ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ, ಏನೇನೋ ಮಾತಾಡುತ್ತಾರೆ: ಬಸವರಾಜ್ ಹೊರಟ್ಟಿ
ಕುಮಾರಸ್ವಾಮಿ ಮಾತುಗಳಿಗೆ ಸ್ವಪಕ್ಷೀಯರಿಂದಲೇ ಟೀಕೆ!
Team Udayavani, Jan 5, 2021, 3:24 PM IST
ಬೆಂಗಳೂರು: ಕುಮಾರಸ್ವಾಮಿ ಈಗ ತಾಳ್ಮೆ ಕಳೆದುಕೊಂಡಿದ್ದಾರೆ. ಹಾಗಾಗಿಯೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಸ್ವಪಕ್ಷದ ನಾಯಕನ ವಿರುದ್ಧ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಮೊದಲು ಕುಮಾರಸ್ವಾಮಿ ಅವರಿಗೆ ತುಂಬಾ ತಾಳ್ಮೆಯಿತ್ತು. ಅವರಷ್ಟು ಸಮಾಧಾನದ ವ್ಯಕ್ತಿ ಬೇರೆಯವರು ಇಲ್ಲ ಎಂಬಂತ್ತಿದ್ದರು. ಆದರೆ, ಇತ್ತೀಚೆಗೆ ಅದನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ಹೇಳಿಕೆ ಕೊಡುತ್ತಾರೆ. ಅವರು ಮೊದಲಿನಂತೆ ಇಲ್ಲ ಎಂದರು.
ಇದನ್ನೂ ಓದಿ:ರಾಷ್ಟ್ರೀಯ ಪಕ್ಷಗಳು JDS ಮುಖಂಡರ ಕಾಲು ಹಿಡಿಯುವುದು ಬಿಟ್ಟು ಮರ್ಯಾದೆ ಉಳಿಸಿಕೊಳ್ಳಲಿ: HDK
ಅವರನ್ನು ಭೇಟಿ ಮಾಡಿ ನಾನು ಸಲಹೆಗಳನ್ನು ಕೊಡುತ್ತೇನೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸಭಾಪತಿಯನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ನನಗೆ ಇದೊಂದು ಬಾರಿ ಅವಕಾಶ ಕೊಡಿಸುವುದಾಗಿ ಹೇಳಿದ್ದಾರೆ. ನೋಡೋಣ ಏನಾಗಲಿದೆಯೋ ಎಂದು ಹೊರಟ್ಟಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಾಂಧೀವಾದಿ ಮೀರಾತಾಯಿ ಕೊಪ್ಪೀಕರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ
ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ
ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್
ಧರ್ಮ ಒಡೆಯುವ ಉದ್ದೇಶವಿರಲಿಲ್ಲ: ರಂಭಾಪುರಿ ಶ್ರೀಗಳ ಬಳಿ ಸಿದ್ದರಾಮಯ್ಯ ಪಶ್ಚಾತ್ತಾಪ