

Team Udayavani, Apr 13, 2017, 3:55 PM IST
ಬೆಂಗಳೂರು: ಬಿಜೆಪಿ ಮುಖಂಡರ ಎಲ್ಲಾ ಆರೋಪ, ಟೀಕೆಗಳಿಗೆ ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರದ ಮತದಾರರಿ ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇಲ್ಲ ಎಂಬುದು ಸಾಬೀತಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಅಂದವರಿಗೆ ಭ್ರಮನಿರಸನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಗಳಿಸಿದ ನಂತರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರದ ಜನತೆಗೆ ಕೋಟಿ, ಕೋಟಿ ಧನ್ಯವಾದಗಳು. ಮುಂದಿನ ಸರ್ಕಾರವೂ ನಮ್ಮದೇ. ಉತ್ತರಪ್ರದೇಶದ ರೀತಿ ಕರ್ನಾಟಕದಲ್ಲಿ ನಡೆಯಲ್ಲ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪನವರು ತಾನೇ ಮುಂದಿನ ಮುಖ್ಯಮಂತ್ರಿ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದರು. ಬಿಎಸ್ ವೈ ಮಾತಿಗೆ ಜನ ಸೊಪ್ಪು ಹಾಕಿಲ್ಲ. ಬಿಎಸ್ ವೈ ಏನೇ ಹೇಳಿದ್ರು ಜನ ನಂಬುತ್ತಾರೆ ಎಂಬ ಭ್ರಮೆಯಲ್ಲಿದ್ದರು. ನಾವು ರಾಜ್ಯ ಸರ್ಕಾರದ ಸಾಧನೆಯ ಆಧಾರದ ಮೇಲೆ ಮತ ಯಾಚಿಸಿದ್ದೇವೆ. ನಮಗೆ ಎಲ್ಲಾ ಜಾತಿಯವರು ಮತ ಹಾಕಿದ್ದಾರೆ ಎಂದರು.
ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕಾರ್ಯಕರ್ತರಿಗೆ ನಾನು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಚುನಾವಣೆಯೂ ನನ್ನ ನೇತೃತ್ವದಲ್ಲೇ ನಡೆಯಲಿದೆ. ಬಿಜೆಪಿಯನ್ನು ಬಗ್ಗು ಬಡಿಯುವ ನಿಟ್ಟಿನಲ್ಲಿ ನಾನು ಕೂಡಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.
Ad
ಜನೌಷಧಿ ಕೇಂದ್ರ ಮುಚ್ಚುವ ಆದೇಶಕ್ಕೆ ಹೈಕೋರ್ಟ್ ತಡೆ
ದ್ವೇಷಭರಿತ ಹೇಳಿಕೆ ಪ್ರಕರಣ: ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಬಂಧನಕ್ಕೆ ಹೈಕೋರ್ಟ್ ತಡೆ
Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು
Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
You seem to have an Ad Blocker on.
To continue reading, please turn it off or whitelist Udayavani.