
Karnataka ಸಿಕ್ಕೀತೇ ನಿಗಮ ಅಧ್ಯಕ್ಷತೆ? ಇಂದು ಸಿಎಂ, ಡಿಸಿಎಂ ಜತೆ ಸುರ್ಜೇವಾಲಾ ಚರ್ಚೆ
Team Udayavani, Nov 21, 2023, 12:54 AM IST

ಬೆಂಗಳೂರು: ನಿಗಮ- ಮಂಡಳಿಗಳಿಗೆ ನೇಮಕಕ್ಕಾಗಿ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಂಗಳ ವಾರ ಬೆಂಗಳೂರಿಗೆ ಆಗಮಿಸಿ ಸಮಾಲೋಚನೆ ನಡೆಸಲಿದ್ದಾರೆ.
ಸಚಿವ ಸ್ಥಾನ ಕೈತಪ್ಪಿರುವ ಶಾಸಕರನ್ನು ಸಮಾಧಾನ ಪಡಿಸಲು ನಿಗಮ- ಮಂಡಳಿ ನೇಮಕಕ್ಕೆ ಹಸುರು ನಿಶಾನೆ ಸಿಗುವ ಸಾಧ್ಯತೆಗಳಿದ್ದು, ಮೊದಲ ಹಂತದಲ್ಲಿ 20-30 ಶಾಸಕರಿಗೆ ಸ್ಥಾನ ಸಿಗುವ ಸಂಭವವಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿ ಸಂಭವನೀಯರ ಪಟ್ಟಿ ಸಿದ್ಧಪಡಿಸಿದ್ದಾರೆ. ಈ ಪಟ್ಟಿಗೆ ಅಂತಿಮ ಸ್ವರೂಪ ನೀಡುವ ಸಾಧ್ಯತೆಗಳಿವೆ.
ಮೂರು ಹಂತಗಳಲ್ಲಿ ಭರ್ತಿ
ಒಟ್ಟು ಮೂರು ಹಂತಗಳಲ್ಲಿ ನಿಗಮ- ಮಂಡಳಿ ಆಯ್ಕೆ ಪ್ರಕ್ರಿಯೆ ನಡೆಸಲು ಚಿಂತನೆ ನಡೆದಿದೆ. ಮೊದಲ ಹಂತದಲ್ಲಿ ಶಾಸಕರಿಗೆ, ಎರಡು ಮತ್ತು ಮೂರನೇ ಹಂತದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಪ್ರಮುಖ ಮುಖಂಡರಿಗೆ ಸ್ಥಾನ ಕಲ್ಪಿಸಲಾಗುತ್ತದೆ. ನೀರಾವರಿ, ಲೋಕೋಪಯೋಗಿ, ಕಾರ್ಮಿಕ ಸಹಿತ ಕೆಲವು ಇಲಾಖೆಗಳಿಗೆ ಸಂಬಂಧಿಸಿದ ನಿಗಮ-ಮಂಡಳಿಗಳ ಸಂಖ್ಯೆ ಹೆಚ್ಚಿದ್ದು, ಇವುಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಭರ್ತಿ ಮಾಡಲು ಆದ್ಯತೆ ನೀಡುವ ನಿರೀಕ್ಷೆಯಿದೆ.
ಕೆಪಿಸಿಸಿ ಪುನಾರಚನೆ ಚರ್ಚೆ?
ಕೆಪಿಸಿಸಿ ಪುನಾರಚನೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿದ್ದು, ಲೋಕಸಭೆ ಚುನಾವಣೆ ಒಳಗಾಗಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಕಾರ್ಯಾಧ್ಯಕ್ಷರ ಬದ ಲಾವಣೆ ಮಾಡುವ ಚಿಂತನೆಗಳಿವೆ. ಸಚಿವ ರಿಂದ ತಮ್ಮ ಇಲಾಖೆಗಳಲ್ಲಿ 6 ತಿಂಗಳಿಂದ ಆಗಿರುವ ಸಾಧನೆಯ ವರದಿಯನ್ನೂ ಹೈಕಮಾಂಡ್ ಕೇಳಿದೆ. ಈ ಬಗ್ಗೆಯೂ ಸಮಾಲೋಚನೆ ನಡೆಸಿ, ಲೋಕಸಭೆ ಚುನಾವಣೆಯ ತಯಾರಿಗೂ ಮುನ್ನುಡಿ ಬರೆಯಲು ನಿರ್ಧರಿಸಲಾಗಿದೆ.
ಟಾಪ್ ನ್ಯೂಸ್
