ರಾಜ್ಯದಲ್ಲೂ 5 ಕೋಟಿ ಮಂದಿಗೆ ಮುನ್ನೆಚ್ಚರಿಕೆ ಡೋಸ್ ವಿತರಣೆ
Team Udayavani, Jul 13, 2022, 9:48 PM IST
ಬೆಂಗಳೂರು: ಕೇಂದ್ರ ಆರೋಗ್ಯ ಇಲಾಖೆ ಆದೇಶದಂತೆ ರಾಜ್ಯದಲ್ಲೂ ಜು. 15ರಿಂದ ಕೊರೊನಾ ಎರಡನೇ ಡೋಸ್ ಲಸಿಕೆ ಪಡೆದು 75ದಿನ ಪೂರ್ಣಗೊಳಿಸಿದ 18-59ವರ್ಷದೊಳಗಿನ ಸುಮಾರು 5 ಕೋಟಿ ಮಂದಿಗೆ ಬೂಸ್ಟರ್ ಡೋಸ್ ಉಚಿತವಾಗಿ ವಿತರಣೆಯಾಗಲಿದೆ.
ರಾಜ್ಯದಲ್ಲಿ ಕಳೆದ 8 ತಿಂಗಳಿನಿಂದ ಫ್ರಂಟ್ ಲೈನ್ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, 60 ವರ್ಷಮೇಲ್ಪಟ್ಟವರಿಗೆ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಲಸಿಕೆಯನ್ನು ವಿತರಿಸಲಾಗುತ್ತಿದ್ದು, 18ವರ್ಷ ಮೇಲ್ಪಟ್ಟವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ಅನುಮತಿ ನೀಡಲಾಗಿದೆ.
ಇದುವರೆಗೆ 4.90 ಲಕ್ಷ ಫ್ರಂಟ್ ಲೈನ್ ವರ್ಕ್, 4.85 ಆರೋಗ್ಯ ಕಾರ್ಯಕರ್ತರು, 18ವರ್ಷ ಮೇಲ್ಪಟ್ಟ 3.90ಲಕ್ಷ , 60ವರ್ಷ ಮೇಲ್ಪಟ್ಟ 26 ಲಕ್ಷ ಮಂದಿ ಸೇರಿದಂತೆ ಒಟ್ಟು 40 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದುಕೊಂಡಿದ್ದಾರೆ. ಆಗಸ್ಟ್ 15ರ ಸುಮಾರಿಗೆ ಸುಮಾರು 5 ಕೋಟಿ ಮಂದಿ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಅರ್ಹತೆ ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ ಮುನ್ನೆಚ್ಚರಿಕೆ ಡೋಸ್ ವಿತರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಶಿಬಿರ, ಪ್ರಾಥಮಿ, ಸಮುದಾಯ , ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಉಚಿತವಾಗಿ ಅರ್ಹತೆ ಇರುವವರಿಗೆ ಲಸಿಕೆ ವಿತರಣೆಯಾಗಲಿದೆ.