ಮಾಗಡಿಯ ಮಂಚನಬೆಲೆ ಜಲಾಶಯದ ಬಳಿ ಜಂಗಲ್ ಲಾಡ್ಜ್ಸ್ ನಿಂದ ಪರಿಸರ ಸ್ನೇಹಿ ರೆಸಾರ್ಟ್ ನಿರ್ಮಾಣ

Team Udayavani, Jul 20, 2021, 4:43 PM IST

ಮಾಗಡಿಯ ಮಂಚನಬೆಲೆ ಜಲಾಶಯದ ಬಳಿ ಜಂಗಲ್ ಲಾಡ್ಜ್ಸ್ ನಿಂದ ಪರಿಸರ ಸ್ನೇಹಿ ರೆಸಾರ್ಟ್ ನಿರ್ಮಾಣ

ಬೆಂಗಳೂರು: ಮಾಗಡಿಯ ಮಂಚನಬೆಲೆ ಜಲಾಶಯದ ಸಮೀಪ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸಲು ಅರಣ್ಯ, ವಸತಿ ಮತ್ತು ವಿಹಾರಧಾಮ (ಜೆ.ಎಲ್.ಆರ್.) ವತಿಯಿಂದ ಸುಸಜ್ಜಿತ ರೆಸಾರ್ಟ್ ಗಳನ್ನು ನಿರ್ಮಾಣ ಮಾಡುವ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಇಂದು ಪ್ರವಾಸೋದ್ಯಮ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಗಳ ಜೊತೆ ಸಭೆ ನಡೆಸಿದರು.

ಮಂಚನಬೆಲೆ ಜಲಾಶಯ ಪ್ರದೇಶವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಬೆಂಗಳೂರಿಗೆ ಅತ್ಯಂತ ಹತ್ತಿರವಾಗಿರುವ ಈ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ಸ್ನೇಹಿಯಾಗಿ ಮಾಡಿದರೆ ಜನ ಸಾಮಾನ್ಯರು ಬರುತ್ತಾರೆ ಎಂದು ಸಚಿವರು ಹೇಳಿದರು.

ಮಂಚನಬೆಲೆ ಜಲಾಶಯದಲ್ಲಿ ನಿರ್ಮಾಣ ಮಾಡುವ ಜಂಗಲ್ ಲಾಡ್ಜ್ ರೆಸಾರ್ಟ್ ಪರಿಸರ ಸ್ನೇಹಿಯಾಗಿರಬೇಕು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಹಾಗೂ ಜಲಾಶಯಕ್ಕೆ ಯಾವುದೇ ರೀತಿ ಧಕ್ಕೆ ಉಂಟಾಗದಂತೆ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 10 ಎಕರೆ ಕಂದಾಯ ಜಮೀನನ್ನು ಜಂಗಲ್ ಲಾಡ್ಜ್ ಗೆ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಇನ್ನೆರಡು ದಿನಗಳಲ್ಲಿ ಸ್ಥಳಕ್ಕೆ ತೆರಳಿ ಜಮೀನನ್ನು ವರ್ಗಾಯಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಕಳೆದ ವಾರ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಚಿವ ನಾರಾಯಣ ಗೌಡರ ಜೊತೆ ಕೆ.ಆರ್.ಎಸ್. ಗೆ ತೆರಳಿದ್ದಾಗ 40 ಕಿ.ಮೀ. ಕೆ.ಆರ್.ಎಸ್. ಹಿನ್ನೀರಿನಲ್ಲಿ ಸ್ಪೀಡ್ ಬೋಟ್ ನಲ್ಲಿ ತೆರಳಿದ್ದಾಗಿ ತಿಳಿಸಿದ ಸಚಿವ ಯೋಗೇಶ್ವರ್ ಸುಮಾರು 3 ದ್ವೀಪಗಳನ್ನು ತಾವು ವೀಕ್ಷಿಸಿದ್ದಾಗಿ ಹೇಳಿದರು. ಇಲ್ಲಿ ಜಲ ಕ್ರೀಡೆಗಳನ್ನು ಆರಂಭಿಸಬೇಕೆಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ರವರಿಗೆ ಹೇಳಿದರು.

ಕೆ.ಆರ್.ಎಸ್. ಹಿನ್ನೀರಿನಲ್ಲಿ 330 ಎಕರೆ ಜಮೀನಿದೆ ಹಾಗೂ ಅತ್ಯಂತ ಪುರಾತನವಾದ ವೇಣುಗೋಪಾಲ ದೇವಾಲಯವಿದೆ. 1450 ಕೋಟಿ ವೆಚ್ಚದಲ್ಲಿ ಕೆ.ಆರ್.ಎಸ್. ಜಲಾಶಯದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿವೆ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ರವರು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ಜಲಕ್ರೀಡೆಗಳನ್ನು ಆರಂಭಿಸಲು ಸಹ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ರವರಿಗೆ ಇದೇ ವೇಳೆ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಸಿಂಧು ಬಿ. ರೂಪೇಶ್, ಜೆ.ಎಲ್.ಆರ್. ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ಶರ್ಮ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡರು, ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಹಾಗೂ ಸಿ.ಇ.ಓ. ಇಕ್ರಂ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು

ಟಾಪ್ ನ್ಯೂಸ್

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌; ಎಂಟು ಸೋಲಿನ ನಂಟು

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಉತ್ತರ ಕೊರಿಯಾದ ಮತ್ತೊಂದು ಕ್ಷಿಪಣಿ ಪರೀಕ್ಷೆ

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಕಾಂಗ್ರೆಸ್‌ ಪಾದಯಾತ್ರೆ  ಮೇಕೆದಾಟು ಯೋಜನೆಗೆ ಮಾರಕ : ಅಶೋಕ್‌

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಹೈಕೋರ್ಟ್‌ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಚಾಲನೆ : ಅರ್ಜಿ ಹಾಕಲು ಜ. 21 ಕೊನೆ ದಿನ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಚಾಲನೆ : ಅರ್ಜಿ ಹಾಕಲು ಜ. 21 ಕೊನೆ ದಿನ

ಯಲ್ಲಾಪುರ : 108 ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

ಯಲ್ಲಾಪುರ : 108 ಅಂಬ್ಯುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

ಶಾಲೆ ವಿದ್ಯಾರ್ಥಿನಿ ಸೇರಿ ಕುರುಗೋಡು ತಾಲೂಕಿನಲ್ಲಿ 17 ಕೋವಿಡ್ ಪ್ರಕರಣಗಳು ಪತ್ತೆ

ಶಾಲೆ ವಿದ್ಯಾರ್ಥಿನಿ ಸೇರಿ ಕುರುಗೋಡು ತಾಲೂಕಿನಲ್ಲಿ 17 ಕೋವಿಡ್ ಪ್ರಕರಣಗಳು ಪತ್ತೆ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನಡಾಲ್‌, ಒಸಾಕಾ, ಬಾರ್ಟಿ ಓಟ ಆರಂಭ

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ನೊವಾಕ್‌ ಜೊಕೋಗೆ ಫ್ರೆಂಚ್‌ ಓಪನ್‌ ಕೂಡ ಅನುಮಾನ!

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಸ್ತಬ್ಧಚಿತ್ರದ ಹಿಂದಿನ ಆಯ್ಕೆ ಚಿತ್ರಣ

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

ಕೇಂದ್ರ ಸರ್ಕಾರ ಬಜೆಟ್‌: ರಸಗೊಬ್ಬರ ಸಬ್ಸಿಡಿ 1.4 ಲಕ್ಷ ಕೋಟಿಗೆ ಏರಿಕೆ?

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

2021ರಲ್ಲಿ ಚೀನದ ಜನಸಂಖ್ಯೆಯಲ್ಲಿ ಬರೀ 5 ಲಕ್ಷ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.