
ಕಬ್ಬು ಬೆಳೆಗಾರರ ರೇಟ್ ಚಾರ್ಜ್ ಬಗ್ಗೆ ಸಚಿವ ಮುನೇನಕೊಪ್ಪ ಮಹತ್ವದ ಸಭೆ
Team Udayavani, Nov 10, 2022, 6:16 PM IST

ಬೆಂಗಳೂರು: ಕಬ್ಬು ಇಲಾಖೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಕ್ಕರೆ ನಿಯಂತ್ರಣ ಮಂಡಳಿ, ರೈತ ಹೋರಾಟಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರನ್ನು (ಸರ್ಕಾರಿ ಹಾಗೂ ಖಾಸಗಿ) ಒಟ್ಟುಗೂಡಿಸಿ ಸಕ್ಕರೆ ಸಚಿವರಾದ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ ಅವರು ಕಬ್ಬು ಬೆಳೆಗಾರರ ರೇಟ್ ಚಾರ್ಜ್ ಬಗ್ಗೆ ಇಂದು (ನ.10) ವಿಕಾಸಸೌಧದಲ್ಲಿ ಸಭೆ ನಡೆಸಿದರು.
ಕಬ್ಬು ಕಟಾವು ದರ ಹೆಚ್ಚಳ ಬಗ್ಗೆ, ಎಫ್ ಆರ್ ಪಿ ಹೆಚ್ಚಿಸಬೇಕು ಎನ್ನುವ ಬಗ್ಗೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಬಳಿಕ, ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪ್ರಕಾರ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯು ಕೈಗೊಳ್ಳುವ ನಿರ್ಣಯಗಳಿಗೆ ಬದ್ಧರಾಗಿ ಇರುವುದಾಗಿ ವಿವಿಧ ಸಂಘ, ಕಬ್ಬು ಬೆಳೆಗಾರರು ಒಪ್ಪಿಕೊಂಡಿದ್ದಾರೆ.
ಸಮಿತಿಯು ಸಕ್ಕರೆ ಹಾಗೂ ಸಕ್ಕರೆ ಸಹ ಉತ್ಪನ್ನಗಳ ದರವನ್ನು ಹೆಚ್ಚಿಸಿ, ರೈತರು ಲಾಭವನ್ನು ಹಂಚಿಕೊಳ್ಳಬೇಕು ಎಂಬ ಸಂಬಂಧ ವೈಜ್ಞಾನಿಕ ಅಧ್ಯಯನ ನಡೆಸಿ ಇನ್ನು ಒಂದು ವಾರದೊಳಗೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, 10 ದಿನಗಳೊಳಗಾಗಿ ಒಂದು ನಿರ್ಣಯವನ್ನು ಘೋಷಣೆ ಮಾಡಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.
ಸರ್ಕಾರ ರೈತರ ಪರವಾಗಿದೆ
ಸಕ್ಕರೆ ಸಚಿವರು ಮಾತನಾಡಿ, “ದೇಶದಲ್ಲಿಯೇ ಕಬ್ಬು ಬೆಳೆಗಾರರಿಗೆ 100% ಪಾವತಿಯನ್ನು ಮಾಡುತ್ತಿರುವ ರಾಜ್ಯ ಕರ್ನಾಟಕ. ರೈತರು ಪಾವತಿ ಸಂಬಂಧವಾಗಿ ರಸ್ತೆಗಿಳಿಯದಂತೆ ಸತತ ಎರಡು ವರ್ಷಗಳಿಂದಲೂ ಸರ್ಕಾರ ಕ್ರಮ ವಹಿಸಿದೆ. ಈಗ ರೈತರು ಕೇಳುತ್ತಿರುವಂತೆ ಎಫ್ ಆರ್ ಪಿ ದರಕ್ಕಿಂತಲೂ ಹೆಚ್ಚು ಮೊತ್ತವನ್ನು ಕೊಡಿಸಲು ಸರ್ಕಾರ ಶ್ರಮಿಸುತ್ತಿದೆ. ಕಾರ್ಖಾನೆ ಮಾಲೀಕರಿಗೂ ತೊಂದರೆಯಾಗದ ರೀತಿಯಲ್ಲಿ ರೈತರಿಗೂ ಹಿತ ಎನಿಸುವಂತೆ ಒಂದು ನಿರ್ಣಯವನ್ನು ಕೈಗೊಳ್ಳಲಾಗುವುದು. ರೈತರು ಸಹಕರಿಸಬೇಕು. ಸರ್ಕಾರ ರೈತರ ಪರವಾಗಿದೆ. ರೈತರ ಪರವಾಗಿಯೇ ನಿರ್ಣಯ ಕೈಗೊಳ್ಳಲಾಗುವುದು. ಕಾದು ನೋಡಿ” ಎಂದು ರೈತರ ಬಳಿ ಮನವಿ ಮಾಡಿದರು.
“20 ತಾರೀಕಿನೊಳಗೆ ರೈತರಿಗೆ ಸಿಹಿ ಸುದ್ದಿ ಬರಲಿದೆ. ಅಲ್ಲದೆ, ಕಬ್ಬು ಬೆಳೆಗಾರರಿಗೆ ಕಾಲ್ ಸೆಂಟರ್ ತೆರೆಯಲಾಗಿದೆ. ರೈತರಿಗೆ ಪಾರದರ್ಶಕ ರೀತಿಯಲ್ಲಿ ಪಾವತಿ ಆಗುತ್ತಿದೆ. ಎಲ್ಲಾ ಕಬ್ಬು ಬೆಳೆಗಾರರ ಪರವಾಗಿ ನಮ್ಮ ನಿರ್ಣಯ ಇರಲಿದೆ. ನಮ್ಮ ಸರ್ಕಾರ ಕಾರ್ಖಾನೆ ಮತ್ತು ರೈತರಿಗೆ ರಕ್ಷಣೆ ಮಾಡುತ್ತಿದೆ. ಸಕ್ಕರೆ ಇಲಾಖೆಯಲ್ಲಿ ಮುಂದಿನ ದಿನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಲಿವೆ” ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಮತ ಎಣಿಕೆಗೆ ಎರಡು ದಿನ ಬೇಕೆ ?! ;ಏನು ಕಾಮೆಂಟ್ಸ್ ಗಳು?! ; ಕಿಡಿ ಕಾರಿದ ಉಪೇಂದ್ರ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಕಲಬುರಗಿ: ಶೇ. 50 ರಷ್ಟು ಮತಗಟ್ಟೆಗಳಿಗೆ ಸಿಸಿ ಕ್ಯಾಮರಾ: ಡಿಸಿ ಗುರುಕರ್
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್