ಅಳ್ನಾವರದಲ್ಲಿ ಹಳಿ ಬಿಟ್ಟ ಗೂಡ್ಸ್ ರೈಲು ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ
Team Udayavani, Jan 9, 2022, 2:25 PM IST
ಅಳ್ನಾವರ: ಇಲ್ಲಿನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಸರಕು ಸಾಗಾಣಿಕೆ ರೈಲಿನ ಬೋಗಿಯೊಂದು ಹಳಿ ತಪ್ಪಿದ ಘಟನೆ ಶನಿವಾರ ನಡೆದಿದ್ದು, ಹಳಿಗಳಿಗೆ ಯಾನಿಯಾಗಿದ್ದು ಬಿಟ್ಟರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳಗ್ಗೆ ಧಾರವಾಡ ಕಡೆಯಿಂದ ಲೋಂಡಾ ಕಡೆಗೆ ಹೋಗುತ್ತಿದ್ದ ಸರಕು ತುಂಬಿದ ರೈಲು ಇಲ್ಲಿನ ನಿಲ್ದಾಣದ ಐದನೇ ಮಾರ್ಗದಲ್ಲಿ ಚಲಿಸುವಾಗ ಒಂದು ಬೋಗಿ ಮಾತ್ರ ಹಳಿ ಬಿಟ್ಟು ಕೆಳಗಿಳಿದು ಸುಮಾರು ಅರ್ಧ ಕಿಮೀ ವರೆಗೆ ಚಲಿಸಿದೆ. ಇದರಿಂದ ಹಳಿಯ ಸ್ಲೀಪರ್ ಗಳು ಪುಡಿಯಾಗಿವೆ. ಘಟನೆ ಜರುಗಿದ ಸ್ಥಳದಲ್ಲಿ ಕೆಳರಸ್ತೆಯ ಸೇತುವೆಯಿದ್ದು ಬೋಗಿಯು ರಸ್ತೆಗೆ ಉರುಳಿದ್ದರೆ ಜೀವಹಾನಿ ಸಂಭವಿಸುವ ಸಾಧ್ಯತೆಯಿತ್ತು. ಜೊತೆಗೆ ಹಳಿಗೆ ಹೊಂದಿಕೊಂಡಂತೆ ಇರುವ ರೈಲ್ವೆ ವಿದ್ಯುತ್ ಮಾರ್ಗದ ಕಂಬಗಳಿಗೂ ಹಾನಿಯಾಗುತ್ತಿತ್ತು. ಸ್ಥಳಕ್ಕೆ
ಇಲಾಖೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ನೂರಾರು ಸಿಬ್ಬಂದಿ ಯುದ್ದೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡು ರೈಲು ಓಡಾಟಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ : ಸಚಿವ ಸೋಮಶೇಖರ್ ಪುತ್ರನಿಗೆ ಬ್ಲ್ಯಾಕ್ ಮೇಲ್: ಖ್ಯಾತ ಜ್ಯೋತಿಷಿ ಪುತ್ರ ಸೇರಿ ಇಬ್ಬರ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..