ಇಸ್ರೋ ಜತೆ 100 ನವೋದ್ಯಮ ನೋಂದಣಿ

Team Udayavani, Nov 17, 2022, 10:30 PM IST

TDY-14

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯೊಂದಿಗೆ ನೂರು ನವೋದ್ಯಮಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ ಹತ್ತು ಕಂಪನಿಗಳು ಉಪಗ್ರಹ ಮತ್ತು ರಾಕೆಟ್‌ ನಿರ್ಮಾಣದಲ್ಲಿ ತೊಡಗಿಕೊಂಡಿವೆ ಎಂದು ಸಂಸ್ಥೆ ಅಧ್ಯಕ್ಷ ಎಸ್‌. ಸೋಮನಾಥ್‌ ತಿಳಿಸಿದರು.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮಿಟ್‌ನ ಎರಡನೇ ದಿನವಾದ ಗುರುವಾರ ಅವರು “ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ; ಜಾಗತಿಕ ಒಳಿತಿಗಾಗಿ ನಾವೀನ್ಯತೆ’ ವಿಚಾರ ಕುರಿತು ಉಪನ್ಯಾಸ ನೀಡಿದರು.

ಇಸ್ರೋ ಜತೆಗೆ ನೋಂದಾಯಿಸಿಕೊಂಡ ಈ ನೂರು ನವೋದ್ಯಮ (ಸ್ಟಾರ್ಟ್‌ಅಪ್‌)ಗಳಿಗೆ ಬಾಹ್ಯಾಕಾಶ ಸಂಶೋಧನೆಯ ಹಲವು ವಲಯಗಳಲ್ಲಿ ನೆರವು ನೀಡಲಾಗುತ್ತಿದೆ. ಆರಂಭದಿಂದ ಹಿಡಿದು ಅಂತ್ಯದವರೆಗೂ ಪೋಷಣೆ ಮಾಡಲಿದೆ. ಸದ್ಯಕ್ಕೆ 10 ಕಂಪನಿಗಳು ಉಪಗ್ರಹ ಮತ್ತು ರಾಕೆಟ್‌ ನಿರ್ಮಾಣದಲ್ಲಿ ತೊಡಗಿಕೊಂಡಿವೆ ಎಂದು ಅವರು ಹೇಳಿದರು.

ಕೆಲವೇ ತಿಂಗಳಲ್ಲಿ ಚಂದ್ರಯಾನ-3 ಕಕ್ಷೆಗೆ- ಇಸ್ರೋ: ಭಾರತದ ಹಲವು ಕಂಪನಿಗಳಿಗೆ ಬಾಹ್ಯಾಕಾಶ ವಲಯದಲ್ಲಿ ಮಹತ್ವದ ಪಾತ್ರ ವಹಿಸುವ ಶಕ್ತಿ ಇದೆ. ಇಸ್ರೋ ಇವುಗಳಿಗೆ ಎಲ್ಲ ಹಂತಗಳಲ್ಲಿ ನೆರವು ನೀಡಲಾಗುತ್ತಿದೆ. ಈ ಮಧ್ಯೆ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಇನ್ನು ಕೆಲವೇ ತಿಂಗಳಲ್ಲಿ ಕಕ್ಷೆಯನ್ನು ಸೇರಲಿದೆ. ಈ ನಿಟ್ಟಿನಲ್ಲಿ ಇಸ್ರೋ, ಅಮೆರಿಕದ ನಾಸಾ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಈ ಯೋಜನೆಯ ರಾಕೆಟ್‌ನಲ್ಲಿ ಬಳಸಲ್ಪಟ್ಟ ಕಂಪ್ಯೂಟರ್‌ ಅನ್ನು ಭಾರತದÇÉೇ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಗತ್ತಿನ ಎಲ್ಲ ಕಡೆಗಳಲ್ಲೂ ಈಗ ಬಾಹ್ಯಾಕಾಶ ಪ್ರವಾಸೋದ್ಯಮ ಜನಪ್ರಿಯವಾಗುತ್ತಿದೆ. ಇಸ್ರೋ ಸಂಸ್ಥೆಯು ದೇಶದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಮತ್ತು ಆಧುನಿಕ ತಯಾರಿಕೆ ವ್ಯವಸ್ಥೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಉಳಿದಂತೆ ಉಪಗ್ರಹ ತಂತ್ರಜ್ಞಾನವನ್ನು ಮತ್ತೆ ಮುಂಚೂಣಿಗೆ ತರುವ ಪ್ರಯತ್ನಗಳು ನಡೆದಿವೆ. ಅಲ್ಲದೆ, ಪರಿಸರಸ್ನೇಹಿ ಮತ್ತು ಹೈಬ್ರಿಡ್‌ ಪ್ರೊಪೊಲÒನ್‌ (ನೋದನ), ಸಣ್ಣ ರಾಕೆಟ್‌ಗಳ ಉಡಾವಣೆ, ಕಾರ್ಬನ್‌ ಫೈಬರ್‌ ತಂತ್ರಜ್ಞಾನ, ರೋಬೋಟಿಕÕ…, ಡ್ರೋನ್‌, ಕ್ವಾಂಟ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಸ್ರೋ ಛಾಪು ಮೂಡಿಸುತ್ತಿದೆ ಎಂದು ಸೋಮನಾಥ್‌ ವಿವರಿಸಿದರು.

ಟಾಪ್ ನ್ಯೂಸ್

ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2.2ಕ್ಕಿಳಿಕೆ; ಆರ್‌ಬಿಐ

ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2.2ಕ್ಕಿಳಿಕೆ; ಆರ್‌ಬಿಐ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಸೆನ್ಸೆಕ್ಸ್‌ ಏರಿಕೆ: ಹೂಡಿಕೆದಾರರ ಮೊಗದಲ್ಲಿ ನಗು

ಸೆನ್ಸೆಕ್ಸ್‌ ಏರಿಕೆ: ಹೂಡಿಕೆದಾರರ ಮೊಗದಲ್ಲಿ ನಗು

private buas

ಮಂಗಳೂರು ಸ್ಟೇಟ್‌ಬ್ಯಾಂಕ್‌: ಇಂದಿನಿಂದ ಸರ್ವಿಸ್‌ ನಿಲ್ದಾಣದಿಂದಲೇ ಸಿಟಿ ಬಸ್‌ ಸಂಚಾರ

ಹೈಕಮಾಂಡ್‌ ಸೂಚನೆ ಮೀರಿದರೇ ಬಿಎಸ್‌ವೈ?

ಹೈಕಮಾಂಡ್‌ ಸೂಚನೆ ಮೀರಿದರೇ ಬಿಎಸ್‌ವೈ?

ಸಿದ್ದು 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿ: ಪ್ರಹ್ಲಾದ ಜೋಶಿ

ಸಿದ್ದು 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿ: ಪ್ರಹ್ಲಾದ ಜೋಶಿ

ಪುನಶ್ಚೇತನದಲ್ಲೊಂದು ವಿನೂತನ ಮೈಲುಗಲ್ಲು

ಪುನಶ್ಚೇತನದಲ್ಲೊಂದು ವಿನೂತನ ಮೈಲುಗಲ್ಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಮುಸ್ಲಿಮರ ಮೀಸಲು ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ;  ಜಿಲ್ಲೆಗಳಲ್ಲೂ ನಡೆದ ಕೋರ್‌ ಕಮಿಟಿ ಸಭೆ

ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ;  ಜಿಲ್ಲೆಗಳಲ್ಲೂ ನಡೆದ ಕೋರ್‌ ಕಮಿಟಿ ಸಭೆ

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ

ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ

ಟೆಂಡರ್‌ಗಳ ತಡೆಗೆ ಕಾಂಗ್ರೆಸ್‌ ಆಗ್ರಹ

ಟೆಂಡರ್‌ಗಳ ತಡೆಗೆ ಕಾಂಗ್ರೆಸ್‌ ಆಗ್ರಹ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ