ್ಪಿಸಿ ಮೂರು ಸ್ಥಾನ ಖಾಲಿ ಉಳಿಸಿಕೊಳ್ಳಲು ಚಿಂತನೆ ಇದೆ ಎನ್ನಲಾಗಿದೆ.

ವಿಧಾನ ಪರಿಷತ್‌ ಸದಸ್ಯರಾದ ಆರ್‌. ಶಂಕರ್‌, ಎಂ.ಟಿ.ಬಿ. ನಾಗರಾಜ್‌ ಜತೆಗೆ ಇತ್ತೀಚೆಗಷ್ಟೇ ಉಪಚುನಾವಣೆಯಲ್ಲಿ ಗೆದ್ದ ಮುನಿರತ್ನ ಅವರಿಗೆ ಸಚಿವ ಸ್ಥಾನ ಖಚಿತ. ಉಳಿದ ಸ್ಥಾನಗಳನ್ನು ಜಾತಿ, ಪ್ರಾದೇಶಿಕತೆ, ಹಿರಿತನ, ಹೊಸ ಅವಕಾಶ ಇತರೆ ಆಧಾರದಲ್ಲಿ ಸಮತೋಲನ ಸಾಧಿಸುವ ಚಿಂತನೆಯಲ್ಲಿ ಯಡಿಯೂರಪ್ಪ ಇದ್ದಾರೆ ಎಂದೂ ಹೇಳಲಾಗಿದೆ.

ಟಾಪ್ ನ್ಯೂಸ್

1-ffds

ಐವರ ಬಾಳಿಗೆ ಬೆಳಕಾದ ದರ್ಶನ್‌: ಏರ್‌ಲಿಫ್ಟ್ ಮೂಲಕ ಮೈಸೂರಿನಿಂದ ಚೆನ್ನೈಗೆ ಹೃದಯ

hdd

ದೇವೇಗೌಡರಿಗೆ ಕೋವಿಡ್ ಪಾಸಿಟಿವ್: ಆರೋಗ್ಯ ಉತ್ತಮ

Kiribati and Samoa

ಇದುವರೆಗೆ ಕೇವಲ ಎರಡು ಕೋವಿಡ್ ಕೇಸ್ ಪತ್ತೆಯಾದ ದೇಶದಲ್ಲಿ ಲಾಕ್ ಡೌನ್ ಜಾರಿ!

1-wf

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ!: ಸಲ್ಮಾನ್ ಖಾನ್ ಮೇಲೆ ಆರೋಪ

ಗಣರಾಜ್ಯೋತ್ಸವ: ಸಂಭಾವ್ಯ ಉಗ್ರರ ದಾಳಿ ಸಂಚು ವಿಫಲ, RDX, ಗ್ರೆನೇಡ್ ಲಾಂಚರ್ ವಶಕ್ಕೆ

ಗಣರಾಜ್ಯೋತ್ಸವ: ಸಂಭಾವ್ಯ ಉಗ್ರರ ದಾಳಿ ಸಂಚು ವಿಫಲ, RDX, ಗ್ರೆನೇಡ್ ಲಾಂಚರ್ ವಶಕ್ಕೆ

dr-sudhakar

ಕೋವಿಡ್ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ: ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ್’ ಫಸ್ಟ್ ಲುಕ್ ಬಿಡುಗಡೆ

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ’ ಫಸ್ಟ್ ಲುಕ್ ಬಿಡುಗಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

ದೇವೇಗೌಡರಿಗೆ ಕೋವಿಡ್ ಪಾಸಿಟಿವ್: ಆರೋಗ್ಯ ಉತ್ತಮ

dr-sudhakar

ಕೋವಿಡ್ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ: ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ

1-dsadsa

ಸಿಎಂ ಆಗಲು ಪಂಚಮಸಾಲಿ ಮೂರನೇ ಪೀಠ : ನಿರಾಣಿ ವಿರುದ್ಧ ಕಾಶಪ್ಪನವರ್ ಕಿಡಿ

cm-b-bommai

ಯವುದೇ ಒತ್ತಡದಿಂದ ವೀಕೆಂಡ್ ಕರ್ಫ್ಯೂ ಹಿಂದಕ್ಕೆ ಪಡೆದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

MUST WATCH

udayavani youtube

ಬೆಂಕಿಗೆ ಸುಟ್ಟು ಕರಕಲಾದ ಮನೆ : ಸೂರು ಕಳೆದುಕೊಂಡು ಅತಂತ್ರರಾದ ಕುಟುಂಬ

udayavani youtube

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

ಹೊಸ ಸೇರ್ಪಡೆ

1-ffds

ಐವರ ಬಾಳಿಗೆ ಬೆಳಕಾದ ದರ್ಶನ್‌: ಏರ್‌ಲಿಫ್ಟ್ ಮೂಲಕ ಮೈಸೂರಿನಿಂದ ಚೆನ್ನೈಗೆ ಹೃದಯ

15narayana

ನಾರಾಯಣಗುರು ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿ

ನಿಯಮದಂತೆ ವಿದ್ಯುತ್‌ ನೀಡಿ

ನಿಯಮದಂತೆ ವಿದ್ಯುತ್‌ ನೀಡಿ

14lotory-‘

ಲಾಟರಿ ಮೂಲಕ ನಿವೇಶನ ಹಂಚಿಕೆ ತಡೆಗೆ ಆಗ್ರಹಿಸಿ ಮನವಿ

hdd

ದೇವೇಗೌಡರಿಗೆ ಕೋವಿಡ್ ಪಾಸಿಟಿವ್: ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.