ಗಣರಾಜ್ಯೋತ್ಸವ ಪರೇಡ್: ರಾಜ್ಯದ ಕರಕುಶಲ ವಸ್ತುಗಳ ಆಧಾರಿತ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ
Team Udayavani, Feb 4, 2022, 4:09 PM IST
ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ದೆಹಲಿಯ ರಾಜಪಥದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತವಾಗಿದ್ದ ರಾಜ್ಯದ ಸ್ತಬ್ಧಚಿತ್ರಕ್ಕೆ ಎರಡನೇ ಸ್ಥಾನ ಲಭಿಸಿದೆ. ಮೊದಲ ಬಹುಮಾನಕ್ಕೆ ಉತ್ತರ ಪ್ರದೇಶದ ‘ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಕಾಶಿ ವಿಶ್ವನಾಥ ಧಾಮ’ ಕುರಿತಾದ ಸ್ತಬ್ಧಚಿತ್ರ ಪಾತ್ರವಾಗಿದೆ.
“ಗಣರಾಜ್ಯೋತ್ಸವ ಪರೇಡ್ ನಲ್ಲಿ ‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ಕರ್ನಾಟಕದ ಟ್ಯಾಬ್ಲೋ ಎರಡನೇ ಸ್ಥಾನವನ್ನು ಗೆದ್ದಿರುವುದು ಹೆಮ್ಮೆಯ ವಿಷಯವಾಗಿದೆ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂ ಮಾಡಿದ್ದಾರೆ.
ಇದನ್ನೂ ಓದಿ:ಭಾರತೀಯ ಜ್ಞಾನಪೀಠದ 78ನೇ ವರ್ಷಾಚರಣೆ: ಫೆ.5ರಂದು “ವಾಕ್” ವೆಬಿನಾರ್ ಚರ್ಚಾ ಸರಣಿ
‘ಇದು ನಮ್ಮೆಲ್ಲರನ್ನು VocalForLocal ಆಗಲು ಪ್ರೇರೇಪಿಸಲಿ ಮತ್ತು ನಮ್ಮ ಕರಕುಶಲ ಮತ್ತು ಕುಶಲಕರ್ಮಿಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲಲಿ ಹಾಗು ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಸಹಾಯ ಮಾಡಲಿ’ ಎಂದಿದ್ದಾರೆ.