
Gruha Jyoti ಬಾಡಿಗೆದಾರರಿಗೂ ಸಿಗಲಿದೆ ಉಚಿತ ವಿದ್ಯುತ್ ಭಾಗ್ಯ: ಮಾಡಬೇಕಾದ ವಿಧಾನ ಇಲ್ಲಿದೆ
Team Udayavani, Jun 6, 2023, 11:58 AM IST

ಬೆಂಗಳೂರು: ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ ಬಗ್ಗೆ ಹಲವು ಗೊಂದಲಗಳು ಎದುರಾಗಿದೆ. ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಾಡಿಗೆದಾರರಿಗೂ ಉಚಿತ ವಿದ್ಯುತ್ ಸಿಗಲಿದೆ ಎಂದು ಹೇಳಿದ್ದರು. ಆದರೆ ಸೋಮವಾರ ಬಿಡುಗಡೆಯಾದ ಮಾರ್ಗಸೂಚಿಯಲ್ಲಿ ‘ಒಬ್ಬರ ಹೆಸರಿನಲ್ಲಿ ಎಷ್ಟೇ ಆರ್ ಆರ್ ಸಂಖ್ಯೆಗಳಿದ್ದರೂ ಒಂದಕ್ಕೆ ಮಾತ್ರ ಸೌಲಭ್ಯ ಲಭ್ಯವಾಗಲಿದೆ’ ಎಂದು ನಮೂದಿಸಲಾಗಿತ್ತು. ಹೀಗಾಗಿ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸಿಗುವ ಬಗ್ಗೆ ಗೊಂದಲ ಉಂಟಾಗಿತ್ತು.
ಇದೀಗ ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಿ ಗೊಂದಲ ನಿವಾರಿಸುವ ಕೆಲಸ ಮಾಡಿದೆ.
ನಮ್ಮ ಗ್ಯಾರಂಟಿ ಯೋಜನೆಗಳು ಸಮಾಜ ಕಲ್ಯಾಣದ ಕಾರ್ಯಕ್ರಮಗಳಾಗಿವೆ. ಗೃಹಜ್ಯೋತಿ ಯೋಜನೆಯು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಅನ್ವಯವಾಗಲಿದೆ. ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಬಲಿಯಾಗಬಾರದು ಎಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇನ್ನೂರು ಯೂನಿಟ್ ಗಳ ಒಳಗೆ ವಿದ್ಯುತ್ ಬಳಕೆ ಮಾಡುವ ಬಿಲ್ ಕಟ್ಟುವ ಅಗತ್ಯವಿಲ್ಲ. ಬಾಡಿಗೆದಾರರಿಗೂ ಇದು ಅನ್ವಯವಾಗುತ್ತದೆ. ವಾಣಿಜ್ಯ ಕಟ್ಟಡಗಳಿಗೆ ಮಾತ್ರ ಇದು ಅನ್ವಯಿಸುವುದಿಲ್ಲ ಎಂದಿದ್ದಾರೆ.
ಬಾಡಿಗೆ ಮನೆಯ ವಾಸಿಗಳು ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.
1 ವಾಸವಿರುವ ಮನೆಯ ಆರ್ ಆರ್ ಸಂಖ್ಯೆಯೊಂದಿಗೆ ತಮ್ಮ ಆಧಾರ್ ಲಿಂಕ್ ಮಾಡಬೇಕು.
2 ಇದಕ್ಕೆ ಬಾಡಿಗೆ ಮನೆಯ ಕರಾರು ಪತ್ರ (Contract letter) ವನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು.
3 ಒಂದು ದಾಖಲೆಯನ್ನು ಒಂದು ಮೀಟರ್ ನೊಂದಿಗೆ ಮಾತ್ರ ಲಿಂಕ್ ಮಾಡಲು ಅವಕಾಶ.
4 ಮನೆ ಬದಲಾಯಿಸಿದರೆ, ಹಿಂದಿನ ಮನೆಯ ಮೀಟರ್ ನೊಂದಿಗಿನ ಲಿಂಕ್ ತೆಗೆಯಬೇಕು.
5 ಹೊಸ ಬಾಡಿಗೆ ಮನೆಯ ಆರ್ ಆರ್ ನಂಬರ್ ಮತ್ತು ಆಧಾರ್ ಕಾರ್ಡ್ ಮತ್ತೊಮ್ಮೆ ಲಿಂಕ್ ಮಾಡಬೇಕು.
ಸ್ವಂತ ಮನೆಯವರು ಈ ರೀತಿ ಮಾಡಬೇಕು
1 ಆರ್ ಆರ್ ನಂಬರ್ ನೊಂದಿಗೆ ಆಧಾರ್ ಲಿಂಕ್ ಮಾಡಬೇಕು.
2 ಒಂದಕ್ಕಿಂತ ಹೆಚ್ಚು ಮನೆಯಿದ್ದರೆ ಒಂದು ಮನೆಗೆ ಮಾತ್ರ ಅವಕಾಶ.
3 ಎರಡು ಮೀಟರ್ ಹೊಂದಿದ್ದರೆ ಯಾವುದಾದರೂ ಒಂದಕ್ಕೆ ಮಾತ್ರ ಸೌಲಭ್ಯ ಲಭ್ಯ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Ujjain: 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ: ರಿಕ್ಷಾ ಚಾಲಕ ಸೇರಿ ಮೂವರ ಬಂಧನ

Sandalwood; ನನ್ನಪಾತ್ರ ತುಂಬಾ ಹೊಸದಾಗಿದೆ: ತೋತಾಪುರಿ 2 ಮೇಲೆ ಧನಂಜಯ್ ನಿರೀಕ್ಷೆ

Animal Teaser: ಸಿರಿವಂತನ ರಗಡ್ ಕಹಾನಿ; ಮಾಸ್ ಲುಕ್ ನಲ್ಲಿ ಮಿಂಚಿದ ʼರಾಕ್ ಸ್ಟಾರ್ʼ

Baana dariyalli ನೂತನ ಭಾವ ಲಹರಿ; ಗಣೇಶ್-ರುಕ್ಮಿಣಿ- ರೀಷ್ಮಾ ನಟನೆಯ ಸಿನಿಮಾ ರಿಲೀಸ್

India-Canada Diplomatic Row: ಅಮೇರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್, ಜೈಶಂಕರ್ ಭೇಟಿ