

Team Udayavani, Mar 16, 2020, 3:02 AM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಂಘ -ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ. 8 ಮಂದಿಯನ್ನೊಳಗೊಂಡ ಸಮಿತಿ ಇದಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಓಂ ಪ್ರಕಾಶ್ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಇಲಾಖೆಯ ವೈದ್ಯಕೀಯ ವಿಭಾಗದ ಜಂಟಿ ನಿರ್ದೇಶಕ ಡಾ.ಆರ್.ಶ್ರೀನಿವಾಸ್ ಸದಸ್ಯ ಕಾರ್ಯದರ್ಶಿಯಾಗಿ, ಉಳಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಜಿ. ಗಿರೀಶ್, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್.ರವೀಂದ್ರ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಮಧುಸೂದನ್ ಕರಿಗನೂರು, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಪ್ರಸಾರಾಂಗದ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ದೀಪಕ್ ಸೈನಿ ಹಾಗೂ ನಿಮ್ಹಾನ್ಸ್ ಪ್ರಾಧ್ಯಾಪಕ ಡಾ.ವಿ.ರವಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಸಮಿತಿ ಕೊರೊನಾ ಸೋಂಕು ತಡೆಗಟ್ಟುವ ಸಂಬಂಧ ಕಾಲಕಾಲಕ್ಕೆ ಸಭೆ ನಡೆಸಲಿದೆ.
Ad
ಜನೌಷಧಿ ಕೇಂದ್ರ ಮುಚ್ಚುವ ಆದೇಶಕ್ಕೆ ಹೈಕೋರ್ಟ್ ತಡೆ
ದ್ವೇಷಭರಿತ ಹೇಳಿಕೆ ಪ್ರಕರಣ: ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಬಂಧನಕ್ಕೆ ಹೈಕೋರ್ಟ್ ತಡೆ
Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು
Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
You seem to have an Ad Blocker on.
To continue reading, please turn it off or whitelist Udayavani.