
Davanagere: ಎತ್ತುಗಳ ಮೈತೊಳೆಯಲು ಹೋಗಿದ್ದ ಮೂವರು ನೀರುಪಾಲು
Team Udayavani, Apr 23, 2023, 9:44 PM IST

ದಾವಣಗೆರೆ:ತುಂಗಭದ್ರಾ ನದಿಯಲ್ಲಿ ಎತ್ತುಗಳ ಮೈತೊಳೆಯಲು ಹೋಗಿದ್ದ ಮೂವರು ಯುವಕರು ನೀರು ಪಾಲಾಗಿರುವ ಘಟನೆ ಭಾನುವಾರ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ವೀರಪ್ಪ ಎಂಬುವರ ಪುತ್ರ ಪವನ್ ಹಾಗೂ ಬಸವರಾಜಪ್ಪನವರ ಮಕ್ಕಳಾದ ಕಿರಣ್, ವರುಣ್ ನೀರು ಪಾಲಾದವರು.
ಮುಂಜಾನೆ ಹೊಲದಲ್ಲಿ ಬೇಸಾಯ ಮುಗಿಸಿದ ನಂತರ ತುಂಗಭದ್ರಾ ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸಲು ಹೋದಾಗ ಎತ್ತುಗಳು ಓರ್ವನನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದ್ದು, ಆತನನ್ನು ಉಳಿಸಲು ಹೋದ ಇನ್ನಿಬ್ಬರು ಸಹ ನೀರು ಪಾಲಾಗಿದ್ದಾರೆ. ವಯಸ್ಸಿಗೆ ಬಂದ ಮಕ್ಕಳು ನೀರು ಪಾಲಾಗಿದ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತುಂಗಭದ್ರಾ ನದಿಯಲ್ಲಿ ಮುಳುಗಿ ನೀರು ಪಾಲಾದ ಮೂವರು ಯುವಕರಲ್ಲಿ ವರುಣ್ ಎಂಬುವವನ ಮೃತ ದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗೆ ಹುಡುಕಾಟ ನಡೆಸುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬಂದಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ರೇಣುಕಾಚಾರ್ಯ, ಕೂಡಲೇ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರು, ನಂತರ ಘಟನಾ ಸ್ಥಳಕ್ಕೆ ತೆರಳಿದ ಶಾಸಕರು ಹರಿಹರದಿಂದ ಮುಳುಗು ತಜ್ಞರನ್ನು ಕರೆಸುವಂತೆ ಸಂಬಂಧ ಪಟ್ಟವರಿಗೆ ಸೂಚನೆ ನೀಡಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ದುಖಃ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bandh; ಕಾವೇರಿಗಾಗಿ ಬೆಂಗಳೂರು ಬಂದ್; ಹಲವೆಡೆ ಪ್ರತಿಭಟನೆ, ರೈತ ಮುಖಂಡರು ಪೊಲೀಸ್ ವಶಕ್ಕೆ

Cauvery issue; ಕೇಂದ್ರ ಸರ್ಕಾರವು ರಾಜ್ಯದ ರೈತರ ಪರವಿದೆ: ಶೋಭಾ ಕರಂದ್ಲಾಜೆ

Former Chief Minister ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ನಿಧನ

Cauvery issue; ನಟ ದರ್ಶನ್ ವಿರುದ್ಧ ಕಾವೇರಿ ಹೋರಾಟಗಾರರ ಆಕ್ರೋಶ

Bengaluru Bandh: ಗಡಿಯಲ್ಲಿ ಕರ್ನಾಟಕ ಪ್ರವೇಶಿಸುವ ತಮಿಳುನಾಡು ನೋಂದಣಿ ವಾಹನ ನಿರ್ಬಂಧ
MUST WATCH
ಹೊಸ ಸೇರ್ಪಡೆ

Bandh; ಕಾವೇರಿಗಾಗಿ ಬೆಂಗಳೂರು ಬಂದ್; ಹಲವೆಡೆ ಪ್ರತಿಭಟನೆ, ರೈತ ಮುಖಂಡರು ಪೊಲೀಸ್ ವಶಕ್ಕೆ

Mumbai Police: 26/11ರ ಮುಂಬೈ ದಾಳಿ… ತಹವ್ವುರ್ ರಾಣಾ ವಿರುದ್ಧ 400 ಪುಟಗಳ ಚಾರ್ಜ್ ಶೀಟ್

Buzz: ಒಂದೇ ದಿನ ʼಸಲಾರ್-ಡಂಕಿʼ ರಿಲೀಸ್: ವರ್ಷಾಂತ್ಯಕ್ಕೆ ದೊಡ್ಡ ಬಾಕ್ಸ್ ಆಫೀಸ್ ದಂಗಲ್?

Road mishap: ಕಾರಿಗೆ ಬೈಕ್ ಡಿಕ್ಕಿ: ಹೆಲ್ಮೆಟ್ ಧರಿಸದ ಯುವಕ ಸಾವು

UV Fusion: ಸ್ವಾರಸ್ಯಗಳ ತಾಣ ಕಾಲೇಜು ಕ್ಯಾಂಪಸ್