

Team Udayavani, May 25, 2024, 9:43 PM IST
ಬೆಂಗಳೂರು: ಪ್ರಜ್ವಲ್ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ವಿಚಾರ ಎಳೆದು ತಂದಿರುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಕ್ಷುದ್ರಗೊಂಡಿದ್ದಾರೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಅನೇಕರು ಎಚ್‌ಡಿಕೆ ಹೇಳಿಕೆಗೆ ಕಿಡಿ ಕಾರಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ ರಾಕೇಶ್ ಸಿದ್ದರಾಮಯ್ಯ ವಿದೇಶಕ್ಕೆ ಹೋಗಿದ್ದು ತಪ್ಪೇ? ಅದೇನು ಕಾನೂನು ಬಾಹಿರವೇ? ಅವರ ಮೇಲೆ ಆರೋಪವಿತ್ತೇ? ತಲೆ ತಪ್ಪಿಸಿಕೊಂಡು ಹೋಗಿದ್ದರೆ? ಇದಕ್ಕೂ ಪ್ರಜ್ವಲ್ ಪ್ರಕರಣಕ್ಕೂ ಏನು ಸಂಬಂಧ. 300-400 ಹೆಣ್ಣುಮಕ್ಕಳ ಭವಿಷ್ಯ ಹಾಳು ಮಾಡಿದ ಪ್ರಕರಣಕ್ಕೆ ಇದನ್ನು ಹೋಲಿಸುತ್ತಾರಾ? ಇದು ಮಾಜಿ ಪ್ರಧಾನಿ ಕುಟುಂಬಕ್ಕೆ ಗೌರವ ತರುತ್ತದೆಯೇ? ನಿಮ್ಮ ಮನೆ ಮಗ ಎಲ್ಲಿ ಎನ್ನುವುದಕ್ಕೆ ಉತ್ತರ ಕೊಡಿ, ಬೇರೆ ಮನೆ ಮಕ್ಕಳ ಬಗ್ಗೆ ಮಾತೇಕೆ? ಎಲ್ಲ ಗೊತ್ತಿದ್ದು ಟಿಕೆಟ್ ಕೊಟ್ಟು ಪ್ರಧಾನಿ ಪ್ರಚಾರ ಮಾಡಿದ್ದೇಕೆ? ಇದು ಮೋದಿ ಬಚಾವೋ ಅಭಿಯಾನದಂತಿದೆ ಎಂದು ವ್ಯಂಗ್ಯವಾಡಿದರು.
ಇನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತಾಡಿ, ಸಿದ್ದರಾಮಯ್ಯ ಪುತ್ರ ರಾಕೇಶ್ ಬಗ್ಗೆ ಕುಮಾರಸ್ವಾಮಿ ಲಘುವಾಗಿ ಮಾತನಾಡಿದ್ದಾರೆ. ಆ ರೀತಿ ವೈಯಕ್ತಿಕವಾಗಿ ಹೇಳಲು ನಮ್ಮ ಬಳಿಯೂ ಸಾಕಷ್ಟು ಇರುತ್ತದೆ. ಸುಮ್ಮನೆ ಕೆಸರು ಚೆಲ್ಲುವ ಕೆಲಸ ಮಾಡಬಾರದು. ಪಾಪ ರಾಕೇಶ್ ಸಾವಾಗಿದೆ. ನೊಂದ ಸಿಎಂ ಮನಸ್ಸಿಗೆ ಮತ್ತೆ ನೋಯಿಸುವ ಕೆಲಸ ಮಾಡಬಾರದು ಎಂದಿದ್ದಾರೆ.
Ad
Devanahalli: ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ
Sirsi:ಖಾನಾಪುರದಲ್ಲಿ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ನಿಲುಗಡೆ;ಬಹುದಿನಗಳ ಬೇಡಿಕೆ ಈಡೇರಿಕೆ
Vijayapura: ಕೊ*ಲೆ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು… ನಾಲ್ವರಿಗಾಗಿ ಶೋಧ
Hubballi: ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ದಾಖಲಾಗಿದ್ದ ಯುವಕ ಚಿಕೆತ್ಸೆ ಫಲಿಸದೆ ಮೃ*ತ್ಯು
Gadag: ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ರೋಹನ್ ಜಗದೀಶ್ ನೇಮಕ
ಕಾಸರಗೋಡು ಪೊಲೀಸರಿಂದ ವಿಶೇಷ ಕಾರ್ಯಾಚರಣೆ: ಹಲವು ಪ್ರಕರಣ ದಾಖಲು
Tragedy: ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಕೇರಳದ ಮಹಿಳೆ
ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ:ಇಬ್ಬರು ಉಪನ್ಯಾಸಕರು, ಗೆಳೆಯ ಸೇರಿ ಮೂವರು ಆರೋಪಿಗಳ ಬಂಧನ
ನಮ್ಮೂರ ಗೆಳೆಯರ ಬಳಗ; ಹಡಿಲು ಗದ್ದೆಗಳಲ್ಲಿ ಭತ್ತ ಬೆಳೆಯುವ ಸಗ್ರಿ ಯುವಕರು!
Devanahalli: ರೈತ ಹೋರಾಟಕ್ಕೆ ಜಯ; ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ
You seem to have an Ad Blocker on.
To continue reading, please turn it off or whitelist Udayavani.