ಬಿಜೆಪಿ ನಮಗೆ ಎಲ್ಲವನ್ನೂ ಕೊಟ್ಟಿದೆ, ಬೇರೆ ಪಕ್ಷಕ್ಕೆ ನಾವ್ಯಾರೂ ಅರ್ಜಿ ಹಾಕಿಲ್ಲ: ಗೋಪಾಲಯ್ಯ
Team Udayavani, Jan 27, 2022, 12:21 PM IST
ಬೆಂಗಳೂರು: ಬಿಜೆಪಿಗೆ ವಲಸೆ ಬಂದ ಸಚಿವರು ಮತ್ತೆ ಬೇರೆ ಪಕ್ಷ ಸೇರುತ್ತಾರೆಂಬ ಚರ್ಚೆಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದು, “ಯಾರು ವದಂತಿ ಹಬ್ಬಿಸುತ್ತಿದ್ದಾರೋ ಅವರನ್ನೇ ಕೇಳಿ” ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮಾತಿನಂತೆ ನಡೆದುಕೊಂಡಿದ್ದಾರೆ, ಸೋತವರಿಗೂ ಎಂಎಲ್ ಸಿ ಮಾಡಿ ಸ್ಥಾನಮಾನ ಕೊಟ್ಟಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಸಿದ್ದುಗೆ ಹೈಕಮಾಂಡ್ ಟಕ್ಕರ್ : ಮೇಲ್ಮನೆ ವಿಪಕ್ಷ ನಾಯಕತ್ವದ ಹಿಂದೆ ಲೆಕ್ಕಾಚಾರ
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಕೋವಿಡ್ ಮಧ್ಯೆಯೂ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಬೇರೆ ಪಕ್ಷಕ್ಕೆ ಹೋಗುವ ಸಂದರ್ಭ ಬರುವುದಿಲ್ಲ. ನಾವ್ಯಾರು ಬೇರೆ ಪಕ್ಷಕ್ಕೆ ಅರ್ಜಿ ಹಾಕಿಲ್ಲ ಎಂದು ಹೇಳಿದರು.
ಬೊಮ್ಮಾಯಿ ನೇತೃತ್ವದಲ್ಲೇ ಅಧಿಕಾರಕ್ಕೆ ಬರುತ್ತೇವೆ. ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ಸಚಿವ ಸ್ಥಾನ ನೀಡಿದೆ, ಎರಡು ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಾರೆ. ನಮಗೆ ಇನ್ನೇನು ಕೊಡೇಕು. ನಮ್ಮಲ್ಲಿಹೋಗುವವರು ಯಾರು ಇಲ್ಲ. ಬೇರೆ ಪಕ್ಷದಿಂದ ಬರುವವರ ಬಗ್ಗೆ ಗೊತ್ತಿಲ್ಲ, ಅದರ ಬಗ್ಗೆ ನೀವು ರಮೇಶಣ್ಣನನ್ನೇ ಕೇಳಬೇಕು ಎಂದು ಸಚಿವ ಗೋಪಾಲಯ್ಯ ಹೇಳಿದರು.
ಸಚಿವ ಮುನಿರತ್ನ ಬೆಂಬಲ: ಗೋಪಾಲಯ್ಯ ಏನು ಹೇಳಿದ್ದಾರೋ ಅದಕ್ಕೆ ನನ್ನ ಸಹಮತವಿದೆ. ನಾವ್ಯಾರು ಎಲ್ಲಿಗೂ ಹೋಗುವುದಿಲ್ಲ. ಯಾವ ನಾಯಕರ ಸಂಪರ್ಕದಲ್ಲೂ ಇಲ್ಲ ಎಂದು ಸಚಿವ ಮುನಿರತ್ನ ಹೇಳಿದರು.
ನಾವು ಯಾರನ್ನೂ ವಾಪಸ್ ಬಿಟ್ಟುಕೊಳ್ಳುವುದಿಲ್ಲವೆಂದು ಸಿದ್ದರಾಮಯ್ಯ ಈ ನ್ಯಾಯ ದೇಗುಲದಲ್ಲೇ ಹೇಳಿದ್ದಾರೆ. ಹಾಗಾಗಿ ನಾವ್ಯಾರು ಕಾಂಗ್ರೆಸ್ ಹೋಗುವುದಿಲ್ಲ. ಸಿದ್ದರಾಮಯ್ಯನವರ ಸಂಪರ್ಕದಲ್ಲಿ ಯಾರಿದ್ದಾರೆ ಗೊತ್ತಿಲ್ಲ, ನಾವು ಅಲ್ಲಿಗೆ ಹೋದರೆ ಸಿದ್ದರಾಮಯ್ಯ ಅಲ್ಲಿರಲ್ಲ ಎಂದರು.
ನೀವು ಬೇರೆಯವರನ್ನ ಸೆಳೆಯೋ ಪ್ರಯತ್ನ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರಶ್ನೆಗೆ, “ಹೈಕಮಾಂಡ್ ಹೇಳಿದರೆ ಮುಂದೆ ನೋಡೋಣ” ಎಂದು ಸಚಿವ ಮುನಿರತ್ನ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಳ್ಳೇಗಾಲ : ಬೈಕ್ ಕದ್ದು ಜೂಜಾಡುತ್ತಿದ್ದ ವ್ಯಕ್ತಿಯ ಬಂಧನ
ಬಾಗಲಕೋಟೆ: ಕಾರು ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸಾವು, ಮೂವರಿಗೆ ಗಾಯ; ಚಾಲಕ ಪರಾರಿ
ಮದ್ಯಪಾನ ಮಾಡಿ ಚಾಲನೆ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ : ಶಾಸಕ ರಂಗನಾಥ್ ಸೂಚನೆ
ಜನತಾ ಜಲಧಾರೆ: ಜೆಪಿ ಭವನದಲ್ಲಿ ಬ್ರಹ್ಮಕಲಶ ಪ್ರತಿಷ್ಠಾಪನೆ
ಶಿಕ್ಷಣ ಸಂಸ್ಥೆಗಳ ಉನ್ನತೀಕರಣಕ್ಕೆ ಕೈಜೋಡಿಸಿ: ಆಕ್ಸಿಸ್ ಬ್ಯಾಂಕ್ ಗೆ ಸಿಎಂ ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
ಗಂಡು, ಗಂಡನ್ನೇ ಮದುವೆಯಾದರೆ ಮಕ್ಕಳಾಗುತ್ತವೆಯೇ?: ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಶ್ನೆ
ಲಖೀಂಪುರ ಖೇರಿ ಪ್ರಕರಣ: ಮೇ 30ಕ್ಕೆ ಆಶಿಶ್ ಮಿಶ್ರಾ ಜಾಮೀನು ವಿಚಾರಣೆ
ಕೊಳ್ಳೇಗಾಲ : ಬೈಕ್ ಕದ್ದು ಜೂಜಾಡುತ್ತಿದ್ದ ವ್ಯಕ್ತಿಯ ಬಂಧನ
ಬಾಗಲಕೋಟೆ: ಕಾರು ಢಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸಾವು, ಮೂವರಿಗೆ ಗಾಯ; ಚಾಲಕ ಪರಾರಿ
ವೀರಪ್ಪನ್ ಸಹೋದರ ಮಡೈವನ್ ಹೃದಯಾಘಾತದಿಂದ ಸಾವು