ವಿಟ್ಲ: ಸಾರಡ್ಕ ಬಳಿ ಗುಡ್ಡ ಕುಸಿತ: ಕರ್ನಾಟಕ-ಕೇರಳ ಸಂಚಾರ ಬಂದ್
Team Udayavani, Jul 5, 2022, 10:57 AM IST
ವಿಟ್ಲ: ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಕಲ್ಲಡ್ಕ – ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಸಾರಡ್ಕ ಬಳಿ ಗುಡ್ಡ ಕುಸಿದುಬಿದ್ದಿದೆ. ಇದರ ಪರಿಣಾಮ ಕರ್ನಾಟಕ – ಕೇರಳ ಸಂಚಾರ ಬಂದ್ ಆಗಿದೆ.
ಭಾರಿ ಮಳೆಯ ಪರಿಣಾಮ ಗುಡ್ಡಕುಸಿದು ರಸ್ತೆಯಲ್ಲಿ ಮಣ್ಣು, ಮರಗಿಡಗಳು ತುಂಬಿದ್ದು, ವಿಟ್ಲ ಮಾರ್ಗವಾಗಿ ಪೆರ್ಲ, ಬದಿಯಡ್ಕ, ಕಾಸರಗೋಡು ಸಂಚಾರಕ್ಕೆ ಅಡ್ಡಿಯಾಗಿದೆ. ಮಣ್ಣಿನಡಿಯಲ್ಲಿ ಬೈಕ್ ಸಿಲುಕಿಕೊಂಡಿದೆ ಎನ್ನಲಾಗಿದೆ. ರಸ್ತೆ ಮಧ್ಯೆ ದೊಡ್ಡ ರಂದ್ರ ನಿರ್ಮಾಣವಾಗಿದ್ದು, ರಸ್ತೆಯ ನೀರು ಅದರೊಳಗೆ ಇಳಿಯುತ್ತಿದ್ದು ಸ್ಥಳೀಯರಲ್ಲಿ ಆಂತಂಕ ಸೃಷ್ಟಿಸಿದೆ.
ಕುಡ್ತಮುಗೇರು : ಏರುತ್ತಿರುವ ನೆರೆ ನೀರು : ಸಂಚಾರ ಬಂದ್ ಸಾಧ್ಯತೆ
ವಿಟ್ಲ ಸಾಲೆತ್ತೂರು ಮುಡಿಪು ರಸ್ತೆಯ ಕುಡ್ತಮುಗೇರು ಬಳಿ ನದಿ ನೀರು ಮೇಲೇರುತ್ತಿದ್ದು ಸಂಚಾರ ಬಂದ್ ಆಗುವ ಸಾಧ್ಯತೆ ಇದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೆರೆ ನೀರು ಏರಿಕೆಯಾಗುತ್ತಿದ್ದು ವಾಹನ ಸಂಚಾರ ದುಸ್ತರವಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ: ಪತ್ನಿಯಿಂದಲೇ ಪತಿಯ ಕೊಲೆ!