ಕಾಲುಬಾಯಿ ರೋಗಕ್ಕೆ ಕೇಂದ್ರದಿಂದ 50 ಲಕ್ಷ ಡೋಸ್ ಲಸಿಕೆ ಪೂರೈಕೆ : ಸಚಿವ ಪ್ರಭು ಚವ್ಹಾಣ್


Team Udayavani, Oct 19, 2021, 4:15 PM IST

prabhu chauhan

ಬೆಂಗಳೂರು: ಕಾಲುಬಾಯಿ ರೋಗಕ್ಕೆ ಕೇಂದ್ರದಿಂದ 50 ಲಕ್ಷ ಡೋಸ್ ಮಂಜೂರಾಗಿದ್ದು, ಮೊದಲನೇ ಹಂತದಲ್ಲಿ ಕೇಂದ್ರದಿಂದ 25 ಲಕ್ಷ ಲಸಿಕೆ ಪೂರೈಕೆಯಾಗುತ್ತಿದೆ. ಲಸಿಕೆಯನ್ನು ಆದ್ಯತೆಯ ಮೇಲೆ ಎಲ್ಲ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ದಕ್ಷಿಣ ಭಾಗದಲ್ಲಿ ಕಾಲುಬಾಯಿ ರೋಗ ಹೆಚ್ಚು ಕಂಡು ಬಂದಿದ್ದು ಈಗಾಗಲೇ ರಿಂಗ್ ವ್ಯಾಕ್ಸಿಂಗ್ ಮೂಲಕ ರೋಗವನ್ನು ಹತೋಟಿಗೆ ತರಲಾಗಿದೆ. ಮೊದಲನೇ ಹಂತದಲ್ಲಿ ಬಳ್ಳಾರಿ, ಯಾದಗಿರಿ, ಗುಲ್ಬರ್ಗಾ, ರಾಯಚೂರು, ಬೀದರ್ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕಾಲುಬಾಯಿ ರೋಗ ಹೆಚ್ಚು ಕಂಡುಬರುತ್ತಿರುವ ಜಿಲ್ಲೆಗಳಲ್ಲಿ ಸ್ಯಾಂಪಲ್ ಸಂಗ್ರಹಣೆ ಮಾಡಿ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷೆ ನೀಡಲಾಗಿತ್ತು, ಕರ್ನಾಟಕದಲ್ಲಿ ಓ ಮಾದರಿಯ ವೈರಸ್ ಕಂಡುಬಂದಿದೆ. ಜ್ವರ ಬಾದೆಯಿಂದ ಕರುಗಳು ಈ ರೋಗಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ ಇರುವುದರಿಂದ ಪಶುಪಾಲಕರು ಕರುಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ ಎಂದು ತಿಳಿಸಿದ್ದಾರೆ. ಎರಡನೇ ಹಂತದಲ್ಲಿ 27 ಲಕ್ಷ ಪೂರೈಕೆ ಆಗುತ್ತಿದ್ದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ

ಸದ್ಯ ರಾಜ್ಯದ 13 ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ ರೋಗೋದ್ರೇಕ ಕಂಡುಬಂದ 5 ಕಿಮೀ ವ್ಯಾಪಿಯಲ್ಲಿ ಲಸಿಕೆ ನೀಡಲಾಗುತ್ತಿದೆ.

ನೊಂದ ರೈತರಿಂದ ಸಚಿವರಿಗೆ ಕರೆ: ಗದಗ್, ರಾಯಚೂರ್ ಹಾಗೂ ಮೈಸೂರು ಭಾಗದಿಂದ ಕೆಲ ರೈತರು ಹಾಗೂ ಪಶುಪಾಲಕರು ಸಚಿವರಿಗೆ ಕರೆ ಮಾಡಿ ಜಾನುವಾರುಗಳು ಅನುಭವಿಸುತ್ತಿರುವ ನೋವನ್ನು ತೋಡಿಕೊಂಡಿದ್ದಾರೆ. ಪಶುವೈದ್ಯಾಧಿಕಾರಿಗಳು ಕಾಲುಬಾಯಿ ರೋಗದಿಂದ ನರಳುತ್ತಿರುವ ಜಾನುವಾರುಗಳಿಗೆ ತುರ್ತಾಗಿ ಚಿಕಿತ್ಸೆ ನೀಡದಿರುವ ಬಗ್ಗೆ ರೈತರು ಸಚಿವರಿಗೆ ತಿಳಿಸಿದ್ದಾರೆ.

ಭರವಸೆ ನೀಡಿದ ಸಚಿವರು: ರೈತರು ಹಾಗೂ ಜಾನುವಾರು ಸಾಕಣೆದಾರರು ಯಾವುದೇ ರೀತಿಯಿಂದ ಆತಂಕಪಡುವ ಅಗತ್ಯವಿಲ್ಲ ಕಾಲುಬಾಯಿ ರೋಗಕ್ಕೆ ಇಲಾಖೆಯಲ್ಲಿ ಲಸಿಕೆ ಲಭ್ಯವಿದ್ದು ತೀವ್ರವಾಗಿ ಅವುಗಳನ್ನು ಜಾನುವಾರುಗಳಿಗೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಾನುವಾರುಗಳ ಆರೋಗ್ಯ ಕಾಪಾಡುವುದು ನಮ್ಮ ಇಲಾಖೆಯ ಹೊಣೆ. ಅಧಿಕಾರಿಗಳು ಕೆಲ ಜಿಲ್ಲೆಗಳಲ್ಲಿ ನಿರ್ಲಕ್ಷ್ಯ ತೋರಿದ್ದು ಕಂಡು ಬಂದಿದೆ ಮುಂದಿನ ಸಭೆಯಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ

ಟಾಪ್ ನ್ಯೂಸ್

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಗಾಲೆ ಟೆಸ್ಟ್‌: ಲಂಕೆಗೆ ಸ್ಪಿನ್ನರ್‌ಗಳಿಂದ ಕಡಿವಾಣ

ಗಾಲೆ ಟೆಸ್ಟ್‌: ಲಂಕೆಗೆ ಸ್ಪಿನ್ನರ್‌ಗಳಿಂದ ಕಡಿವಾಣ

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆ

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಮುಷ್ಕರ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಮುಷ್ಕರ

BGML ಜಮೀನು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸಚಿವ ‌ನಿರಾಣಿ ಸೂಚನೆ

BGML ಜಮೀನು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸಚಿವ ‌ನಿರಾಣಿ ಸೂಚನೆ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಕುಣಿಗಲ್ : ನೀರಿನಲ್ಲಿ ಕೊಚ್ಚಿಹೋದ ನಾಲ್ವರ ಮೃತದೇಹ ಪತ್ತೆ, ಮೂರು ದಿನದ ಕಾರ್ಯಚರಣೆ ಮುಕ್ತಾಯ

ಬಿಡಿಎಗೆ 15 ಸಾವಿರ ಕೋಟಿ ಸಂಗ್ರಹದ ಗುರಿ: ವಿಶ್ವನಾಥ್

ಬಿಡಿಎಗೆ 15 ಸಾವಿರ ಕೋಟಿ ಸಂಗ್ರಹದ ಗುರಿ: ವಿಶ್ವನಾಥ್

gangavati crime

ನಿಯಮ ಉಲ್ಲಂಘನೆ : ಬೀಜ ಸಂಸ್ಕರಣಾ ಘಟಕಗಳಿಗೆ ಅಧಿಕಾರಿಗಳಿಂದ ನೋಟೀಸ್

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಗಾಲೆ ಟೆಸ್ಟ್‌: ಲಂಕೆಗೆ ಸ್ಪಿನ್ನರ್‌ಗಳಿಂದ ಕಡಿವಾಣ

ಗಾಲೆ ಟೆಸ್ಟ್‌: ಲಂಕೆಗೆ ಸ್ಪಿನ್ನರ್‌ಗಳಿಂದ ಕಡಿವಾಣ

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆ

2ನೇ ತ್ತೈಮಾಸಿಕ ಜಿಡಿಪಿ ಚೇತರಿಕೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.