Foxconn ಗೆ ಜುಲೈ 1ರ ವೇಳೆಗೆ ಪೂರ್ತಿ ಭೂಮಿ ಹಸ್ತಾಂತರ: ಎಂ.ಬಿ.ಪಾಟೀಲ್

2024ರ ಎಪ್ರಿಲ್ ಹೊತ್ತಿಗೆ ಐಫೋನ್ ಉತ್ಪಾದನೆ ಆರಂಭ

Team Udayavani, Jun 1, 2023, 4:37 PM IST

1-csasd

ಬೆಂಗಳೂರು: ಮುಂಚೂಣಿ ಐಫೋನ್ ತಯಾರಿಕಾ ಕಂಪನಿ ಫಾಕ್ಸ್ ಕಾನ್ 2024ರ ಎಪ್ರಿಲ್ 1ರ ವೇಳೆಗೆ ದೇವನಹಳ್ಳಿ ಘಟಕದಲ್ಲಿ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಜುಲೈ 1ರ ಹೊತ್ತಿಗೆ ಪೂರ್ತಿಯಾಗಿ ಭೂಮಿ ಹಸ್ತಾಂತರಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುರುವಾರ ಹೇಳಿದರು.

ಜಾರ್ಜ್ ಚು ಅವರ ನೇತೃತ್ವದಲ್ಲಿ ಫಾಕ್ಸ್ ಕಾನ್ ಕಂಪನಿಯ ಉನ್ನತ ಅಧಿಕಾರಿಗಳ ತಂಡವು ಸೌಜನ್ಯದ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಹಾಜರಿದ್ದರು.

ಹೊಸ ಸರ್ಕಾರವು 50,000 ಜನರಿಗೆ ಉದ್ಯೋಗ ಒದಗಿಸುವ 13,600 ಕೋಟಿ ರೂಪಾಯಿಯ ಮೊತ್ತದ ಈ ಯೋಜನೆ ಜಾರಿಗೆ ವೇಗ ನೀಡಿದಂತಾಗಿದೆ. ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶದಲ್ಲಿ (ಐಟಿಐಆರ್) ಕಾರ್ಯಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ಕಂಪನಿಯು ತಯಾರಿಕೆ ಶುರು ಮಾಡುವ ಗುರಿ ಹಾಕಿಕೊಂಡಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮುಂಚೆ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು ಎಂದರು.

ಕಂಪನಿಯು ದಿನಕ್ಕೆ 50 ಲಕ್ಷ ಲೀಟರ್ ನೀರು ಬೇಕಾಗುವುದಾಗಿ ತಿಳಿಸಿದೆ.‌ ಇದನ್ನು ಪೂರೈಸುವ ಜೊತೆಗೆ ಗುಣಮಟ್ಟದ ವಿದ್ಯುತ್, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆಕಂಪನಿಯ ಸಿಬಂದಿಗೆ ಬೇಕಾಗುವ ಕೌಶಲ ವಿವರಗಳನ್ನು ಕೂಡ ಕೇಳಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲಗಳ ತರಬೇತಿ ಕೊಟ್ಟು ಮಾನವ ಸಂಪನ್ಮೂಲ ಲಭ್ಯವಾಗಿಸಲು ಒತ್ತು ಕೊಡುವುದಾಗಿಯೂ ತಿಳಿಸಿದರು.

ತೈವಾನ್ ಮೂಲದ ಮುಂಚೂಣಿ ಕಂಪನಿಯು ಮೂರು ಹಂತಗಳಲ್ಲಿ ಘಟಕ ನಿರ್ಮಾಣ ಪೂರೈಸಿ ಅಂತಿಮವಾಗಿ ಇಲ್ಲಿ ವರ್ಷಕ್ಕೆ 2 ಕೋಟಿ ಮೊಬೈಲ್‌ಗಳನ್ನು ತಯಾರಿಸುವ ಯೋಜನೆ ಹಾಕಿಕೊಂಡಿದೆ‌. ಈಗಾಗಲೇ ಭೂಮಿಗಾಗಿ ನಿಗದಿಗೊಳಿಸಿರುವ ಮೊತ್ತದಲ್ಲಿ ಶೇಕಡ 30ರಷ್ಟನ್ನು (90 ಕೋಟಿ ರೂಪಾಯಿ) ಕಂಪನಿಯು ಕೆಐಎ‌‌ಡಿಬಿ ಗೆ ಪಾವತಿಸಿದೆ.

ಕಂಪನಿಯ ಪೌಲ್ ಲಿಯು, ಟಾನ್ನಿ ಲಿಯು, ಸೈಮನ್ ಸಾಂಗ್, ಭಾರತ್ ದಂಡಿ ಮತ್ತಿತರರು ಇದ್ದರು.ಇದಕ್ಕೆ ಮುನ್ನ ಜುಬಿಲಿಯಂಟ್ ಫುಡ್ ವರ್ಕ್ಸ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಮರದೀಪಸಿಂಗ್ ಅಹ್ಲುವಾಲಿಯಾ, ಎಫ್ಐಸಿಸಿಐ ಕರ್ನಾಟಕ ಮಂಡಳದ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್, ಕರ್ನಾಟಕ ಮಂಡಳದ ಅಧ್ಯಕ್ಷ ಶಜು ಮಂಗಳಂ, ಸಿಐಐ ಕರ್ನಾಟಕ ಮಂಡಲ ಅಧ್ಯಕ್ಷ ವಿಜಯಕೃಷ್ಣನ್ ವೆಂಕಟೇಶನ್ ಮತ್ತಿತರರು ಸಚಿವರನ್ನು ಭೇಟಿಯಾಗಿದ್ದರು.

ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ‌ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ಇದ್ದರು.

ಟಾಪ್ ನ್ಯೂಸ್

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

gautam

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

1-sadasd

Kumta ; ಮಸೀದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿಯ ಬಂಧನ

police

Doddaballapur:15 ಟನ್ ಗೋ ಮಾಂಸ ಸಾಗಿಸುತ್ತಿದ್ದ ಏಳು ಮಂದಿಯ ಬಂಧನ

Video: ಬೈಕ್‌ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

Video: ಬೈಕ್‌ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

h c mahadevappa

BJP- JDS ಮೈತ್ರಿಯಿಂದ ಕಾಂಗ್ರೆಸ್ ಗೆ ನಷ್ಟವಿಲ್ಲ: ಸಚಿವ ಮಹದೇವಪ್ಪ

Khandre

BJP-JDS ಸ್ಥಿತಿ ಹೇಳ ಹೆಸರಿಲ್ಲದಂತಾಗುತ್ತದೆ: ಸಚಿವ ಈಶ್ವರ ಖಂಡ್ರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Doddaballapur:15 ಟನ್ ಗೋ ಮಾಂಸ ಸಾಗಿಸುತ್ತಿದ್ದ ಏಳು ಮಂದಿಯ ಬಂಧನ

Khandre

BJP-JDS ಸ್ಥಿತಿ ಹೇಳ ಹೆಸರಿಲ್ಲದಂತಾಗುತ್ತದೆ: ಸಚಿವ ಈಶ್ವರ ಖಂಡ್ರೆ

jameer

HDK ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ: ಸಚಿವ ಜಮೀರ್ ಆಕ್ರೋಶ

ಕಾಂಗ್ರೆಸ್ ಗೆದ್ದ ಬಳಿಕ ‘ಕರ್ನಾಟಕ ಕುಡುಕರ ತೋಟ’ವಾಗಿದೆ: ಕುಮಾರಸ್ವಾಮಿ ಟೀಕೆ

Karnataka; ಕಾಂಗ್ರೆಸ್ ಗೆದ್ದ ಬಳಿಕ ‘ಕರ್ನಾಟಕ ಕುಡುಕರ ತೋಟ’ವಾಗಿದೆ: ಕುಮಾರಸ್ವಾಮಿ ಟೀಕೆ

Exam 9, 11ನೇಗೂ ಬೋರ್ಡ್‌ ಪರೀಕ್ಷೆ: ಈ ವರ್ಷದಿಂದಲೇ ರಾಜ್ಯ ಮಟ್ಟದಲ್ಲಿ ಜಾರಿಗೊಳಿಸಲು ಆದೇಶ

Exam 9, 11ನೇಗೂ ಬೋರ್ಡ್‌ ಪರೀಕ್ಷೆ: ಈ ವರ್ಷದಿಂದಲೇ ರಾಜ್ಯ ಮಟ್ಟದಲ್ಲಿ ಜಾರಿಗೊಳಿಸಲು ಆದೇಶ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

gautam

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

1-sadasd

Kumta ; ಮಸೀದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿಯ ಬಂಧನ

police

Doddaballapur:15 ಟನ್ ಗೋ ಮಾಂಸ ಸಾಗಿಸುತ್ತಿದ್ದ ಏಳು ಮಂದಿಯ ಬಂಧನ

Video: ಬೈಕ್‌ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

Video: ಬೈಕ್‌ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.