ವೋಟರ್ ಐಡಿ ಕೇಸ್: ಶಾಸಕ ಮುನಿರತ್ನ ವಿರುದ್ಧ ಚುನಾವಣಾ ಆಯೋಗದಿಂದ FIR
Team Udayavani, May 10, 2018, 1:07 PM IST
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಜಾಲಹಳ್ಳಿಯ ಅಪಾರ್ಟ್‌ಮೆಂಟ್
ವೊಂದರಲ್ಲಿ ಸಾವಿರಾರು ವೋಟರ್‌ಐಡಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಆಯೋಗ ಗುರುವಾರ ಎಫ್ಐಆರ್ ದಾಖಲಿಸಿಕೊಂಡಿದೆ.
ಪ್ರಕರಣದ 11 ನೇ ಆರೋಪಿಯಾಗಿ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಚನಾವಣಾ ಅಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.
ವ್ಯಾಪ್ತಿಯ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರದ ದಾಳಿ ವೇಳೆ ಎಪಿಕ್ ಕಾರ್ಡ್‌ಗಳನ್ನು ನಕಲು ಮಾಡುವ 3 ಮುದ್ರಣ ಯಂತ್ರಗಳು, 5 ಲ್ಯಾಪ್‌ಟಾಪ್, 9 ಮೊಬೈಲ್ ಫೋನ್ ಜೊತೆಗೆ ಪ್ಯಾನ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಿಸಿಟಿಂಗ್ ಕಾರ್ಡ್ ಸಿಕ್ಕಿದ್ದವು. ಬಿಬಿಎಂಪಿ ಮುದ್ರೆ ಹೊಂದಿರುವ 6,342 ಮತದಾರರ ಅರ್ಜಿ ಸ್ವೀಕೃತಿಗಳು, ಬಿಬಿಎಂಪಿ ಮುದ್ರೆ ಇಲ್ಲದ 20,700 ಸ್ವೀಕೃತಿ ಅರ್ಜಿಗಳು ಪತ್ತೆಯಾಗಿದ್ದವು. ಇದಲ್ಲದೇ ಕುಟುಂಬಗಳ ಸಂಖ್ಯೆ, ವ್ಯಕ್ತಿಗಳ ಹೆಸರು, ಜಾತಿ, ಮೊಬೈಲ್ ನಂಬರ್ ಮತ್ತಿತರ ವಿವರಗಳನ್ನು ಹೊಂದಿರುವ ಸರ್ವೆ ಫಾರಂಗಳು ಮತ್ತು ಸರ್ವೆ ಮಾಡಿದವರ ಹೆಸರುಗಳು ಸ್ಥಳದಲ್ಲಿ ಸಿಕ್ಕಿದ್ದವು. ಜೊತೆಯಲ್ಲಿ ಮುನಿರತ್ನ ಅವರ ಭಾವಚಿತ್ರವುಳ್ಳ ಕಾರ್ಡ್ ಪತ್ತೆಯಾಗಿತ್ತು.
ಪತ್ತೆಯಾಗಿರುವ ಎಲ್ಲ 9,896 ಎಪಿಕ್ ಕಾರ್ಡ್‌ಗಳು ಅಸಲಿಯಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೇಂದ್ರ ಗುತ್ತಿಗೆ ಪ್ರಕಟಿಸಿದ ಬಿಸಿಸಿಐ: ಜಡೇಜಾಗೆ ಬೋನಸ್, ರಾಹುಲ್ ಗೆ ಭಾರೀ ಹಿನ್ನಡೆ
“ನೀವು ಯಾರನ್ನಾದರೂ ಡೇಟ್ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್
ಚಿಕ್ಕಮಗಳೂರು: ಕಾರಿನಲ್ಲಿ ಮದ್ಯದ ಬಾಟಲ್, ಸಿ.ಟಿ.ರವಿ ಕ್ಯಾಲೆಂಡರ್, ಲಾಂಗ್ ಪತ್ತೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ