ದುಷ್ಕರ್ಮಿಗಳಿಂದ ಮಾಜಿ ಪ್ರಧಾನಿ ಎಚ್‌ಡಿಡಿ ಕಂಚಿನ ಪ್ರತಿಮೆಗೆ ಬೆಂಕಿ
Team Udayavani, Nov 29, 2018, 10:24 AM IST
ವಿಜಯಪುರ: ಸಿಂಧಗಿಯ ಗೋಲಗೇರಿಯಲ್ಲಿ ಸ್ಥಾಪಿಸಲಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಚಿವ ಎಂ.ಸಿ.ಮನಗೂಳಿ ಅವರ ಕಂಚಿನ ಪುತ್ಥಳಿಗೆ ಬುಧವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಕಾರಣವಾದ ಹಿನ್ನಲೆಯಲ್ಲಿ 2014ರಲ್ಲಿ ಉಭಯ ನಾಯಕರ ಪುತ್ಥಳಿಗಳನ್ನು ಜೊತೆಯಲ್ಲಿ ಸ್ಥಾಪಿಸಲಾಗಿತ್ತು.
ರಾಜಕೀಯ ದ್ವೇಷಕ್ಕಾಗಿ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗಿದೆ. ಬೆಂಕಿಯಿಂದಾಗಿ ಪುತ್ಥಳಿಗಳು ಕರಕಲಾಗಿವೆ.
ಸಿಂಧಗಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.