- Tuesday 10 Dec 2019
JDS ಪ್ರಣಾಳಿಕೆಯ ಘೋಷಣೆ ಬಗ್ಗೆ ಏನ್ ಮಾಡ್ತೀರಿ?ಸಾಲಮನ್ನಾ ಬಗ್ಗೆ BSY
Team Udayavani, Jul 3, 2018, 6:43 PM IST
ಬೆಂಗಳೂರು: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಸಾಲಮನ್ನಾ ಮಾಡಲು ನಿರ್ಧರಿಸಿದ್ದೆ, ಆದರೆ ಅದಕ್ಕೆ ಅಡ್ಡಿಪಡಿಸಿದ್ದು ಎಚ್.ಡಿ.ಕುಮಾರಸ್ವಾಮಿ. ಆದರೆ ಈಗ ನೀವೇನ್ ಮಾಡುತ್ತಿದ್ದೀರಿ? ಒಂದು ವೇಳೆ ಬಜೆಟ್ ನಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡದಿದ್ದರೆ ಜುಲೈ 12ರಿಂದ ರಾಜ್ಯಾದ್ಯಂತ ಹೇಳಿದ್ದೇನು, ಮಾಡಿದ್ದೇನು ಘೋಷಣೆಯಡಿ ಪ್ರವಾಸ ಕೈಗೊಳ್ಳುವುದಾಗಿ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು.
ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹಣಕಾಸು ಸಚಿವನಾಗಿದ್ದಾಗ ಸಾಲಮನ್ನಾ ತೀರ್ಮಾನ ಕೈಗೊಂಡಿದ್ದೆ. ಆದರೆ ಅದಕ್ಕೆ ಬಲವಾಗಿ ಅಡ್ಡಿಪಡಿಸಿದವರು ಕುಮಾರಸ್ವಾಮಿ ಎಂದು ವಾಗ್ದಾಳಿ ನಡೆಸಿದರು.
ಏತನ್ಮಧ್ಯೆ ಮಧ್ಯೆ ಪ್ರವೇಶಿಸಿದ ಸಿಎಂ ಕುಮಾರಸ್ವಾಮಿ ನಾನು ಅದಕ್ಕೆ ಅಡ್ಡಿಪಡಿಸಿಲ್ಲ ಎಂದು ಸಮಜಾಯಿಷಿ ನೀಡಲು ಹೋದಾಗ ನನ್ನಲ್ಲಿ ನೀವು ಅಂದು ಹೇಳಿರುವ ಎಲ್ಲಾ ದಾಖಲೆ ಇದೆ ಎಂದು ತಿರುಗೇಟು ನೀಡಿದರು.
ಕಲಾಪದಲ್ಲಿ ಜೆಡಿಎಸ್ ಪ್ರಣಾಳಿಕೆಯನ್ನು ಓದಿದ ಯಡಿಯೂರಪ್ಪ, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ ಪಿಂಚಣಿ ಕೊಡುವುದಾಗಿ ಹೇಳಿದ್ದೀರಿ..ಏನ್ ಮಾಡ್ತೀರಾ ಹೇಳಿ.ಹೀಗೆ ಹಲವು ಘೋಷಣೆ ಮಾಡಿದ್ದೀರಿ. ಸಿಎಂ ಹೇಳಿದ್ದನ್ನೆಲ್ಲಾ ಮಾಡಿದರೆ ನಾವೇ ಅವರಿಗೆ ಜೈಕಾರ ಹಾಕುತ್ತೇವೆ. ಒಂದು ವೇಳೆ ಬಜೆಟ್ ನಲ್ಲಿ ಘೋಷಿಸದಿದ್ದರೆ ರಾಜ್ಯಾದ್ಯಂತ ಹೇಳಿದ್ದೇನು, ಮಾಡಿದ್ದೇನು ಎಂಬ ಸ್ಲೋಗನ್ ಮೂಲಕ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.
ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಈಗಲೇ ಬಜೆಟ್ ಭಾಷಣ ಮಾಡುತ್ತಿದ್ದೀರಾ ಹೇಗೆ ಎಂದು ಪ್ರಶ್ನಿಸಿದಾಗ..ಇದು ಜೆಡಿಎಸ್ ಪ್ರಣಾಳಿಕೆ ಇದರ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಪುಣೆ-ಬೆಂಗಳೂರು ಷಟ್ಪಥ ರಸ್ತೆ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಕೈಗೊಳ್ಳಲಿದ್ದೇವೆ ಮತ್ತು ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು...
-
ಹುಬ್ಬಳ್ಳಿ: ರಾಜ್ಯದಲ್ಲಿ ಸುಭದ್ರ ಸರ್ಕಾರ ಮುಂದುವರೆಯಲಿ ಎಂಬುದು ಜನತೆಯ ಆಶಯವಾಗಿದೆ. ಸಮೀಕ್ಷೆ ಮೀರಿ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಿದೆ. ಗೆದ್ದವರಿಗೆ ನಾವು...
-
ಬೆಂಗಳೂರು: ರಾಜ್ಯದ ಹದಿನೈದು ಕ್ಚೇತ್ರಗಳ ಉಪಚುನಾವಣೆಯ ಫಲಿತಾಂಶ ಬಂದಿದೆ. 12 ಸ್ಥಾನಗಳೊಂದಿಗೆ ಆಡಳಿತಾರೂಢ ಬಿಜೆಪಿಗೆ ಮತದಾರರು ಜೈ ಎಂದಿದ್ದರೆ, ಕಾಂಗ್ರೆಸ್...
-
ಬೆಂಗಳೂರು: ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಭಾರಿ ಚರ್ಚೆಯ ನಂತರ ಮಧ್ಯರಾತ್ರಿ...
-
ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಯಾಕೆ ಹಿನ್ನಡೆ ಆಗಿದೆಯೆಂದು ಸಂಪೂರ್ಣವಾಗಿ ಎಲ್ಲರೊಂದಿಗೆ ಹೇಳುತ್ತೇನೆ ಎಂದು ಕಾಂಗ್ರೆಸ್ ನಾಯಕ...
ಹೊಸ ಸೇರ್ಪಡೆ
-
ಸಿಡ್ನಿ: ದಿಲ್ಲಿ ಬಳಿಕ ಇದೀಗ ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ದಟ್ಟ ಹೊಗೆ ಆವರಿಸಿದ್ದು, ವಾಯುಮಾಲಿನ್ಯ ಪ್ರಮಾಣ ಅಪಾಯದ ಮಟ್ಟಕ್ಕಿಂತ 11 ಪಟ್ಟು ಏರಿಕೆ ಕಂಡಿದೆ. ಕಳೆದ...
-
ಉಜಿರೆ: ಡ್ರಗ್ಸ್, ಕುಡಿತ, ಅತ್ಯಾಚಾರ, ಕಳ್ಳತನ ಇವೆಲ್ಲ ದೋಷಗಳು ದೌರ್ಬಲ್ಯಗಳಾಗಿದ್ದು, ಮುಚ್ಚಿಟ್ಟಷ್ಟು ಜಟಿಲವಾದ ಅನಾಹುತಗಳಿಗೆ ಕಾರಣವಾಗುತ್ತವೆ. ಇವೆಲ್ಲವನ್ನು...
-
ಕಾಸರಗೋಡು: 2020ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಮನೆ ಯಿಲ್ಲದ ಎಲ್ಲರಿಗೂ ವಸತಿ ಭಾಗ್ಯ ಒದಗಲಿದೆ ಎಂದು ಸ್ಥಳೀಯಾಡಳಿತ ಸಚಿವ ಎ.ಸಿ. ಮೊಯ್ದಿನ್ ಭರವಸೆ ನೀಡಿದರು. ವೆಸ್ಟ್...
-
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. 2020ರ ಜನವರಿಯಿಂದ ಮೆಟ್ರೋ ಸಂಚಾರ ಸಮಯದಲ್ಲಿ ವಿಸ್ತರಣೆಯಾಗಿದೆ. ಇನ್ನು ಮೆಟ್ರೋ...
-
ಯುನೈಟೆಡ್ ಕಿಂಗ್ ಡಮ್: 2015ರ ಭೂಕಂಪದಿಂದ ನೇಪಾಳ ಜನರ ಬದುಕು ತತ್ತರಿಸಿ ಹೋಗಿದ್ದು, ಸ್ಥಳೀಯ ಜನರ ಆರೋಗ್ಯ, ಶಿಕ್ಷಣ ಹಾಗೂ ಕುಟುಂಬಗಳಿಗೆ ನೆರವು(ದೇಣಿಗೆ ಸಂಗ್ರಹ)...