ಸಂದರ್ಶನ ರದ್ದು ಅಧಿಸೂಚನೆ: ಆಕ್ಷೇಪಣೆಗೆ ಆಹ್ವಾನ

Team Udayavani, Jan 25, 2020, 3:00 AM IST

ಬೆಂಗಳೂರು: ಕೆಪಿಎಸ್‌ಸಿಯಿಂದ ನಡೆಸುವ ಎ. ಮತ್ತು ಬಿ ದರ್ಜೆಯ ಆಯ್ದ ಕೆಲವು ಹುದ್ದೆಗಳಿಗೆ ಸಂದರ್ಶನ ರದ್ದುಗೊಳಿಸುವ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ. ವೈದ್ಯ ಹಾಗೂ ಎಂಜಿನಿಯರ್‌ ನಂತಹ ಹುದ್ದೆಗಳಿಗೆ ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಕೇವಲ ಲಿಖೀತ ಪರೀಕ್ಷೆ ಮೂಲಕ ಆಯ್ಕೆ ಮಾಡಿ, ಸಂದರ್ಶನವನ್ನು ಕೈ ಬಿಡಲು 2006ರ ಕರ್ನಾಟಕ ಸಿವಿಲ್‌ ಸೇವೆ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ಕಾಯ್ದೆಯ ಸಾಮಾನ್ಯ ನಿಯಮಗಳಿಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ.

ಈ ತಿದ್ದುಪಡಿಯ ಮೂಲಕ ಕೆಪಿಎಸ್ಸಿ ಮೂಲಕ ನಡೆಸುವ ಎ. ಮತ್ತು ಬಿ ಹುದ್ದೆಗಳಿಗೆ ಸಂದರ್ಭಾನುಸಾರವಾಗಿ ಸಂದರ್ಶನವನ್ನು ನಡೆಸುವ ಅಗತ್ಯವಿಲ್ಲ ಎಂದು ನಿರ್ಣಯಿಸಿ ಸರ್ಕಾರವು ಅಂತಹ ವರ್ಗದ ಹುದ್ದೆಗಳಿಗೆ ಸಂದರ್ಶನದಿಂದ ವಿನಾಯಿತಿ ನೀಡಿ ಅಧಿಸೂಚಿಸಲು ಅವಕಾಶ ಕಲ್ಪಿಸುವ ಕಾನೂನು ತಿದ್ದುಪಡಿಗೆ ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗೆ ಆಹ್ವಾನ ನೀಡಲಾಗಿದೆ. ಆಕ್ಷೇಪಣೆ ಸಲ್ಲಿಕೆ ನಂತರ ರಾಜಪತ್ರ ಹೊರಡಿಸಿದ ದಿನಾಂಕದಿಂದ ತಿದ್ದುಪಡಿ ಕಾಯ್ದೆ ಜಾರಿಗೆ ಬರಲಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ