
Rice ಪೂರೈಕೆ ವಿಷಯದಲ್ಲಿ ಕೇಂದ್ರ ಏನು ಮಾಡುತ್ತದೋ ನೋಡೋಣ: ಮುನಿಯಪ್ಪ
Team Udayavani, Jun 2, 2023, 6:35 AM IST

ಬೆಂಗಳೂರು: ದೇಶ ವಿಶಾಲವಾಗಿದೆ. ಅಕ್ಕಿ ಬೆಳೆಯುವ ರಾಜ್ಯಗಳೂ ಸಾಕಷ್ಟಿವೆ. ಕೇಂದ್ರ ಸರಕಾರ ಏನು ಮಾಡುತ್ತದೋ ನೋಡೋಣ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ತಮ್ಮ ಕೊಠಡಿ ಪೂಜೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಜನ ಆಶೀರ್ವಾದ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಣಾಳಿಕೆಯಲ್ಲಿ ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ. 5 ಗ್ಯಾರಂಟಿಗಳ ಜಾರಿಯಲ್ಲಿ ಎರಡು ಮಾತಿಲ್ಲ ಎಂದರು.
ಅನ್ನ ಭಾಗ್ಯ ಯೋಜನೆ ಅನ್ವಯ 10 ಕೆ.ಜಿ. ಅಕ್ಕಿ ಕೊಡುವ ಯೋಜನೆ ಬಗ್ಗೆ ಶುಕ್ರವಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಸಭೆಯಲ್ಲಿ ಮುಖ್ಯಮಂತ್ರಿ ಈ ಬಗ್ಗೆ ಸಚಿವರ ಜತೆಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಪೂರ್ಣ ಮಾಹಿತಿ ಸಿಗಲಿದೆ ಎಂದರು.
ಹೆಚ್ಚುವರಿ ಅಕ್ಕಿ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು. ಏನಿದ್ದರೂ ದೇಶ ವಿಶಾಲವಾಗಿದೆ. ಕಾದು ನೋಡೋಣ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Miya Community: ಮುಂದಿನ 10ವರ್ಷ BJPಗೆ ಮಿಯಾ ಸಮುದಾಯದ ಮತಗಳ ಅಗತ್ಯವಿಲ್ಲ: ಅಸ್ಸಾಂ ಸಿಎಂ

Vitla: ಆರ್ಟ್ ಗ್ಯಾಲರಿ ಮಾಲಕ, ಎಲ್.ಐ.ಸಿ. ಏಜೆಂಟ್ ನಾರಾಯಣ ಕುಲಾಲ್ ಆತ್ಮಹತ್ಯೆ

Gandhi Jayanti: ಮಹಾತ್ಮ ಗಾಂಧಿಯವರ ಪ್ರಭಾವ ಜಾಗತಿಕವಾಗಿದೆ: ಪ್ರಧಾನಿ ಮೋದಿ

Gandhi Jayanthi: ಪತ್ರಿಕೋದ್ಯಮದ ಇತಿಹಾಸದ ಪುಟಗಳಲ್ಲಿ ಗಾಂಧೀಜಿ

Section 144: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ