ಜೋಡೋ ಯಾತ್ರೆಯ ಅಧಿಕೃತ ಖಾತೆ ನಿರ್ಬಂಧ ಆದೇಶ ರದ್ದುಪಡಿಸಿದ ಹೈಕೋರ್ಟ್
Team Udayavani, Nov 8, 2022, 10:18 PM IST
ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಅಧಿಕೃತ ಖಾತೆ ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವಿಟರ್ಗೆ ನಿರ್ದೇಶಿಸಿ ನಗರದ ವಾಣಿಜ್ಯ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಭಾರತ್ ಜೋಡೋ ಯಾತೆೆÅ ಪ್ರಚಾರದಲ್ಲಿ ಬಳಸಿಕೊಂಡಿರುವ ಕೆಜಿಎಫ್-2 ಚಿತ್ರದ ಹಾಡು ತೆಗೆಯುವುದಾಗಿ ಮೇಲ್ಮನವಿದಾರರ ಪರ ವಕೀಲರು ಮುಚ್ಚಳಿಕೆ ನೀಡಿದ ಕಾರಣ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಕೆಜಿಎಫ್-2 ಚಿತ್ರದ ಹಾಡಿನ ಸಂಗೀತ (ಸೌಂಡ್ ರೆಕಾರ್ಡ್) ಬಳಸಿಕೊಂಡಿರುವ ಹಿನೆೆ°ಲೆಯಲ್ಲಿ ಐಎನ್ಸಿ ಮತ್ತು ಭಾರತ್ ಜೋಡೋ ಯಾತೆೆÅಯ ಅಧಿಕೃತ ಟ್ವಿಟರ್ ಖಾತೆಯನ್ನು ನ. 21ರ ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ ವಾಣಿಜ್ಯ ನ್ಯಾಯಾಲಯ ನ. 7ರಂದು ಮಧ್ಯಾಂತರ ಆದೇಶ ಮಾಡಿತ್ತು. ವಾಣಿಜ್ಯ ನ್ಯಾಯಾಲಯದ ಆದೇಶ ರದ್ದು ಕೋರಿ ಐಎನ್ಸಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಫ್ಲಾಟ್ಫಾರ್ಮ್ ಮುಖ್ಯಸೆೆ§ ಸುಪ್ರಿಯಾ ಶ್ರೀನೇತ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.